ಸಲ್ಮಾನ್ ಖಾನ್​ಗಾಗಿ ಸೆಟ್ಟೇರಿದ್ದ ಸಿನಿಮಾದಿಂದ ಹಿಂದೆ ಸರಿದಿದ್ದ ಗೋವಿಂದ; ಈಗ ಅವರಿಗೆ ಇಲ್ಲ ಬೇಡಿಕೆ

90ರ ದಶಕದಲ್ಲಿ ಗೋವಿಂದ ಅವರು ಬೇಡಿಕೆಯ ಹೀರೋ ಆಗಿದ್ದರು. ಸಲ್ಮಾನ್ ಹಾಗೂ ಗೋವಿಂದ ಮಧ್ಯೆ ಒಳ್ಳೆಯ ಗೆಳೆತನ ಇದೆ. ಸಲ್ಮಾನ್ ಖಾನ್ ಸ್ಟಾರ್ ಆಗಬೇಕು ಎಂದು ಕನಸು ಕಂಡಿದ್ದರು ಗೋವಿಂದ. ಸಲ್ಮಾನ್ ಖಾನ್​ಗೋಸ್ಕರ ಒಂದು ಸಿನಿಮಾನ ತ್ಯಾಗ ಮಾಡಿದ್ದರು ಗೋವಿಂದ. ಈ ಬಗ್ಗೆ ಅವರು ಮಾತನಾಡಿದ್ದಾರೆ.

ಸಲ್ಮಾನ್ ಖಾನ್​ಗಾಗಿ ಸೆಟ್ಟೇರಿದ್ದ ಸಿನಿಮಾದಿಂದ ಹಿಂದೆ ಸರಿದಿದ್ದ ಗೋವಿಂದ; ಈಗ ಅವರಿಗೆ ಇಲ್ಲ ಬೇಡಿಕೆ
ಸಲ್ಲು-ಗೋವಿಂದ
Edited By:

Updated on: Feb 09, 2024 | 1:13 PM

ನಟ ಸಲ್ಮಾನ್ ಖಾನ್ (Salman Khan) ಅವರು ಬಾಲಿವುಡ್​ನ ಬೇಡಿಕೆಯ ಹೀರೋ ಆಗಿ ಹೊರಹೊಮ್ಮಿದ್ದಾರೆ. ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಸೃಷ್ಟಿ ಆಗಿದೆ. ಅವರ ಸಿನಿಮಾಗಳು ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತವೆ. ಸಿನಿಮಾಗೆ ನೆಗೆಟಿವ್ ವಿಮರ್ಶೆ ಸಿಕ್ಕರೂ ಅಂಥ ಚಿತ್ರಗಳು 200 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ಉದಾಹರಣೆ ಸಾಕಷ್ಟಿದೆ. ಸಲ್ಮಾನ್ ಖಾನ್ ಅವರಿಗೆ ಮೊದಲು ಇಷ್ಟು ಬೇಡಿಕೆ ಇರಲಿಲ್ಲ. ಅವರು ಸೂಪರ್ ಸ್ಟಾರ್​ ಆಗಲು ನಟ ಗೋವಿಂದ ಪರೋಕ್ಷ ಕಾರಣ ಎಂಬುದು ಅನೇಕರ ಅಭಿಪ್ರಾಯ.

ನಟ ಗೋವಿಂದ ಅವರು 90ರ ದಶಕದಲ್ಲಿ ಬೇಡಿಕೆಯ ಹೀರೋ ಆಗಿದ್ದರು. ಸಲ್ಮಾನ್ ಹಾಗೂ ಗೋವಿಂದ ಮಧ್ಯೆ ಒಳ್ಳೆಯ ಗೆಳೆತನ ಇದೆ. ಸಲ್ಲು ದೊಡ್ಡ ಸ್ಟಾರ್ ಆಗಬೇಕು ಎಂದು ಕನಸು ಕಂಡಿದ್ದರು ಗೋವಿಂದ. ಸಲ್ಮಾನ್ ಖಾನ್​ಗೋಸ್ಕರ ಹಲವು ತ್ಯಾಗ ಮಾಡಿದ್ದಾರೆ ಗೋವಿಂದ. ಈ ಬಗ್ಗೆ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಗೋವಿಂದ ಅವರಿಗೆ 1997ರ ‘ಜುಡ್ವಾ’ ಸಿನಿಮಾದ ಆಫರ್ ಬಂದಿತ್ತು. ಆದರೆ, ಈ ಆಫರ್​ನ ಅವರು ಸಲ್ಲುಗೆ ನೀಡಿದರಂತೆ. ‘ಬನಸಾರಿ ಬಾಬು ಸಿನಿಮಾದ ಶೂಟ್ ನಡೆಯುವಾಗ ನಾನು ದೊಡ್ಡ ಸ್ಟಾರ್ ಆಗಿದ್ದೆ. ಜುಡ್ವಾ ಸಿನಿಮಾ ಕೆಲಸದಲ್ಲೂ ಬ್ಯುಸಿ ಇದ್ದೆ. ಮುಂಜಾನೆ 3 ಗಂಟೆ ಸುಮಾರಿಗೆ ಸಲ್ಮಾನ್ ಖಾನ್ ಅವರು ನನಗೆ ಕರೆ ಮಾಡಿದರು’ ಎಂದಿದ್ದಾರೆ ಗೋವಿಂದ.

‘ನೀವು ಎಷ್ಟು ಹಿಟ್ ಸಿನಿಮಾ ನೀಡಬಹುದು’ ಎಂದು ಗೋವಿಂದಗೆ ಕೇಳಿದ್ದರು ಸಲ್ಲು. ಈ ಮಾತನ್ನು ಕೇಳಿ ಏನೋ ಸಮಸ್ಯೆ ಆಗಿದೆ ಎಂಬುದು ಗೋವಿಂದ ಅವರಿಗೆ ಅರ್ಥವಾಗಿತ್ತು. ‘ನೀವು ಶೂಟ್ ಮಾಡುತ್ತಿರುವ ಜುಡ್ವಾ ಚಿತ್ರದಿಂದ ಹಿಂದೆ ಸರಿಯಿರಿ ಮತ್ತು ಅದನ್ನು ನನಗೆ ನೀಡಿ’ ಎಂದು ಸಲ್ಮಾನ್ ಕೋರಿಕೊಂಡರು. ಇದಕ್ಕೆ ಮರುಮಾತಿಲ್ಲದೆ ಒಪ್ಪಿಕೊಂಡರು ಗೋವಿಂದ. ಆ ಪ್ರಾಜೆಕ್ಟ್​ನ ಅವರು ಅರ್ಧಕ್ಕೆ ಬಿಟ್ಟರು. ಅದು ಸಲ್ಮಾನ್ ಖಾನ್ ಪಾಲಾಯಿತು. ಸಾಜಿದ್ ನಾಡಿಯಾದ್ವಾಲಾ ನಿರ್ಮಾಣದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಬಿಸ್ನೆಸ್ ಮಾಡಿತು. ಕರೀಷ್ಮಾ ಕಪೂರ್, ರಂಬಾ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್​ಗೆ ಗೊತ್ತೇ ಇರಲಿಲ್ಲ ಅರ್ಬಾಜ್ ಖಾನ್ ಲವ್​ ಸ್ಟೋರಿ; ಸಲ್ಲು ರಿಯಾಕ್ಷನ್ ಹೇಗಿತ್ತು?

ಈಗ ಸಲ್ಮಾನ್ ಖಾನ್ ಅವರು ಸ್ಟಾರ್ ಹೀರೋ ಆಗಿದ್ದಾರೆ. ಗೋವಿಂದ ಅವರಿಗೆ ಬೇಡಿಕೆಯೇ ಇಲ್ಲ. ಈ ಬಗ್ಗೆ ಗೋವಿಂದ ಅವರಿಗೆ ಬೇಸರ ಇಲ್ಲ. ಗೆಳೆಯ ಸ್ಟಾರ್ ಹೀರೋ ಆಗಿದ್ದಾನೆ ಎನ್ನುವ ಬಗ್ಗೆ ಅವರಿಗೆ ಹೆಮ್ಮೆ ಇದೆ. ಸೋಹೈಲ್ ಖಾನ್ ಹಾಗೂ ಗೋವಿಂದ ಮಧ್ಯೆ ಒಳ್ಳೆಯ ಬಾಂಡಿಗ್ ಇದೆ. ಸಿನಿಮಾ ಯಶಸ್ಸು ಅವರ ಬಾಂಡಿಂಗ್ ಮೇಲೆ ಪ್ರಭಾವ ಬೀರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:04 pm, Fri, 9 February 24