‘ವರ್ಷದ ಭಾರತೀಯ 2023’: ಕುಟುಂಬದ ಕಡುಕಷ್ಟದ ಬಳಿಕ ಶಾರುಖ್​ ಖಾನ್​ಗೆ ಸಿಕ್ತು ಪ್ರಶಸ್ತಿ

‘ಇತ್ತೀಚಿನ ಕೆಲವು ವರ್ಷಗಳಲ್ಲಿ ನನಗೆ ಮತ್ತು ನನ್ನ ಕುಟುಂಬದವರಿಗೆ ಕಷ್ಟ ಎದುರಾಯಿತು. ನನ್ನ ಹಲವು ಸಿನಿಮಾಗಳು ಫ್ಲಾಪ್​ ಆದವು. ಕೆಲವರು ನನ್ನ ಬದುಕು ಅಂತ್ಯವಾಯ್ತು ಎನ್ನಲು ಆರಂಭಿಸಿದರು’ ಎಂದು ಕಷ್ಟದ ದಿನಗಳನ್ನು ಶಾರುಖ್​ ಖಾನ್​ ಮೆಲುಕು ಹಾಕಿದ್ದಾರೆ.

‘ವರ್ಷದ ಭಾರತೀಯ 2023’: ಕುಟುಂಬದ ಕಡುಕಷ್ಟದ ಬಳಿಕ ಶಾರುಖ್​ ಖಾನ್​ಗೆ ಸಿಕ್ತು ಪ್ರಶಸ್ತಿ
ಶಾರುಖ್​ ಖಾನ್​
Follow us
ಮದನ್​ ಕುಮಾರ್​
|

Updated on: Jan 11, 2024 | 11:20 AM

ನಟ ಶಾರುಖ್​ ಖಾನ್​ (Shah Rukh khan) ಅವರು ಭಾರತೀಯ ಚಿತ್ರರಂಗದಲ್ಲಿ ಸೂಪರ್​ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ. 3 ದಶಕಗಳ ವೃತ್ತಿಬದುಕಿನಲ್ಲಿ ಅವರು ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಶಾರುಖ್​ ಖಾನ್​ ಮತ್ತು ಅವರ ಕುಟುಂಬದವರು ಅನೇಕ ಕಷ್ಟಗಳನ್ನು ಎದುರಿಸಿದರು. ಆದರೆ 2023ರಲ್ಲಿ ಅವರು ಮತ್ತೆ ಏಳಿಗೆ ಕಂಡರು. ಅಲ್ಲದೇ ಅವರಿಗೆ ಈಗ ‘ವರ್ಷದ ಭಾರತೀಯ 2023’ (Indian of The Year 2023) ಪ್ರಶಸ್ತಿ ಕೂಡ ಸಿಕ್ಕಿದೆ. ಈ ಪ್ರಶಸ್ತಿಯನ್ನು ಅವರು ಬಹಳ ಖುಷಿಯಿಂದ ಸ್ವೀಕರಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಅನೇಕ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.

‘ಕಳೆದ ಕೆಲವು ವರ್ಷಗಳಲ್ಲಿ ನನಗೆ ಮತ್ತು ನನ್ನ ಕುಟುಂಬದವರಿಗೆ ಕಷ್ಟ ಎದುರಾಯಿತು. ನನ್ನ ಹಲವು ಸಿನಿಮಾಗಳು ಫ್ಲಾಪ್​ ಆದವು. ಕೆಲವರು ನನ್ನ ಬದುಕು ಅಂತ್ಯವಾಯ್ತು ಎನ್ನಲು ಆರಂಭಿಸಿದರು. ವೈಯಕ್ತಿಕ ಬದುಕಿನಲ್ಲೂ ಅನೇಕ ಘಟನೆಗಳು ನಡೆದವು. ಅದರಿಂದ ನಾನು ಪಾಠ ಕಲಿತೆ. ಶಾಂತವಾಗಿರಬೇಕು, ಕಷ್ಟಪಟ್ಟು ಕೆಲಸ ಮಾಡಬೇಕು ಎಂಬುದನ್ನು ಕಲಿತೆ. ಎಲ್ಲವೂ ಸರಿ ಇದೆ ಎನ್ನುವಾಗ ಏನಾದರೂ ಬಂದು ಬಡಿಯಬಹುದು. ಆದರೆ ಈ ಸಂದರ್ಭದಲ್ಲಿ ನೀವು ಭರವಸೆ ಉಳಿಸಿಕೊಳ್ಳಬೇಕು’ ಎಂದು ಶಾರುಖ್​ ಖಾನ್​ ಹೇಳಿದ್ದಾರೆ.

‘100 ಪರ್ಸೆಂಟ್​ ಎಂಬುದು ಕಥೆಯ ಅಂತ್ಯವಲ್ಲ. ಸಿನಿಮಾದ ರೀತಿ ಜೀವನದ ಅಂತ್ಯದಲ್ಲೂ ಕೂಡ ಎಲ್ಲವೂ ಸರಿ ಆಗುತ್ತದೆ ಅಂತ ನನಗೆ ಯಾರೋ ಹೇಳಿದ್ದರು. ಸರಿ ಆಗಿಲ್ಲ ಎಂದರೆ ಅಂತ್ಯ ಆಗಿಲ್ಲ ಎಂದು ಅರ್ಥ. ಪಿಕ್ಚರ್​ ಇನ್ನೂ ಬಾಕಿ ಇದೆ ಮೇರೆ ದೋಸ್ತ್​. ಆ ಮಾತಿನ ಮೇಲೆ ನನಗೆ ನಂಬಿಕೆ ಇದೆ’ ಎಂದು ಶಾರುಖ್​ ಖಾನ್​ ಹೇಳಿದ್ದಾರೆ. 2023ರಲ್ಲಿ ಅವರು ‘ಜವಾನ್​’, ‘ಪಠಾಣ್​’, ‘ಡಂಕಿ’ ಸಿನಿಮಾಗಳ ಮೂಲಕ ಗೆಲುವ ಕಂಡಿದ್ದಾರೆ.

ಇದನ್ನೂ ಓದಿ: ವಿಶ್ವಾದ್ಯಂತ 444 ಕೋಟಿ ರೂಪಾಯಿ ಗಳಿಸಿದ ‘ಡಂಕಿ’; ಶಾರುಖ್​ಗೆ ಹ್ಯಾಟ್ರಿಕ್ ಗೆಲುವು

‘ಒಂದಷ್ಟು ವರ್ಷಗಳ ಹಿಂದೆ ಪ್ರಶಸ್ತಿ ಪಡೆದಾಗ ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಮಕ್ಕಳಿಗೆ ನೀಡುತ್ತಿದ್ದೆ. ಅದರಿಂದ ಅವರ ಬದುಕಿಗೆ ಪ್ರೋತ್ಸಾಹ ಸಿಗುತ್ತಿತ್ತು. ಕಳೆದ ಕೆಲವು ವರ್ಷಗಳಿಂದ ನನ್ನ ಕುಟುಂಬಕ್ಕೆ ಈ ಪ್ರೋತ್ಸಾಹದ ಅಗತ್ಯವಿತ್ತು. ಹಾಗಾಗಿ ಅವರಿಗೋಸ್ಕರ ನಾನು ಈ ಪ್ರಶಸ್ತಿಯನ್ನು ಮನೆಗೆ ತೆಗೆದುಕೊಂಡು ಹೋಗುತ್ತೇನೆ’ ಎಂದು ಶಾರುಖ್​ ಖಾನ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ