ಎವೆಲಿನ್ ಶರ್ಮಾ (Evelyn Sharma) ಅವರು ಬಾಲಿವುಡ್ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಯೇ ಜವಾನಿ ಹೇ ದಿವಾನಿ’ ಸಿನಿಮಾದಲ್ಲಿ ಎವೆಲಿನ್ ಮಾಡಿದ ಪೋಷಕ ಪಾತ್ರ ಮೆಚ್ಚುಗೆ ಪಡೆದುಕೊಂಡಿತ್ತು. ಅವರಿಗೆ ಕಳೆದ ವರ್ಷ ನವೆಂಬರ್ನಲ್ಲಿ ಮಗು ಜನಿಸಿದೆ. ಈಗ ಅವರು ಮಗುವಿಗೆ ಹಾಲುಣಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ, ಅದರ ಸ್ಟ್ರಗಲ್ ಬಗ್ಗೆಯೂ ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಅಮ್ಮ ಮತ್ತು ಮಗುವಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ನಟಿ ಎವೆಲಿನ್ ಶರ್ಮಾ ಅವರು ಕಳೆದ ವರ್ಷ ಮೇ 15ರಂದು ತಮ್ಮ ಬಾಯ್ಫ್ರೆಂಡ್ ತುಷಾನ್ ಭಿಂಡಿ ಜತೆ ವಿವಾಹವಾದರು. ಜೂನ್‌ನಲ್ಲಿ ಅವರು ಮದುವೆ ಫೋಟೋಗಳನ್ನು ಹಂಚಿಕೊಂಡರು. ನವೆಂಬರ್ನಲ್ಲಿ ಅವರಿಗೆ ಮಗು ಜನಿಸಿತು. ಅವಾ ಎಂದು ಮಗುವಿಗೆ ಹೆಸರಿಡಲಾಗಿದೆ. ಮಗುವಿನ ಜತೆಗಿನ ಹಲವು ಫೋಟೋಗಳನ್ನು ಎವೆಲಿನ್ ಈ ಮೊದಲು ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ತಾಯಿ ಆಗಿರುವ ಸಂಭ್ರಮವನ್ನು ಅಭಿಮಾನಿಗಳ ಎದುರು ವ್ಯಕ್ತಪಡಿಸುತ್ತಿದ್ದಾರೆ.
ಈಗ ಹೊಸ ಪೋಸ್ಟ್ನಲ್ಲಿ ಮಗಳಿಗೆ ಹಾಲುಣಿಸುತ್ತಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಮಗು ಎದೆಹಾಲು ಕುಡಿಯುತ್ತಿದೆ. ಎವೆಲಿನ್ ಅವರು ಕ್ಯಾಮೆರಾ ಕಡೆಗೆ ನೋಡಿದ್ದಾರೆ. ಅವರು ತಾಯಿ ಆಗಿ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಕ್ಯಾಪ್ಷನ್ನಲ್ಲಿ ಅವರು ತಮ್ಮ ಸ್ಟ್ರಗಲ್ ಬಗ್ಗೆ ವಿವರಿಸಿದ್ದಾರೆ. ಈ ಫೋಟೋಗೆ ಸ್ಮೈಲ್ ಫಾರ್ ದಿ ಕ್ಯಾಮೆರಾ ಹಾಗೂ ಥಿಂಗ್ಸ್ ನೋ ಒನ್ ವಾರ್ನ್ಸ್ ಅಬೌಟ್ ಎನ್ನುವ ಹ್ಯಾಶ್ಟ್ಯಾಗ್ ಹಾಕಿದ್ದಾರೆ.
ತುಷಾನ್ ಆಸ್ಟ್ರೇಲಿಯಾ ಮೂಲದ ವೈದ್ಯ. ಅವರು ಉದ್ಯಮಿ ಕೂಡ ಹೌದು. ‘ಯೇ ಜವಾನಿ ಹೇ ದಿವಾನಿ’, ‘ಮೇ ತೆರಾ ಹೀರೋ’, ‘ಜಬ್ ಹ್ಯಾರಿ ಮೆಟ್ ಸೇಜಲ್’, ‘ಸಾಹೋ’, ‘ನೌಟಂಕಿ ಸಾಲಾ’ ಮೊದಲಾದ ಚಿತ್ರಗಳಲ್ಲಿ ಎವೆಲಿನ್ ನಟಿಸಿದ್ದಾರೆ. ಅವರು ಕೆಲವೇ ಚಿತ್ರಗಳಲ್ಲಿ ಕಾಣಿಸಿಕೊಂಡರೂ ಅವರಿಗೆ ಅಭಿಮಾನಿ ಬಳಗ ದೊಡ್ದದಿದೆ. ಇನ್ಸ್ಟ್ರಾಗ್ರಾಮ್ನಲ್ಲಿ ಅವರನ್ನು ಬರೋಬ್ಬರಿ 29 ಲಕ್ಷ ಜನರು ಹಿಂಬಾಲಿಸುತ್ತಿದ್ದಾರೆ. ‘ಸಾಹೋ’ ಬಳಿಕ ಅವರು ಯಾವುದೇ ಸಿನಿಮಾಗಳಲ್ಲೂ ನಟಿಸಿಲ್ಲ. ಮುಂದಿನ ಕೆಲ ವರ್ಷ ಅವರು ಕುಟುಂಬಕ್ಕೆ ಸಮಯ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Amulya: ಅದ್ದೂರಿಯಾಗಿ ನಡೆದ ಅಮೂಲ್ಯ ಸೀಮಂತ ಶಾಸ್ತ್ರ; ಇಲ್ಲಿವೆ ಫೋಟೋಗಳು
ಹೊಸ ಫೋಟೋ ಹಂಚಿಕೊಂಡ ನಟಿ; ಕಂಕುಳ ಕೂದಲ ನೋಡಿ ಕೆಟ್ಟದಾಗಿ ಕಮೆಂಟ್ ಹಾಕಿದ ಅಭಿಮಾನಿಗಳು
Published On - 8:14 pm, Thu, 20 January 22