ನಟ ದಿಲೀಪ್​ ಕುಮಾರ್​ ಪತ್ನಿ ಸೈರಾ ಬಾನು ಆರೋಗ್ಯ ಸ್ಥಿತಿ ಗಂಭೀರ; ಐಸಿಯುನಲ್ಲಿ ಚಿಕಿತ್ಸೆ

ಸೈರಾ ಹಾಗೂ ದಿಲೀಪ್​ ಒಟ್ಟು 54 ವರ್ಷಗಳ ಕಾಲ ಒಟ್ಟಾಗಿ ಸಂಸಾರ ನಡೆಸಿದ್ದಾರೆ. ಅನೇಕರಿಗೆ ಇವರ ದಾಂಪತ್ಯ ಮಾದರಿ ಆಗಿದೆ. ದಿಲೀಪ್​ ಮೃತಪಟ್ಟ ನಂತರದಲ್ಲಿ ಸೈರಾ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನಲಾಗಿದೆ.

ನಟ ದಿಲೀಪ್​ ಕುಮಾರ್​ ಪತ್ನಿ ಸೈರಾ ಬಾನು ಆರೋಗ್ಯ ಸ್ಥಿತಿ ಗಂಭೀರ; ಐಸಿಯುನಲ್ಲಿ ಚಿಕಿತ್ಸೆ
ನಟ ದಿಲೀಪ್​ ಕುಮಾರ್​ ಹಾಗೂ ಪತ್ನಿ ಸೈರಾ ಬಾನು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 01, 2021 | 2:42 PM

ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದ ನಟ ದಿಲೀಪ್​ ಕುಮಾರ್​ ಪತ್ನಿ ಸೈರಾ ಬಾನು ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ರಕ್ತದೊತ್ತಡ ಸಮಸ್ಯೆಗೆ ಸಂಬಂಧಿಸಿ ಅವರನ್ನು ಮೂರು ದಿನಗಳ ಹಿಂದೆ ಮುಂಬೈನ ಹಿಂದುಜಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುಗೆ ಶಿಫ್ಟ್​ ಮಾಡಲಾಗಿದೆ.

ಸೈರಾ ಹಾಗೂ ದಿಲೀಪ್​ ಒಟ್ಟು 54 ವರ್ಷಗಳ ಕಾಲ ಒಟ್ಟಾಗಿ ಸಂಸಾರ ನಡೆಸಿದ್ದಾರೆ. ಅನೇಕರಿಗೆ ಇವರ ದಾಂಪತ್ಯ ಮಾದರಿ ಆಗಿದೆ. ದಿಲೀಪ್​ ಮೃತಪಟ್ಟ ನಂತರದಲ್ಲಿ ಸೈರಾ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನಲಾಗಿದೆ. ಈಗ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಲಿವುಡ್​ನಲ್ಲಿ ದಶಕಗಳ ಕಾಲ ಸ್ಟಾರ್​ ಆಗಿ ಮೆರೆದ ದಿಲೀಪ್​ ಕುಮಾರ್ ಅವರು ಬುಧವಾರ ಜು.7ರಂದು ನಿಧನರಾದರು. ಹಲವಾರು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ಅವರ ಮೂಲ ಹೆಸರು ದಿಲೀಪ್​ ಕುಮಾರ್​ ಅಲ್ಲವೇ ಅಲ್ಲ. ಈಗ ಪಾಕಿಸ್ತಾನದಲ್ಲಿರುವ ಪೇಶಾವರದಲ್ಲಿ 1922ರಲ್ಲಿ ಜನಿಸಿದ ಅವರಿಗೆ ಕುಟುಂಬದವರು ಇಟ್ಟ ಹೆಸರು ಮೊಹಮ್ಮದ್​ ಯೂಸೂಫ್​ ಖಾನ್​. ಆದರೆ ಚಿತ್ರರಂಗಕ್ಕೆ ಬರುವಾಗ ಅವರು ದಿಲೀಪ್​ ಕುಮಾರ್​ ಎಂದು ಹೆಸರು ಬದಲಾಯಿಸಿಕೊಂಡರು. 1944ರಲ್ಲಿ ತೆರೆಕಂಡ ‘ಜ್ವಾರ್​ ಭಾಟ’ ದಿಲೀಪ್​ ನಟನೆಯ ಮೊದಲ ಸಿನಿಮಾ. ಆ ಚಿತ್ರದ ನಿರ್ಮಾಪಕಿ ದೇವಿಕಾ ರಾಣಿ ಅವರೇ ಯೂಸೂಫ್​ ಖಾನ್​ಗೆ ಹೆಸರು ಬದಲಾಯಿಸಿಕೊಳ್ಳುವ ಸಲಹೆ ನೀಡಿದ್ದರು.

ಮೊದಲ ಸಿನಿಮಾ ‘ಜ್ವಾರ್​ ಭಾಟಾ’ದಿಂದ ದಿಲೀಪ್​ ಕುಮಾರ್​ಗೆ ದೊಡ್ಡ ಯಶಸ್ಸು ಸಿಕ್ಕಿತ್ತು. ಅನೇಕ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ದಿಲೀಪ್​ ಅಭಿನಯ ಇಷ್ಟವಾಯಿತು. ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ದಶಕದಲ್ಲಿ ದಿಲೀಪ್​ ಕುಮಾರ್​ ಸ್ಟಾರ್​ ಆದರು. ಎರಡನೇ ದಶಕದಲ್ಲಿ ಸೂಪರ್​ ಸ್ಟಾರ್​ ಆಗಿ ಮಿಂಚಿದರು. ದೇವದಾಸ್​, ನಯಾ ದೌರ್​, ಮಧುಮತಿ, ಕೊಹಿನೂರ್​, ಮುಘಲ್​-ಏ-ಆಜಮ್​ ಮುಂತಾದ ಗಮನಾರ್ಹ ಚಿತ್ರಗಳಲ್ಲಿ ದಿಲೀಪ್​ ಕುಮಾರ್​ ನಟಿಸಿದರು. 1998ರಲ್ಲಿ ತೆರೆಕಂಡ ‘ಖಿಲಾ’ ದಿಲೀಪ್​ ನಟನೆಯ ಕೊನೇ ಸಿನಿಮಾ.

ಇದನ್ನೂ ಓದಿ: ಡಾ. ರಾಜ್​ಕುಮಾರ್​ ಜತೆ ದಿಲೀಪ್​ ಕುಮಾರ್​ಗೆ ಇದ್ದ ಒಡನಾಟ ಎಂಥದ್ದು? ಫೋಟೋ ಸಹಿತ ವಿವರಿಸಿದ ಪುನೀತ್​

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ