ನಟ ಇಮ್ರಾನ್ ಹಶ್ಮಿ (Eemran Hashmi) ಅವರಿಗೆ ಇಂದು (ಮಾರ್ಚ್ 24) ಜನ್ಮದಿನದ ಸಂಭ್ರಮ. ಅವರಿಗೆ ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ. ಅವರು ಚಿತ್ರರಂಗಕ್ಕೆ ಬಂದು ಸುಮಾರು 20 ವರ್ಷಗಳು ಕಳೆದಿವೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಮೊದಲು ಕಿಸ್ಸರ್ ಆಗಿ ಫೇಮಸ್ ಆಗಿದ್ದ ಅವರು, ಇತ್ತೀಚೆಗೆ ವಿಲನ್ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇಮ್ರಾನ್ ಹಶ್ಮಿ ಅವರ ಆಸ್ತಿ, ಅವರ ಅಪರೂಪದ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.
ಇಮ್ರಾನ್ ಹಶ್ಮಿ ಚಿತ್ರರಂಗಕ್ಕೆ ಬಂದಿದ್ದು 2003ರಲ್ಲಿ. ‘ಫುಟ್ಪಾತ್’ ಅವರ ಮೊದಲ ಸಿನಿಮಾ. 20004ರಲ್ಲಿ ಬಂದ ‘ಮರ್ಡರ್’ ಸಿನಿಮಾ ಸೂಪರ್ ಹಿಟ್ ಆಯಿತು. ಅನುರಾಗ್ ಬಸು ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದಿಂದ ಅವರಿಗೆ ದೊಡ್ಡ ಗೆಲುವು ಸಿಕ್ಕಿತು. ಮೊದಲ ಸಿನಿಮಾದಲ್ಲೇ ಗೆಲುವು ಕಂಡರು. 2006ರಲ್ಲಿ ರಿಲೀಸ್ ಆದ ‘ಅಕ್ಸರ್’, ‘ಗ್ಯಾಂಗ್ಸ್ಟರ್’ ಸಿನಿಮಾ ಕೂಡ ಮೆಚ್ಚುಗೆ ಪಡೆದವು. ಇಮ್ರಾನ್ ಹಶ್ಮಿ ಕಳೆದ ವರ್ಷ ಹಿಂದಿಯಲ್ಲಿ ‘ಸೆಲ್ಫಿ’ ಹಾಗೂ ‘ಟೈಗರ್ 3’ ಸಿನಿಮಾಗಳಲ್ಲಿ ನಟಿಸಿದರು. ‘ಸೆಲ್ಫಿ’ ಚಿತ್ರ ಫ್ಲಾಪ್ ಎನಿಸಿಕೊಂಡರೆ , ‘ಟೈಗರ್ 3’ ಸಿನಿಮಾ ಸಾಧಾರಣ ಗೆಲುವು ಎನಿಸಿತು.
ಇಮ್ರಾನ್ ಹಶ್ಮಿ ಅವರ ಆಸ್ತಿ 105 ಕೋಟಿ ರೂಪಾಯಿಗೂ ಅಧಿಕವಾಗಿದೆ. ಅವರು ಪ್ರತಿ ಚಿತ್ರಕ್ಕೆ 5-6 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅವರು ಬ್ರ್ಯಾಂಡ್ಗಳ ಪ್ರಚಾರಕ್ಕೆ 2 ಕೋಟಿ ರೂಪಾಯಿ ಪಡೆಯುತ್ತಾರೆ. ಇಮ್ರಾನ್ ಹಶ್ಮಿ ಅವರು ಮುಂಬೈನಲ್ಲಿ 4 ಬಿಎಚ್ಕೆ ಮನೆಯಲ್ಲಿ ವಾಸವಾಗುತ್ತಾರೆ. ಪತ್ನಿ ಪರ್ವೀನ್ ಶಹಾನಿ ಹಶ್ಮಿ ಹಾಗೂ ಮಗ ಆರ್ಯನ್ ಜೊತೆ ವಾಸವಾಗಿದ್ದಾರೆ.
ವಿದ್ಯಾ ಬಾಲನ್ ಹಾಗೂ ಇಮ್ರಾನ್ ಹಶ್ಮಿ ಒಟ್ಟಿಗೆ ಚಿತ್ರರಂಗಕ್ಕೆ ಕಾಲಿಟ್ಟವರು. ಇಬ್ಬರೂ ಚಿತ್ರರಂಗದಲ್ಲಿ ಖ್ಯಾತಿ ಪಡೆದರು. ‘ವಿದ್ಯಾ ನನಗಿಂತ ಹೆಚ್ಚು ಸಿನಿಮಾ ಮಾಡಿದ್ದಾರೆ’ ಎಂದು ಇಮ್ರಾನ್ ಹೇಳಿದ್ದರು. ಇಮ್ರಾನ್ ಹಶ್ಮಿ ಅವರು ಕಿಸ್ಸರ್ ಎಂದೇ ಫೇಮಸ್. ಈ ಕಾರಣಕ್ಕೆ ಅವರು ಸಖತ್ ಟೀಕೆ ಆಗಿದ್ದೂ ಇದೆ.
ಇತ್ತೀಚೆಗೆ ಇಮ್ರಾನ್ ಹಶ್ಮಿ ಪಾತ್ರದ ಆಯ್ಕೆಯಲ್ಲಿ ಬದಲಾಯಿಸಿಕೊಂಡಿದ್ದಾರೆ. ಅವರು ಇಷ್ಟು ವರ್ಷಗಳ ಕಾಲ ಸೀರಿಯಲ್ ಕಿಸ್ಸರ್ ಆಗಿ ಫೇಮಸ್ ಆಗಿದ್ದರು. ಈಗ ಅವರು ಪಾತ್ರಗಳ ಆಯ್ಕೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ‘ಟೈಗರ್ 3’ ಸಿನಿಮಾದಲ್ಲಿ ಐಎಸ್ಐ ಏಜೆಂಟ್ ಮಾಡುವ ಮೂಲಕ ವಿಲನ್ ಆದರು. ಈಗ ಅವರು ಟಾಲಿವುಡ್ಗೆ ಕಾಲಿಟ್ಟು ಗಮನ ಸೆಳೆಯಲು ರೆಡಿ ಆಗಿದ್ದಾರೆ. ‘ಒಜಿ’ ಸಿನಿಮಾದಲ್ಲಿ ಪವನ್ ಕಲ್ಯಾಣ್ ವಿರುದ್ಧ ತೊಡೆತಟ್ಟಲು ಅವರು ರೆಡ್ಡಿ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ