ಹುಡುಗಿ ವಿಚಾರಕ್ಕೆ ಬಾಲಿವುಡ್ ನಟನಿಗೆ ಥಳಿಸಲು ಬಂದಿದ್ದ 25 ಹುಡುಗರು; ಕೈಮುಗಿದ ಬೇಡಿಕೊಂಡಿದ್ದ ಹೀರೋ
Rajkummar Rao ಇಂದು ಶಿಸ್ತಿನ ನಟ ಆಗಿರುವ ರಾಜ್ಕುಮಾರ್ ರಾವ್ ಅವರು ಶಾಲೆಯ ದಿನಗಳಲ್ಲಿ ರೌಡಿ ರೀತಿ ವರ್ತಿಸುತ್ತಿದ್ದರು. ಆದರೆ 11ನೇ ತರಗತಿಗೆ ಬಂದಾಗ ಅವರು ಬದಲಾದರು.

ಕಾಲೇಜು ದಿನಗಳಲ್ಲಿ ಎಲ್ಲರೂ ಇಂಥ ಘಟನೆಯನ್ನು ಹತ್ತಿರದಿಂದ ನೋಡಿರುತ್ತಾರೆ. ಒಂದು ಹುಡುಗಿಯ ಹಿಂದೆ ಹಲವು ಹುಡುಗರು ಬಿದ್ದರೆ ಅಲ್ಲಿ ಹೊಡೆದಾಟ ನಡೆಯುವುದು ಗ್ಯಾರಂಟಿ. ಬಾಲಿವುಡ್ ನಟ ರಾಜ್ಕುಮಾರ್ ರಾವ್ ಅವರ ಬದುಕಿನಲ್ಲೂ ಇಂಥದ್ದೊಂದು ಘಟನೆ ನಡೆದಿತ್ತು. ಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಅವರು ಆ ಬಗ್ಗೆ ಮಾತನಾಡಿದ್ದರು. ಇಂದು (ಆ.31) ರಾಜ್ಕುಮಾರ್ ರಾವ್ ಜನ್ಮದಿನ. ಈ ಪ್ರಯುಕ್ತ ಆ ಹಳೇ ಘಟನೆಯನ್ನು ಮತ್ತೆ ನೆನಪಿಸಿಕೊಳ್ಳಲಾಗುತ್ತಿದೆ.
ಇಂದು ಶಿಸ್ತಿನ ನಟ ಆಗಿರುವ ರಾಜ್ಕುಮಾರ್ ರಾವ್ ಅವರು ಶಾಲೆಯ ದಿನಗಳಲ್ಲಿ ರೌಡಿ ರೀತಿ ವರ್ತಿಸುತ್ತಿದ್ದರು. ಆದರೆ 11ನೇ ತರಗತಿಗೆ ಬಂದಾಗ ಅವರು ಬದಲಾದರು. ಅವರು ಅಪ್ಟಟ ಶಾರುಖ್ ಖಾನ್ ಅಭಿಮಾನಿ ಆಗಿದ್ದರು. ‘ಕುಚ್ ಕುಚ್ ಹೋತಾ ಹೈ’ ಸಿನಿಮಾ ಶೈಲಿಯಲ್ಲೇ ಕಾಲೇಜಿನ ಬಾಸ್ಕೆಟ್ ಬಾಲ್ ಮೈದಾನದಲ್ಲಿ ಅವರು ಹುಡುಗಿಯೊಬ್ಬಳನ್ನು ನೋಡಿ ಫಿದಾ ಆದರಂತೆ. ಮನದಲ್ಲಿ ಅವರಿಗೆ ಪ್ರೀತಿ ಕೂಡ ಚಿಗುರೊಡೆದಿತ್ತು. ಆಕೆಯ ಜೊತೆ ಅವರು ಡೇಟಿಂಗ್ ಮಾಡಲು ಶುರುಮಾಡಿದರು. ಆಗಲೇ ಶುರುವಾಗಿದ್ದು ಕಿರಿಕ್.
ದುರಂತ ಎಂದರೆ ಆ ಹುಡುಗಿಗೆ ಈಗಾಗಲೇ ಒಬ್ಬ ಬಾಯ್ ಫ್ರೆಂಡ್ ಇದ್ದ. ರಾಜ್ಕುಮಾರ್ ಜೊತೆ ಆಕೆ ಸುತ್ತುವುದನ್ನು ನೋಡಿದ ಆತ 25 ಹುಡುಗರನ್ನು ಕರೆದುಕೊಂಡು ಬಂದು ರಾಜ್ಕುಮಾರ್ಗೆ ಥಳಿಸಲು ಶುರುಮಾಡಿದ. ಹೀರೋ ಆಗಬೇಕು ಎಂದು ಕನಸು ಕಂಡಿದ್ದ ರಾಜ್ಕುಮಾರ್ಗೆ ಆಗ ಕಾಡುತ್ತಿದ್ದದ್ದು ಮುಖದ ಚಿಂತೆ. ‘ದಯವಿಟ್ಟು ಮುಖಕ್ಕೆ ಹೊಡೆಯಬೇಡಿ. ನಾನು ಸಿನಿಮಾ ನಟ ಆಗಬೇಕು’ ಎಂದು ಅವರು ಕೂಗಿದ್ದರು!
ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಜ್ಕುಮಾರ್ ರಾವ್ ಅವರಿಗೆ ಅಭಿಮಾನಿಗಳು, ಸೇಹ್ನಿತರು, ಸೆಲೆಬ್ರಿಟಿಗಳು ಶುಭಾಶಯ ಕೋರುತ್ತಿದ್ದಾರೆ. ಬಾಲ್ಯದಲ್ಲಿ ಕಂಡ ಕನಸಿನಂತೆಯೇ ಅವರು ಬಾಲಿವುಡ್ನಲ್ಲಿ ಸ್ಟಾರ್ ನಟನಾಗಿದ್ದಾರೆ. ಸಿಟಿ ಲೈಟ್ಸ್, ಬರೇಲಿ ಕಿ ಬರ್ಫಿ, ಶಾಹಿದ್ ಮುಂತಾದ ಸಿನಿಮಾಗಳಲ್ಲಿನ ಅವರ ನಟನೆಗೆ ಸಿನಿಪ್ರಿಯರು ಫಿದಾ ಆಗಿದ್ದಾರೆ. ಸದ್ಯ ಹಲವು ಪ್ರಾಜೆಕ್ಟ್ಗಳಲ್ಲಿ ರಾಜ್ಕುಮಾರ್ ರಾವ್ ಬ್ಯುಸಿ ಆಗಿದ್ದಾರೆ. ಓಟಿಟಿಯಿಂದಲೂ ಅವರಿಗೆ ಅನೇಕ ಆಫರ್ಗಳು ಬರುತ್ತಿವೆ. ಜನ್ಮದಿನದ ಅಂಗವಾಗಿ ಅವರಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಬರ್ತ್ಡೇ ವಿಶ್ಗಳು ಹರಿದು ಬರುತ್ತಿವೆ.
ಇದನ್ನೂ ಓದಿ:
ಶೂಟಿಂಗ್ ವೇಳೆಯೇ ಬಾಲಿವುಡ್ ಖ್ಯಾತ ನಿರ್ದೇಶಕನಿಗೆ ತಾಲಿಬಾನಿಗಳಿಂದ ಬಂತು ಜೀವ ಬೆದರಿಕೆ
ಶೀಘ್ರವೇ ಹಾಲಿವುಡ್ಗೆ ಹಾರಲಿದ್ದಾರೆ ಕಂಗನಾ? ಬಾಲಿವುಡ್ ಅಂಗಳದಲ್ಲಿ ಹೊಸ ಸುದ್ದಿ