ಮಾಲ್ಡೀವ್ಸ್​ನಲ್ಲಿ ಚಿತ್ರೀಕರಣ ಬೇಡ, ನಿರ್ಮಾಪಕರಿಗೆ ಮನವಿ

|

Updated on: Jan 11, 2024 | 3:56 PM

Maldives: ಮಾಲ್ಡೀವ್ಸ್ ಹಾಗೂ ಭಾರತದ ರಾಜತಾಂತ್ರಿಕ ಸಂಬಂಧ ಬಿಗಡಾಯಿಸಿದೆ. ಮಾಲ್ಡೀವ್ಸ್​ನ ಮೂವರು ಸಚಿವರು ಭಾರತದ ಪ್ರಧಾನಿಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದೇ ಕಾರಣಕ್ಕೆ ಭಾರತೀಯರು ಮಾಲ್ಡೀವ್ಸ್​ ಅನ್ನು ಬಹಿಷ್ಕರಿಸಬೇಕು ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದ್ದು, ಸಿನಿಮಾ ಮಂದಿಯೂ ಇದಕ್ಕೆ ಬೆಂಬಲ ನೀಡಿದ್ದಾರೆ.

ಮಾಲ್ಡೀವ್ಸ್​ನಲ್ಲಿ ಚಿತ್ರೀಕರಣ ಬೇಡ, ನಿರ್ಮಾಪಕರಿಗೆ ಮನವಿ
Follow us on

ಮಾಲ್ಡಿವ್ಸ್ (Maldives) ಜೊತೆಗೆ ಭಾರತದ ರಾಜತಾಂತ್ರಿಕ ಸಂಬಂಧ ಹಳಸಿದೆ. ಕೆಲ ದಿನಗಳ ಹಿಂದಷ್ಟೆ ಭಾರತದ ಪ್ರಧಾನಿಯವರ ಬಗ್ಗೆ ಮಾಲ್ಡೀವ್ಸ್​ನ ಮೂವರು ಸಚಿವರು ಅವಹೇಳನಕಾರಿ ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ. ಮಾಲ್ಡೀವ್ಸ್​ನ ಈ ಭಾರತ ವಿರೋಧಿ ನಡೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದು, ‘ಬಾಯ್​ಕಾಟ್ ಮಾಲ್ಡೀವ್ಸ್’ ಟ್ರೆಂಡ್ ಆಗುತ್ತಿದೆ. ಭಾರತೀಯರು ಮಾಲ್ಡೀವ್ಸ್​ಗೆ ಬದಲಾಗಿ ಲಕ್ಷದ್ವೀಪವನ್ನು ಪ್ರವಾಸಿ ತಾಣವಾಗಿ ಬಳಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಬಾಲಿವುಡ್ಡಿಗರಿಗಂತೂ ಮಾಲ್ಡೀವ್ಸ್ ಅತ್ಯಂತ ಮೆಚ್ಚಿನ ತಾಣ ಶೂಟಿಂಗ್ ಆಗಲಿ ವಿಶ್ರಾಂತಿಗಾಗಲಿ ಮಾಲ್ಡೀವ್ಸ್​ಗೆ ತೆರಳುತ್ತಾರೆ. ಆದರೆ ಈಗ ಬಾಲಿವುಡ್​ ಸಹ ‘ಬಾಯ್​ಕಾಟ್ ಮಾಲ್ಡೀವ್ಸ್​’ಗೆ ಬೆಂಬಲ ಸೂಚಿಸುತ್ತಿದೆ.

ರಣ್ವೀರ್ ಸಿಂಗ್ ಸೇರಿದಂತೆ ಇನ್ನೂ ಕೆಲವು ಬಾಲಿವುಡ್​ನ ನಟ-ನಟಿಯರು ಮಾಲ್ಡೀವ್ಸ್​ ವಿರುದ್ಧ ಪೋಸ್ಟ್​ಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಸಿಬ್ಬಂದಿ ಸಂಸ್ಥೆಯು ನಿರ್ಮಾಣ ಸಂಸ್ಥೆಗಳಿಗೆ ಪತ್ರ ಬರೆದಿದ್ದು, ಇನ್ನು ಮುಂದೆ ಮಾಲ್ಡೀವ್ಸ್​ನಲ್ಲಿ ಯಾವುದೇ ಬಾಲಿವುಡ್ ಸಿನಿಮಾದ ಚಿತ್ರೀಕರಣ ಮಾಡದಂತೆ ಮನವಿ ಮಾಡಿದ್ದಾರೆ.

ಚಿತ್ರರಂಗದ ಹಳೆಯ ಹಾಗೂ ಬೃಹತ್ ಸಂಸ್ಥೆಯಾಗಿರುವ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಸಿಬ್ಬಂದಿ (ಎಫ್​ಡಬ್ಲುಐಸಿಇ) ಮಾಲ್ಡಿವ್ಸ್ ಸಚಿವರು ಪ್ರಧಾನಿ ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಆಡಿರುವ ಮಾತುಗಳನ್ನು ಖಂಡಿಸಿದ್ದು, ಬಾಲಿವುಡ್​ನ ನಿರ್ಮಾಪಕರು ಮಾಲ್ಡಿವ್ಸ್​ನಲ್ಲಿ ತಮ್ಮ ಸಿನಿಮಾಗಳ ಚಿತ್ರೀಕರಣ ಮಾಡುವುದನ್ನು ನಿಲ್ಲಿಸಬೇಕು, ಈಗಾಗಲೇ ಚಿತ್ರೀಕರಣ ಮಾಡಲು ಮಾಡಿಕೊಂಡಿರುವ ಬುಕಿಂಗ್​ಗಳನ್ನು ರದ್ದು ಮಾಡಬೇಕು ಎಂದು ಕೋರಿದೆ.

ಇದನ್ನೂ ಓದಿ:ನಮ್ಮಲ್ಲಿಗೆ ಹೆಚ್ಚಿನ ಪ್ರವಾಸಿಗರನ್ನು ಕಳುಹಿಸಿ: ಚೀನಾಕ್ಕೆ ಮಾಲ್ಡೀವ್ಸ್ ಅಧ್ಯಕ್ಷರ ಮನವಿ

ಮಾಲ್ಡೀವ್ಸ್‌ನಲ್ಲಿ ಯಾವುದೇ ಶೂಟಿಂಗ್ ಅಥವಾ ಉತ್ಪಾದನಾ ಚಟುವಟಿಕೆಗಳನ್ನು ಯೋಜಿಸದಂತೆ ಭಾರತ ಮತ್ತು ಪ್ರಪಂಚದಾದ್ಯಂತದ ಎಲ್ಲಾ ನಿರ್ಮಾಪಕರಿಗೆ ಈ ಮೂಲಕ ಸೂಚಿಸಲಾಗಿದೆ. ನಾವೆಲ್ಲರೂ ನಮ್ಮ ಪ್ರಧಾನಿ ಮತ್ತು ನಮ್ಮ ರಾಷ್ಟ್ರಕ್ಕೆ ಬಲವಾದ ಬೆಂಬಲವನ್ನು ನೀಡುವ ಸಲುವಾಗಿ ಈ ಗಟ್ಟಿ ನಿರ್ಣಯವನ್ನು ತೆಗೆದುಕೊಳ್ಳಬೇಕಿದೆ ಎಂದು ಪತ್ರದಲ್ಲಿ ಹೇಳಿದೆ ಎಫ್​ಡಬ್ಲುಐಸಿಇ.

ಕೆಲವು ದಿನಗಳ ಹಿಂದಷ್ಟೆ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದರು. ಆ ಬಳಕ ಮಾಲ್ಡೀವ್ಸ್​ ಬದಲಿಗೆ ಲಕ್ಷದ್ವೀಪವನ್ನು ಪ್ರವಾಸಿ ತಾಣವಾಗಿ ಬಳಸುವಂತೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡಲು ಆರಂಭವಾಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ