‘ಹಿಂದಿ ನಮ್ಮ ರಾಷ್ಟ್ರ ಭಾಷೆ, ಅದಕ್ಕೆ ಗೌರವ ಕೊಡ್ಬೇಕು’: ಮತ್ತೆ ಅದೇ ವಾದ ಮುಂದಿಟ್ಟ​ ನಟ ಅರ್ಜುನ್​ ರಾಮ್​ಪಾಲ್​

Arjun Rampal: ಬಾಲಿವುಡ್​ನ ಹಲವು ಸೆಲೆಬ್ರಿಟಿಗಳಿಗೆ ಈ ಅಭಿಪ್ರಾಯ ಇದೆ. ಹಿಂದಿಯೇ ರಾಷ್ಟ್ರ ಭಾಷೆ ಎಂದು ಅವರೆಲ್ಲ ವಾದಿಸುತ್ತಿದ್ದಾರೆ. ಆ ಸಾಲಿಗೆ ಅರ್ಜುನ್​ ರಾಮ್​ಪಾಲ್​ ಕೂಡ ಸೇರ್ಪಡೆ ಆಗಿದ್ದಾರೆ.

‘ಹಿಂದಿ ನಮ್ಮ ರಾಷ್ಟ್ರ ಭಾಷೆ, ಅದಕ್ಕೆ ಗೌರವ ಕೊಡ್ಬೇಕು’: ಮತ್ತೆ ಅದೇ ವಾದ ಮುಂದಿಟ್ಟ​ ನಟ ಅರ್ಜುನ್​ ರಾಮ್​ಪಾಲ್​
ಅರ್ಜುನ್​ ರಾಮ್​ಪಾಲ್​, ಕಂಗನಾ ರಣಾವತ್​
Follow us
TV9 Web
| Updated By: ಮದನ್​ ಕುಮಾರ್​

Updated on: May 19, 2022 | 9:12 AM

ರಾಷ್ಟ್ರ ಭಾಷೆಯ (National Language) ವಿಚಾರದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬುದನ್ನು ದಕ್ಷಿಣದ ಸೆಲೆಬ್ರಿಟಿಗಳು ಒತ್ತಿ ಹೇಳುತ್ತಿದ್ದಾರೆ. ಅತ್ತ, ಬಾಲಿವುಡ್​ನ ಕೆಲವು ನಟ-ನಟಿಯರು ‘ಹಿಂದಿಯೇ ನಮ್ಮ ರಾಷ್ಟ್ರ ಭಾಷೆ’ ಎಂದು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಕಿಚ್ಚ ಸುದೀಪ್​ ಅವರು ನೀಡಿದ ಹೇಳಿಕೆ ದೊಡ್ಡ ಮಟ್ಟದಲ್ಲಿ ಸುದ್ದಿ ಆಯಿತು. ‘ಹಿಂದಿ (Hindi) ನಮ್ಮ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ’ ಎಂದು ಸುದೀಪ್​ ಹೇಳಿದ್ದನ್ನು ಬಾಲಿವುಡ್​ ನಟ ಅಜಯ್​ ದೇವಗನ್​ ವಿರೋಧಿಸಿದ್ದರು. ಟ್ವಿಟರ್​ನಲ್ಲಿ ಈ ಇಬ್ಬರು ಸ್ಟಾರ್​ ನಟರ ನಡುವೆ ಮಾತಿನ ಚಕಮಕಿ ನಡೆದಿತ್ತು. ಹಾಗಂತ ಆ ಚರ್ಚೆ ಅಲ್ಲಿಗೇ ಕೊನೆ ಆಗುವಂಥದ್ದಲ್ಲ. ಈಗ ಹಿಂದಿ ಚಿತ್ರರಂಗದ ಮತ್ತೋರ್ವ ಜನಪ್ರಿಯ ನಟ ಅರ್ಜುನ್​ ರಾಮ್​ಪಾಲ್​ (Arjun Rampal) ಅವರು ಹಿಂದಿ ಪರವಾಗಿ ಬ್ಯಾಟ್​ ಬೀಸಿದ್ದಾರೆ. ‘ಹಿಂದಿ ನಮ್ಮ ರಾಷ್ಟ್ರ ಭಾಷೆ. ಅದಕ್ಕೆ ನಾವು ಗೌರವ ನೀಡಬೇಕು’ ಎಂದು ಅವರು ಹೇಳಿದ್ದಾರೆ. ‘ಇಂಡಿಯಾ ಟುಡೇ’ ನಡೆಸಿದ ಸಂದರ್ಶನದಲ್ಲಿ ಅರ್ಜುನ್​ ರಾಮ್​ಪಾಲ್​ ಅವರು ಮಾತನಾಡಿದ್ದು, ಅವರ ಹೇಳಿಕೆ ಮತ್ತೆ ಚರ್ಚೆ ಹುಟ್ಟುಹಾಕಿದೆ.

ಬಾಲಿವುಡ್​ನ ಹಲವು ಸೆಲೆಬ್ರಿಟಿಗಳಿಗೆ ಈ ಅಭಿಪ್ರಾಯ ಇದೆ. ಹಿಂದಿಯೇ ರಾಷ್ಟ್ರ ಭಾಷೆ ಎಂದು ಅವರೆಲ್ಲ ವಾದಿಸುತ್ತಿದ್ದಾರೆ. ಆ ಸಾಲಿಗೆ ಅರ್ಜುನ್​ ರಾಮ್​ಪಾಲ್​ ಕೂಡ ಸೇರ್ಪಡೆ ಆಗಿದ್ದಾರೆ. ‘ಭಾರತವು ವೈವಿಧ್ಯತೆಯಿಂದ ಕೂಡಿದ ಜಾತ್ಯಾತೀಯ ದೇಶ. ಇಲ್ಲಿ ಸಾಕಷ್ಟು ಭಿನ್ನವಾದ ಭಾಷೆ, ಧರ್ಮ, ಸಂಸ್ಕೃತಿ, ಹಬ್ಬಗಳು ಇವೆ. ನಾವೆಲ್ಲರೂ ಖುಷಿಯಾಗಿ, ಶಾಂತಿಯುತವಾಗಿ ಬಾಳುತ್ತಿದ್ದೇವೆ. ಭಾಷೆ ಎಂಬುದು ಮುಖ್ಯವಲ್ಲ. ಆದರೆ ಭಾವನೆಗಳು ಮುಖ್ಯ. ನನಗೆ ಅನಿಸಿದಂತೆ ಹಿಂದಿ ನಮ್ಮ ರಾಷ್ಟ್ರಭಾಷೆಯಾಗಿದೆ. ಅದಕ್ಕೆ ನಾವು ಗೌರವ ನೀಡಬೇಕು. ವೈವಿಧ್ಯತೆಯಿಂದ ಕೂಡಿದ ನಮ್ಮ ದೇಶದಲ್ಲಿ ಹಿಂದಿಯನ್ನು ಹೆಚ್ಚು ಜನರು ಮಾತನಾಡುತ್ತಾರೆ. ಹೆಚ್ಚು ಜನರು ಅರ್ಥ ಮಾಡಿಕೊಳ್ಳುತ್ತಾರೆ’ ಎಂದು ಅರ್ಜುನ್​ ರಾಮ್​ಪಾಲ್​ ಹೇಳಿದ್ದಾರೆ.

ಇದನ್ನೂ ಓದಿ: ರಾಷ್ಟ್ರ ಭಾಷೆ ವಿವಾದದ ಬಳಿಕ ಗಲ್ಲಾ ಪೆಟ್ಟಿಗೆಯಲ್ಲೂ ಕಿಚ್ಚ ಸುದೀಪ್​ ವರ್ಸಸ್​ ಅಜಯ್​ ದೇವಗನ್​ ಪೈಪೋಟಿ

ಇದನ್ನೂ ಓದಿ
Image
Sonu Nigam: ‘ಹಿಂದಿ ರಾಷ್ಟ್ರಭಾಷೆ ಎಂದು ಎಲ್ಲೂ ಬರೆದಿಲ್ಲ’; ಅಜಯ್ ದೇವಗನ್​ಗೆ ಖಡಕ್ ಪ್ರತಿಕ್ರಿಯೆ ನೀಡಿದ ಸೋನು ನಿಗಮ್
Image
‘ಹಿಂದಿ ಯಾವತ್ತೂ ರಾಷ್ಟ್ರ ಭಾಷೆ ಆಗಿಲ್ಲ, ಆಗುವುದಕ್ಕೂ ನಾವು ಬಿಡುವುದಿಲ್ಲ’; ಚೇತನ್ ಕುಮಾರ್
Image
ಹಿಂದಿ ಹೇರಿಕೆ ಎಂಬ ದೊಡ್ಡ ಹುನ್ನಾರ: ಇದು ಬರೀ ಭಾಷೆಯ ವಿಷಯ ಅಲ್ಲ, ಭವಿಷ್ಯದ ವಿಷಯ
Image
Kichcha Sudeep: ‘ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್’; ಹಿಂದಿ ರಾಷ್ಟ್ರಭಾಷೆ ಎಂದ ಅಜಯ್ ದೇವಗನ್​ಗೆ ಕಿಚ್ಚ ಸುದೀಪ್ ಪ್ರತ್ಯುತ್ತರ

ಭಾರತದಲ್ಲಿ ಇರುವ ಎಲ್ಲ ಭಾಷೆ ಮತ್ತು ಸಂಸ್ಕೃತಿಯನ್ನು ಜನರು ಸೆಲೆಬ್ರೇಟ್​ ಮಾಡಬೇಕು ಎಂಬುದು ಅರ್ಜುನ್​ ರಾಮ್​ಪಾಲ್​ ಅಭಿಪ್ರಾಯ. ಆ ಕುರಿತು ತಮ್ಮ ನಿಲುವು ಏನು ಎಂಬುದನ್ನು ಅವರು ತಿಳಿಸಿದ್ದಾರೆ. ‘ಎಲ್ಲರ ಭಿನ್ನ ಸಂಸ್ಕೃತಿಯನ್ನು ಅರಿತುಕೊಳ್ಳುವುದು ಒಳ್ಳೆಯದು. ಸ್ವಲ್ಪ ತಮಿಳು, ಸ್ವಲ್ಪ ತೆಲುಗು ಕಲಿಯಿರಿ. ವಿದ್ಯಾಭಾಸ್ಯಕ್ಕಾಗಿ ನಾನು ತಮಿಳುನಾಡಿಗೆ ಹೋಗಿದ್ದೆ. ಅಲ್ಲಿದ್ದಾಗ ನಾನು ಸ್ವಲ್ಪ ತಮಿಳು ಕಲಿತಿದ್ದೆ. ಅದೇ ರೀತಿ ಪಂಜಾಬ್​ಗೆ ಹೋದಾಗ.. ಅಲ್ಲಿ ಕೆಲವು ತಿಂಗಳುಗಳ ಕಾಲ ಉಳಿದುಕೊಂಡಾಗ ಸ್ವಲ್ಪ ಪಂಜಾಬಿ ಕಲಿಯಿರಿ. ನಾನು ಪಂಜಾಬ್​ನಲ್ಲಿ ಶೂಟಿಂಗ್​ ಮಾಡಿದ್ದೇನೆ. ಗುಜರಾಜ್​ಗೆ ಹೋದಾಗ ಗುಜರಾತಿ, ಮಹಾರಾಷ್ಟ್ರಕ್ಕೆ ಹೋದಾಗ ಮರಾಠಿ ಹೀಗೆ ಎಲ್ಲವನ್ನೂ ಕಲಿಯಿರಿ. ಎಲ್ಲ ಭಾಷೆಯಲ್ಲೂ ಅಚ್ಚರಿಯ ವಿಚಾರಗಳು ಇವೆ. ಅದನ್ನು ನಾವು ಸೆಲೆಬ್ರೇಟ್​ ಮಾಡಬೇಕು’ ಎಂದು ಅರ್ಜುನ್ ರಾಮ್​ಪಾಲ್ ಹೇಳಿದ್ದಾರೆ.

ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ ಎಂಬ ಹೇಳಿಕೆಗೆ ರಿಯಾಕ್ಷನ್ ಕೊಟ್ಟ ಶಿವಣ್ಣ

‘ವೈವಿಧ್ಯತೆಯ ಕಾರಣದಿಂದಲೇ ಭಾರತ ವಿಶೇಷ ಎನಿಸಿಕೊಂಡಿದೆ. ಪ್ರಪಂಚದ ಬೇರೆಲ್ಲ ದೇಶಕ್ಕಿಂತಲೂ ನಮ್ಮದು ವಿಶಿಷ್ಠವಾಗಿದೆ. ನಮ್ಮನಮ್ಮಲ್ಲೇ ನಾವು ಕಿತ್ತಾಡಬಾರದು’ ಎಂಬುದು ಅರ್ಜುನ್​ ರಾಮ್​ಪಾಲ್​ ಅಭಿಪ್ರಾಯ. ಮೇ 20ರಂದು ಬಿಡುಗಡೆ ಆಗುತ್ತಿರುವ ‘ಧಾಕಡ್​’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಈ ಚಿತ್ರಕ್ಕೆ ಕಂಗನಾ ರಾಣಾವತ್​​ ನಾಯಕಿ. ಈ ಹಿಂದೆ ಕಂಗನಾ ಕೂಡ ರಾಷ್ಟ್ರ ಭಾಷೆಯ ವಾದದ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದ್ದರು. ಸಂಸ್ಕೃತ ರಾಷ್ಟ್ರ ಭಾಷೆ ಆಗಬೇಕು ಎಂದು ಅವರು ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ