ಇನ್ಮುಂದೆ ಕಂಡಕಂಡಲ್ಲಿ ಕಾಣಿಸಿಕೊಳ್ಳಲ್ಲ ಈ ಸೆಲೆಬ್ರಿಟಿಗಳು; ಕಾರಣ ಏನು?
ಬಿಗ್ ಬಜೆಟ್ ಸಿನಿಮಾಗಳು ಸೆಟ್ಟೇರಿದ ಬಳಿಕ ಕಲಾವಿದರ ಲುಕ್ ರಿವೀಲ್ ಆಗದಂತೆ ನೋಡಿಕೊಳ್ಳಲು ಸಿನಿಮಾ ತಂಡದವರು ಸಖತ್ ಕಾಳಜಿ ವಹಿಸುತ್ತಾರೆ. ಈಗ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ ತಂಡ ಕೂಡ ಈ ಬಗ್ಗೆ ಗಮನ ಹರಿಸುತ್ತಿದೆ. ಏಪ್ರಿಲ್ನಲ್ಲಿ ರಾಮ ನವಮಿ ಪ್ರಯುಕ್ತ ಈ ಚಿತ್ರ ಸೆಟ್ಟೇರುವ ನಿರೀಕ್ಷೆ ಇದೆ.
ಬಾಲಿವುಡ್ನಲ್ಲಿ ಸಿದ್ಧವಾಗಲಿರುವ ‘ರಾಮಾಯಣ’ (Ramayana) ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್ (Ranbir Kapoor) ಅವರು ರಾಮನಾಗಿ ನಟಿಸಲಿದ್ದಾರೆ. ಸಾಯಿ ಪಲ್ಲವಿ (Sai Pallavi) ಅವರು ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ರಾವಣನ ಪಾತ್ರಕ್ಕೆ ಯಶ್ ಜೊತೆ ಮಾತುಕಥೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಆದರೆ ಈ ಸುದ್ದಿ ಇನ್ನೂ ಅಧಿಕೃತವಾಗಿಲ್ಲ. ನಿತೇಶ್ ತಿವಾರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಶೂಟಿಂಗ್ ಆರಂಭ ಆಗುವುದಕ್ಕೂ ಮುನ್ನ ಈ ಸಿನಿಮಾದ ಪ್ರಮುಖ ಕಲಾವಿದರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
‘ದಂಗಲ್’ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ಅವರು ‘ರಾಮಾಯಣ’ ಸಿನಿಮಾಗೆ ನಿರ್ದೇಶನ ಮಾಡಲಿರುವುದರಿಂದ ಸಿನಿಪ್ರಿಯರಿಗೆ ಭರವಸೆ ಮೂಡಿದೆ. ಪೌರಾಣಿಕ ಕಥೆ ಆಧಾರಿತ ಸಿನಿಮಾ ಮಾಡಿ ಜನರನ್ನು ಮೆಚ್ಚಿಸುವುದು ಸುಲಭವಲ್ಲ. ಈ ಮೊದಲು ‘ಆದಿಪುರುಷ್’ ಸಿನಿಮಾ ಮಾಡಿ ನಿರ್ದೇಶಕ ಓಂ ರಾವುತ್ ಟ್ರೋಲ್ಗೆ ಒಳಗಾಗಿದ್ದರು. ಈಗ ನಿತೇಶ್ ತಿವಾರಿ ಅವರು ಯಾವ ರೀತಿ ಈ ಸಿನಿಮಾವನ್ನು ಕಟ್ಟಿಕೊಡಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇದನ್ನೂ ಓದಿ: ಜಪಾನ್ನಲ್ಲಿ ಸಾಯಿ ಪಲ್ಲವಿ ಪಾರ್ಟಿ, ವಿಡಿಯೋ ವೈರಲ್
ಕಲಾವಿದರ ಲುಕ್ ಬಹಿರಂಗ ಆಗದಂತೆ ನೋಡಿಕೊಳ್ಳಲು ಚಿತ್ರತಂಡದವರು ಸಖತ್ ಕಾಳಜಿ ವಹಿಸುತ್ತಾರೆ. ಈಗ ‘ರಾಮಾಯಣ’ ಸಿನಿಮಾ ತಂಡ ಕೂಡ ಇದರ ಬಗ್ಗೆ ಗಮನ ಹರಿಸುತ್ತಿದೆ. ರಾಮನಾಗಿ ಕಾಣಿಸಿಕೊಳ್ಳಲಿರುವ ರಣಬೀರ್ ಕಪೂರ್, ಸೀತೆಯ ಪಾತ್ರ ಮಾಡಲಿರುವ ಸಾಯಿ ಪಲ್ಲವಿ ಸೇರಿದಂತೆ ಅನೇಕ ಕಲಾವಿದರು ಇನ್ಮುಂದೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ನಿರ್ದೇಶಕ ನಿತೇಶ್ ತಿವಾರಿ ಅವರು ಸೂಚಿಸಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಸುದ್ದಿ ಆಗಿದೆ.
ಇದನ್ನೂ ಓದಿ: ಸಾಯಿ ಪಲ್ಲವಿ ಜೊತೆ ಆಮಿರ್ ಖಾನ್ ಮಗನ ಸುತ್ತಾಟ; ಫೋಟೋ ವೈರಲ್
ಈ ಬಹುನಿರೀಕ್ಷಿತ ಸಿನಿಮಾದ ಚಿತ್ರೀಕರಣ ಶೀಘ್ರದಲ್ಲೇ ಆರಂಭ ಆಗಲಿದೆ. ಏಪ್ರಿಲ್ ತಿಂಗಳಲ್ಲಿ ರಾಮ ನವಮಿಯ ಪ್ರಯುಕ್ತ ಈ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ. ಆಗ ಪಾತ್ರವರ್ಗದ ಬಗ್ಗೆ ನಿಖರ ಮಾಹಿತಿ ಸಿಗಲಿದೆ. ರಾಮಾಯಣದ ಕಥೆಯಲ್ಲಿ ಹಲವು ಪ್ರಮುಖ ಪಾತ್ರಗಳು ಇವೆ. ಅದಕ್ಕಾಗಿ ಹಲವು ಕಲಾವಿದರ ಜೊತೆ ಮಾತುಕತೆ ನಡೆಯುತ್ತಿದೆ. ಬಾಬಿ ಡಿಯೋಲ್, ಅಮಿತಾಭ್ ಬಚ್ಚನ್, ರಕುಲ್ ಪ್ರೀತ್ ಸಿಂಗ್, ಸನ್ನಿ ಡಿಯೋಲ್ ಮುಂತಾದವರ ಹೆಸರುಗಳು ಕೇಳಿಬರುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.