Raj Kundra: ಅಶ್ಲೀಲ ಚಿತ್ರ ನಿರ್ಮಾಣ ಕೇಸ್​​ನಲ್ಲಿ ರಾಜ್​ ಕುಂದ್ರಾಗೆ ಮತ್ತೆ ಸಂಕಷ್ಟ; ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡ ಜಾರಿ ನಿರ್ದೇಶನಾಲಯ

Shilpa Shetty | ED: ನೀಲಿ ಚಿತ್ರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದ ಹಣಕಾಸು ವಹಿವಾಟಿನ ಬಗ್ಗೆ ಇಡಿ ತನಿಖೆ ನಡೆಸಲಿದೆ. ಇದರಿಂದ ರಾಜ್​ ಕುಂದ್ರಾಗೆ ಮತ್ತಷ್ಟು ಸಂಕಷ್ಟ ಹೆಚ್ಚಾಗುವ ಸಾಧ್ಯತೆ ಇದೆ.

Raj Kundra: ಅಶ್ಲೀಲ ಚಿತ್ರ ನಿರ್ಮಾಣ ಕೇಸ್​​ನಲ್ಲಿ ರಾಜ್​ ಕುಂದ್ರಾಗೆ ಮತ್ತೆ ಸಂಕಷ್ಟ; ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡ ಜಾರಿ ನಿರ್ದೇಶನಾಲಯ
ರಾಜ್​ ಕುಂದ್ರಾ
Edited By:

Updated on: May 19, 2022 | 11:39 AM

ಅಶ್ಲೀಲ ಚಿತ್ರಗಳ ತಯಾರಿಕೆ ಮತ್ತು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ (Raj Kundra) ವಿರುದ್ಧ ಜಾರಿ ನಿರ್ದೇಶನಾಲಯವು (ED) ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ರಾಜ್ ಕುಂದ್ರಾ ಈ ಹಿಂದೆ ಅಶ್ಲೀಲ ಚಿತ್ರ ತಯಾರಿಕೆಯ ದಂಧೆ ನಡೆಸುತ್ತಿದ್ದಾರೆಂಬ ಆರೋಪದ ಮೇಲೆ ಮುಂಬೈ ಪೊಲೀಸರಿಂದ 2021ರಲ್ಲಿ ಬಂಧನಕ್ಕೆ ಒಳಗಾಗಿದ್ದರು. ಇದೀಗ ಆ ಪ್ರಕರಣಕ್ಕೆ ಸಂಬಂಧಿಸಿದ ಹಣಕಾಸು ವಹಿವಾಟಿನ ಬಗ್ಗೆ ಇಡಿ ತನಿಖೆ ನಡೆಸಲಿದೆ. ಇದರಿಂದ ರಾಜ್​ ಕುಂದ್ರಾಗೆ ಮತ್ತಷ್ಟು ಸಂಕಷ್ಟ ಹೆಚ್ಚಾಗುವ ಸಾಧ್ಯತೆ ಇದೆ.

ವಾಸ್ತವವಾಗಿ ರಾಜ್​ ಕುಂದ್ರಾ ಫೆಬ್ರವರಿಯಲ್ಲಿ ಬಂಧನವಾಗಿದ್ದು ಮಹಿಳೆಯರಿಗೆ ಪೋರ್ನ್​ ದಂಧೆಯಲ್ಲಿ ಭಾಗಿಯಾಗುವಂತೆ ಒತ್ತಾಯಿಸಿದ ಆರೋಪದ ಮೇಲೆ. ಆದರೆ ವಿಚಾರಣೆಯ ನಂತರ ಅಶ್ಲೀಲ ಚಿತ್ರ ತಯಾರಿಕೆ ಹಾಗೂ ಹಂಚಿಕೆ ಪ್ರಕರಣದ ಪ್ರಮುಖ ಆರೋಪಿ ರಾಜ್​ ಕುಂದ್ರಾ ಎಂದು ಬಹಿರಂಗವಾಯಿತು. HotHit Movies, Hotshots ನಂತಹ ಚಂದಾದಾರಿಕೆ ಆಧಾರಿತ ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು Hothitmovies, Nuefliks ಮತ್ತು Escapenow ನಂತಹ ವೆಬ್‌ಸೈಟ್‌ಗಳ ಮೂಲಕ ರಾಜ್​ ಕುಂದ್ರಾ ಅವರ ತಂಡ ಕಾರ್ಯಾಚರಣೆ ನಡೆಸುತ್ತಿತ್ತು ಎಂದು ಆರೋಪಿಸಲಾಗಿದೆ. ಇದೀಗ ಇಡಿ ಈ ಪ್ರಕರಣದಲ್ಲಿನ ಹಣದ ವಹಿವಾಟಿನ ಆಯಾಮದಲ್ಲಿ ತನಿಖೆ ನಡೆಸಲಿದೆ.

ಇದನ್ನೂ ಓದಿ
Taapsee Pannu: ಮನಮೋಹಕ ಚೆಲುವೆ ತಾಪ್ಸಿ ಪನ್ನು ಕ್ಯೂಟ್ ಫೋಟೋಆಲ್ಬಂ
Nawazuddin Siddiqui Birthday: ನವಾಜುದ್ದೀನ್ ಸಿದ್ದಿಕಿ ನಟನೆಯ ಈ ಕಿರುಚಿತ್ರಗಳನ್ನು ವೀಕ್ಷಿಸಿದ್ದೀರಾ? ಮಿಸ್ ಮಾಡಲೇಬೇಡಿ
Madonna Sebastian: ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಕೇರಳ ಮೂಲದ ಮಡೋನ್ನ ಸೆಬಾಸ್ಟಿಯನ್; ‘ಕೋಟಿಗೊಬ್ಬ 3’ ನಟಿಯ ಕುತೂಹಲಕರ ವಿಚಾರಗಳು ಇಲ್ಲಿವೆ
ಶಿಲ್ಪಾ ಶೆಟ್ಟಿಗೆ ಕೋಟ್ಯಂತರ ರೂಪಾಯಿ ಆಸ್ತಿ, ಮನೆ ಬರೆದುಕೊಟ್ಟ ರಾಜ್​ ಕುಂದ್ರಾ; ಅಚ್ಚರಿ ಮೂಡಿಸಿದ ನಡೆ

ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿರುವ ಹಾಟ್‌ಶಾಟ್ಸ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದು ಆರ್ಮ್ಸ್‌ಪ್ರೈಮ್ ಮೀಡಿಯಾ ಪ್ರೈವೇಟ್ ಲಿಮಿಟೆಡ್. ಇದನ್ನು 2019ರಲ್ಲಿ ರಾಜ್​ ಕುಂದ್ರಾ ಸ್ಥಾಪಿಸಿದ್ದರು. ನಂತರದಲ್ಲಿ ಕುಂದ್ರಾ ಅವರ ಸೋದರ ಮಾವ ಪ್ರದೀಪ್ ಬಕ್ಷಿ ಒಡೆತನದ ಯುಕೆ ಮೂಲದ ಕಂಪನಿ ಕೆನ್ರಿನ್ ಲಿಮಿಟೆಡ್‌ಗೆ ಹಾಟ್‌ಶಾಟ್‌ ಆಪ್ ಮಾರಾಟವಾಗಿತ್ತು.

ರಾಜ್ ಕುಂದ್ರಾ ಅವರ ಕಚೇರಿಯಿಂದ ಪೋರ್ನ್ ಕ್ಲಿಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ರಾಜ್ ಕುಂದ್ರಾ ಅಧಿಕೃತವಾಗಿ ಯುಕೆ ಮೂಲದ ಕೆನ್ರಿನ್ ಪ್ರೈವೇಟ್ ಲಿಮಿಟೆಡ್‌ನ ಭಾಗವಾಗಿಲ್ಲದಿದ್ದರೂ ಕೂಡ ಅಶ್ಲೀಲ ಚಿತ್ರಗಳನ್ನು ಅಪ್‌ಲೋಡ್ ಮಾಡುವ ಕಾರ್ಯಾಚರಣೆಯನ್ನು ದಿನನಿತ್ಯ ನಡೆಸುತ್ತಿದ್ದರು ಎಂದು ತೋರಿಸುವ ವಾಟ್ಸಾಪ್ ಚಾಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದೂ ಪೊಲೀಸರು ಹೇಳಿದ್ದರು.

ಪ್ರಸ್ತುತ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ರಾಜ್​ ಕುಂದ್ರಾ, ಸಾರ್ವಜನಿಕವಾಗಿ ಕಾಣಿಸಿಕೊಂಡರೂ ಕೂಡ ಮುಖವನ್ನು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಅಶ್ಲೀಲ ಚಿತ್ರ ಪ್ರಕರಣದ ನಂತರ ತಮ್ಮ ಮುಖವನ್ನು ಎಲ್ಲೂ ರಿವೀಲ್ ಮಾಡಿಲ್ಲ. ಇದೇ ಕಾರಣಕ್ಕೆ ಉದ್ಯಮಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ಗೆ ಆಹಾರವಾಗಿದ್ದೂ ಇದೆ.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:26 am, Thu, 19 May 22