AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೌರಿ ಖಾನ್ ವಿಲ್ಲಾದಲ್ಲಿ ನೀವು ವಾಸಿಸಬಹುದು; ಒಂದು ರಾತ್ರಿಗೆ ಎಷ್ಟು ಲಕ್ಷ ರೂಪಾಯಿ?

ಗೌರಿ ಖಾನ್ ಇಂಟೀರಿಯರ್ ಡಿಸೈನ್ ಮಾಡುತ್ತಿದ್ದಾರೆ. ಹಿಮಾಚಲ ಪ್ರದೇಶದ ಡಾಲ್​ಹೌಸೀಯಲ್ಲಿರುವ ತಮ್ಮ ಪೂರ್ವಜರ 1993ರ ವಿಲ್ಲಾವನ್ನು ಐಷಾರಾಮಿ ಪ್ರವಾಸಿ ತಾಣವಾಗಿ ಪರಿವರ್ತಿಸಿದ್ದಾರೆ. 8000 ಚದರ ಅಡಿ ವಿಸ್ತೀರ್ಣದ ಈ ವಿಲ್ಲಾದಲ್ಲಿ 6 ಕೊಠಡಿಗಳಿದ್ದು, ರಾತ್ರಿ ಬಾಡಿಗೆ 1.2 ಲಕ್ಷ ರೂ.ವರೆಗೆ ಇದೆ.

ಗೌರಿ ಖಾನ್ ವಿಲ್ಲಾದಲ್ಲಿ ನೀವು ವಾಸಿಸಬಹುದು; ಒಂದು ರಾತ್ರಿಗೆ ಎಷ್ಟು ಲಕ್ಷ ರೂಪಾಯಿ?
ಗೌರಿ-ಶಾರುಖ್
ರಾಜೇಶ್ ದುಗ್ಗುಮನೆ
|

Updated on: Feb 14, 2026 | 7:33 AM

Share

ಗೌರಿ ಖಾನ್ ಅವರು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಪತ್ನಿಯಾಗಿ ಗುರುತಿಸಿಕೊಂಡಿರುವುದು ಮಾತ್ರವಲ್ಲ, ತಮ್ಮದೇ ಉದ್ಯಮಗಳ ಮೂಲಕ ಗಮನ ಸೆಳೆದಿದ್ದಾರೆ. ಅವರು ಇಂಟೀರಿಯರ್ ಡಿಸೈನ್ ಉದ್ಯಮದಲ್ಲಿ ಉನ್ನತ ಮಟ್ಟಕ್ಕೆ ಏರಿದ್ದಾರೆ. ಅವರು ಈಗ ‘1993ರ ಡಾಲ್​ಹೌಸೀ ವಿಲ್ಲಾ’ ಅನ್ನು ಟೂರಿಸ್ಟ್​​​ಗಳು ಉಳಿದುಕೊಳ್ಳುವ ಜಾಗವನ್ನಾಗಿ ಬದಲಾಯಿಸಿದ್ದಾರೆ. ಇದರ ಬಾಡಿಗೆ ಬರೋಬ್ಬರಿ 1.2 ಲಕ್ಷ ರೂಪಾಯಿ.

ಹಿಮಾಚಲ ಪ್ರದೇಶದ ಚಂಬಾ ಬಳಿ ಡಾಲ್​ಹೌಸ್ ಇದೆ. 1993ರಲ್ಲಿ ಈ ಭಾಗದಲ್ಲಿ ಈ ಜಾಗವನ್ನು ಗೌರಿ ಅವರ ಮುತ್ತಾತ ಸೂರಜ್ ಭಾನ್ ತಿವಾರಿ ಖರೀದಿ ಮಾಡಿದರಂತೆ. ಈ ಜಾಗ 8000 ಸ್ಕ್ವೇರ್ ಫೀಟ್ ಇದೆ. ಇಲ್ಲಿ ಚಿಕ್ಕ ವಯಸ್ಸಿನಲ್ಲಿದ್ದಾಗ ಗೌರಿ ಸಮಯ ಕಳೆಯುತ್ತಿದ್ದರು. ಅವರು ಅನೇಕ ಬೇಸಿಗೆ ರಜೆಗಳನ್ನು ಇಲ್ಲಿ ಕಳೆದಿದ್ದಾರೆ.

ಈಗ ಗೌರಿ ಖಾನ್ ಅವರು ಇದನ್ನು ಅಭಿವೃದ್ಧಿ ಮಾಡಿದ್ದಾರೆ. ಹಲವು ಬದಲಾವಣೆಗಳನ್ನು ಮಾಡಿದ್ದು, ಐಷಾರಾಮಿ ಸವಲತ್ತುಗಳನ್ನು ನೀಡೋ ವಿಲ್ಲಾ ಆಗಿ ಇದನ್ನು ಬದಲಾಯಿಸಲಾಗಿದೆ. ಗೌರಿ ಸಹೋದರ ಕೂಡ ಇದರ ಭಾಗವಾಗಿದ್ದಾರೆ.

ಇಲ್ಲಿ ಆರು ರೂಂಗಳು ಇವೆ. ಒಂದು ರೂಂಗೆ 15-25 ಸಾವಿರ ರೂಪಾಯಿ (ಒಂದು ರಾತ್ರಿಗೆ) ಇದೆ. ನಿಮಗೆ ತುಂಬಾನೇ ಪ್ರೈವಸಿ ಬೇಕು ಎನಿಸಿದರೆ ಇಡೀ ವಿಲ್ಲಾನ ಬುಕ್ ಮಾಡಬಹುದು. ಅದಕ್ಕೆ ನೀವು ಪೇ ಮಾಡಬೇಕರಿವುದು ಬರೋಬ್ಬರಿ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ.

View this post on Instagram

A post shared by Gauri Khan (@gaurikhan)

ಇದು ಹಿಲ್​ ಸ್ಟೇಷನ್​​ನಲ್ಲಿ ಇರುವುದರಿಂದ ಬೇಸಿಗೆಯಲ್ಲೂ ತಂಪನ್ನು ನಿರೀಕ್ಷಿಸಬಹುದು. ಇಷ್ಟೇ ಅಲ್ಲ, ಈ ಭಾಗದಲ್ಲಿ ಹಿಮ ಕೂಡ ಬೀಳುತ್ತದೆ. ಈ ವಿಲ್ಲಾದ ಐಷಾರಾಮಿ ವ್ಯವಸ್ಥೆ ನಿರೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ತಮ್ಮದೇ ಹಳೆ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್​​ನಲ್ಲಿ ನಟಿಸಲಿದ್ದಾರೆ ಶಾರುಖ್ ಖಾನ್

ಗೌರಿ ಹಾಗೂ ಶಾರುಖ್ ಖಾನ್ ಉಳಿದುಕೊಂಡಿರೋ ಮನ್ನತ್​ ಅಲ್ಲೂ ರಿಸ್ಟೋರೇಷನ್ ಕೆಲಸಗಳು ನಡೆಯುತ್ತಿವೆ. ಇಲ್ಲಿಯೂ ಸಾಕಷ್ಟು ಬದಲಾವಣೆಗಳನ್ನು ಮಾಡಲು ಗೌರಿ ಪ್ಲ್ಯಾನ್ ರೂಪಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.