ನಟ ಗೋವಿಂದ ಸಂಸಾರದಲ್ಲಿ ಬಿರುಕು; ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ ಪತ್ನಿ ಸುನೀತಾ ಅಹುಜಾ

ನಟ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ಸಾಕಷ್ಟು ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಈ ನಡುವೆಯೇ ಇದೀಗ ಸುನೀತಾ ಅವರು ಮಗನೊಂದಿಗೆ ಫ್ಯಾಮಿಲಿ ಕೋರ್ಟ್‌ ಮೆಟ್ಟಿಲೇರಿರುವುದು ಬಾಲಿವುಡ್ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ. ವಿಚ್ಛೇದನದ ಬಗ್ಗೆ ಅವರು ನಿರ್ಧಾರ ತೆಗೆದುಕೊಂಡಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

ನಟ ಗೋವಿಂದ ಸಂಸಾರದಲ್ಲಿ ಬಿರುಕು; ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ ಪತ್ನಿ ಸುನೀತಾ ಅಹುಜಾ
Sunita Ahuja, Govinda

Updated on: Aug 19, 2026 | 3:32 PM

ಖ್ಯಾತ ಬಾಲಿವುಡ್ ನಟ ಗೋವಿಂದ (Govinda) ಹಾಗೂ ಅವರ ಪತ್ನಿ ಸುನೀತಾ ಅಹುಜಾ ನಡುವಿನ ಕೌಟುಂಬಿಕ ಕಲಹ ಮತ್ತಷ್ಟು ತೀವ್ರಗೊಂಡಿದೆ. ಇತ್ತೀಚೆಗಷ್ಟೇ ಗೋವಿಂದ ಅವರು ನಟಿ ಕೋಮಲ್ ರಾಣಿ (Komal Rani) ಜೊತೆ ಕಾಣಿಸಿಕೊಂಡಿದ್ದಕ್ಕೆ ‘ಶುಗರ್ ಡ್ಯಾಡಿ’ ಎಂಬ ಗಂಭೀರ ಆರೋಪಗಳನ್ನು ಮಾಡಿದ್ದ ಸುನೀತಾ ಅಹುಜಾ (Sunita Ahuja), ಬುಧವಾರ (ಆಗಸ್ಟ್ 19) ಮಧ್ಯಾಹ್ನ ತಮ್ಮ ಪುತ್ರ ಯಶವರ್ಧನ್ ಅಹುಜಾ ಹಾಗೂ ವಕೀಲರೊಂದಿಗೆ ಮುಂಬೈನ ಬಾಂದ್ರಾ ಫ್ಯಾಮಿಲಿ ಕೋರ್ಟ್‌ಗೆ ಭೇಟಿ ನೀಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ನ್ಯಾಯಾಲಯದ ಸಂಕೀರ್ಣದಿಂದ ಹೊರಬರುತ್ತಿದ್ದಂತೆ ಮಾಧ್ಯಮದವರು ಹಾಗೂ ಪಾಪರಾಜಿಗಳು ಅವರನ್ನು ಮುತ್ತಿಗೆ ಹಾಕಿ ಕೋರ್ಟ್‌ಗೆ ಬಂದ ಕಾರಣ ಏನೆಂದು ಪ್ರಶ್ನಿಸಿದರು. ಆದರೆ, ಈ ಕುರಿತು ನೇರವಾಗಿ ಉತ್ತರಿಸದ ಸುನೀತಾ, ತಮ್ಮದೇ ಹಾಸ್ಯಮಯ ಶೈಲಿಯಲ್ಲಿ ‘ಬರ್ತ್‌ಡೇ ಆಚರಿಸಲು ಬಂದಿದ್ದೇವೆ’ ಎಂದು ವ್ಯಂಗ್ಯವಾಗಿ ಹೇಳಿ ಕಾರು ಹತ್ತಿ ತೆರಳಿದರು. ನ್ಯಾಯಾಲಯಕ್ಕೆ ನೀಡಿದ ಭೇಟಿಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಬಹಿರಂಗ ಆಯ್ತು ಕೌಟುಂಬಿಕ ಬಿರುಕು:

ಸುಮಾರು ನಾಲ್ಕು ದಶಕಗಳಿಂದ ವೈವಾಹಿಕ ಜೀವನದಲ್ಲಿದ್ದ ಗೋವಿಂದ ಮತ್ತು ಸುನೀತಾ ದಂಪತಿಗಳ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣವಾಗಿ ಹಳಿ ತಪ್ಪಿದೆ. ಈ ಹಿಂದೆ ಹಲವು ಸಂದರ್ಶನಗಳಲ್ಲಿ ಗೋವಿಂದ ಅವರ ಪರಸ್ತ್ರೀ ಸಂಬಂಧಗಳ ಕುರಿತು ಮಾತನಾಡಿದ್ದ ಸುನೀತಾ ಇತ್ತೀಚೆಗೆ ಮತ್ತೆ ಗರಂ ಆಗಿದ್ದರು. ಗೋವಿಂದ ಅವರು ನಟಿ ಕೋಮಲ್ ರಾಣಿ ಸ್ವರ್ಣಕಾರ್ ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಾಗ ತೀವ್ರವಾಗಿ ಆಕ್ರೋಶ ಹೊರಹಾಕಿದ್ದರು.

ಶುಗರ್ ಡ್ಯಾಡಿ ಎಂದಿದ್ದ ಸುನೀತಾ:

ಚಿತ್ರದ ಪ್ರಚಾರದ ನೆಪದಲ್ಲಿ ಗೋವಿಂದ ಮತ್ತು ಕೋಮಲ್ ರಾಣಿ ಅವರು ಜೊತೆಯಾಗಿ ಓಡಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸುನೀತಾ, ‘ಮೊದಲು ಸಿನಿಮಾ ಪೂರ್ಣಗೊಳ್ಳಲಿ, ಪ್ರಚಾರ ಆಮೇಲೆ ಮಾಡಬಹುದು. ಮಗಳ ವಯಸ್ಸಿನ ಹುಡುಗಿಯೊಂದಿಗೆ ಓಡಾಡಲು ಅವರಿಗೆ ನಾಚಿಕೆಯಾಗಬೇಕು. ಅವರ ಶುಗರ್ ಡ್ಯಾಡಿ ಇಷ್ಟೊಂದು ಶ್ರೀಮಂತನಾಗಿದ್ದರೂ ಆಕೆಗೆ ಸರಿಯಾದ ಉಡುಪು ಧರಿಸಲು ಬರುವುದಿಲ್ಲ. ಅವರ ಬುದ್ಧಿ ಕೆಟ್ಟುಹೋಗಿದೆ’ ಎಂದು ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ: ‘ಶುಗರ್ ಡ್ಯಾಡಿ’ ಎಂದು ಟೀಕಿಸಿದ ಪತ್ನಿಗೆ ಬಾಲಿವುಡ್ ನಟ ಗೋವಿಂದ ಖಡಕ್ ವಾರ್ನಿಂಗ್

ಸುನೀತಾ ಅವರ ಈ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ನಟ ಗೋವಿಂದ, ಈ ರೀತಿ ತೇಜೋವಧೆ ಮಾಡುವುದನ್ನು ನಿಲ್ಲಿಸುವಂತೆ ಎಚ್ಚರಿಸಿದ್ದರು. ‘ನಿಮ್ಮ ಹಿಂದೆ ಇರುವ ಗ್ಯಾಂಗ್ ಯಾವುದು ಎಂಬುದು ಎಲ್ಲರಿಗೂ ತಿಳಿದಿದೆ. ಭವಿಷ್ಯದಲ್ಲಿ ನಿಮಗೂ ನನ್ನ ಅಗತ್ಯ ಬರಬಹುದು. ಆದ್ದರಿಂದ ಪಾಡ್‌ಕಾಸ್ಟ್‌ಗಳ ಮೂಲಕ ನನ್ನನ್ನು ಹೀಗಳೆಯುವುದನ್ನು ಹಾಗೂ ಬಹಿರಂಗ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ. ನಿಮ್ಮ ಮಿತಿಯಲ್ಲಿ ನೀವಿರಿ’ ಎಂದು ಪತ್ನಿ ಸುನೀತಾ ಅವರಿಗೆ ತಿರುಗೇಟು ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us