ಬಾಲಿವುಡ್ನ ‘ಛಾವ’ ಸಿನಿಮಾದ ಕ್ರೇಜ್ ಜೋರಾಗಿದೆ. ಎಲ್ಲ ಕಡೆಗಳಲ್ಲಿ ಈ ಸಿನಿಮಾ ಅತ್ಯುತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಆಗುತ್ತಿದೆ. ರಶ್ಮಿಕಾ ಮಂದಣ್ಣ, ವಿಕ್ಕಿ ಕೌಶಲ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಸಿನಿಮಾ ನೋಡಿದ ಎಲ್ಲರೂ ಪಾಸಿಟಿವ್ ಪ್ರತಿಕ್ರಿಯೆ ನೀಡುತ್ತಿದ್ದು, ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಈ ನಡುವೆ ಕೆಲವರು ಅತಿರೇಕದ ವರ್ತನೆ ತೋರಿಸುತ್ತಿದ್ದಾರೆ. ಚಿತ್ರಮಂದಿರದ ಪರದೆಯನ್ನೇ ಹರಿದು ಹಾಕಲಾಗಿದೆ.
ಗುಜರಾಜ್ನ ಚಿತ್ರಮಂದಿರವೊಂದರಲ್ಲಿ ‘ಛಾವ’ ಸಿನಿಮಾ ಪ್ರದರ್ಶನ ಕಾಣುತ್ತಿತ್ತು. ಈ ವೇಳೆ ಓರ್ವ ಪ್ರೇಕ್ಷಕ ಮದ್ಯಪಾನ ಮಾಡಿಕೊಂಡು ಬಂದಿದ್ದ. ಸಿನಿಮಾ ನೋಡಿ ಉದ್ವೇಗಕ್ಕೆ ಒಳಗಾದ ಆತ ಪರದೆಯ ಬಳಿ ಹೋಗಿ ಪುಂಡಾಟ ಮೆರೆದಿದ್ದಾನೆ. ಸಿನಿಮಾ ಪ್ರದರ್ಶನ ಆಗುವಾಗಲೇ ಚಿತ್ರಮಂದಿರದ ಪರದೆಯನ್ನು ಹರಿದು ಹಾಕಿದ್ದಾನೆ. ಬಳಿಕ ಚಿತ್ರಮಂದಿರದ ಸಿಬ್ಬಂದಿ ಬಂದು ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಕಳೆದ ಭಾನುವಾರ (ಫೆಬ್ರವರಿ 16) ಈ ಘಟನೆ ನಡೆದಿದೆ ಎನ್ನಲಾಗಿದೆ. ಪರದೆ ಹರಿದು ಹಾಕಿದ ವ್ಯಕ್ತಿಯನ್ನು ಜಯೇಶ್ ವಾಸವ ಎಂದು ಗುರುತಿಸಲಾಗಿದೆ.
How did they manage to bring a horse inside lmaooo 😂 pic.twitter.com/5rs3ExEKgB
— ban youtube (@doug_1399) February 17, 2025
ಇದೇ ರೀತಿಯ ಇನ್ನೊಂದು ಘಟನೆ ಕೂಡ ನಡೆದಿದೆ. ಸಿನಿಮಾ ನೋಡಲು ಬಂದ ಅಭಿಮಾನಿಯೊಬ್ಬ ಛತ್ರಪತಿ ಶಂಭಾಜಿ ಮಹಾರಾಜ್ ರೀತಿ ವೇಷ ಧರಿಸಿಕೊಂಡು, ಕುದುರೆ ಏರಿ ಚಿತ್ರಮಂದಿರದ ಒಳಗೆ ಪ್ರವೇಶಿಸಿದ್ದಾನೆ. ಆತನ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಮಹಾರಾಣಿ ಆಗಿದ್ದಕ್ಕೆ ರಶ್ಮಿಕಾ ಮಂದಣ್ಣಗೆ ಖುಷಿಯೋ ಖುಷಿ
ಲಕ್ಷ್ಮಣ್ ಉಟೇಕರ್ ಅವರು ‘ಛಾವ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಛತ್ರಪತಿ ಶಂಭಾಜಿ ಮಹಾರಾಜ್ ಜೀವನವನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ವಿಕ್ಕಿ ಕೌಶಲ್ ಅವರು ಶಂಭಾಜಿ ಪಾತ್ರವನ್ನು ನಿಭಾಯಿಸಿದ್ದಾರೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. 4 ದಿನಕ್ಕೆ ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ 145.53 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸೋಮವಾರ 24.10 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ವಿಕ್ಕಿ ಕೌಶಲ್ ಅವರ ಅಭಿನಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.