
ನಟಿ ದಿಶಾ ಪಟಾಣಿ (Disha Patani) ಗ್ಲಾಮರಸ್ ಲುಕ್ನಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಅವರ ಮನೆ ಬಳಿ ಗುಂಡಿನ ದಾಳಿ ಕೇಳಿಸಿದೆ. ಬರೇಲಿಯಲ್ಲಿರುವ ಅವರ ಮನೆಯಲ್ಲಿ ನಡೆದ ಶೂಟಿಂಗ್ ನಿಂದಾಗಿ ನಟಿಯ ಕುಟುಂಬದಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ. ಹಾಗಾದರೆ ದಿಶಾ ಪಟಾನಿ ಅವರ ಪೋಷಕರ ಮನೆಯ ಮೇಲೆ ಯಾರು ಗುಂಡು ಹಾರಿಸಿದರು ಮತ್ತು ಏಕೆ? ಇದಕ್ಕೆ ಉತ್ತರ ಸಿಕ್ಕಿದೆ. ದಿಶಾ ಪಟಾಣಿ ಅವರ ಸಹೋದರಿ ಮತ್ತು ಮಾಜಿ ಸೇನಾ ಅಧಿಕಾರಿ ಖುಷ್ಬೂ ಪಟಾನಿ ನೀಡಿದ ಹೇಳಿಕೆಯಿಂದಾಗಿ ಮನೆಯ ಮೇಲೆ ಗುಂಡು ಹಾರಿಸಲಾಗಿದೆ.
ಕೆಲವು ತಿಂಗಳ ಹಿಂದೆ, ಆಧ್ಯಾತ್ಮಿಕ ನಾಯಕ ಮತ್ತು ಧಾರ್ಮಿಕ ಪ್ರವಾದಿ ಅನಿರುದ್ಧಾಚಾರ್ಯ ಮಹಾರಾಜ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹುಡುಗಿಯರ ಬಗ್ಗೆ ಹೇಳಿಕೆ ನೀಡಿದ್ದರು. ‘25 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ ಅವಿವಾಹಿತ ಮಹಿಳೆಯರು ಅನೈತಿಕ ಸಂಬಂಧ ಹೊಂದಿದ್ದಾರೆ’ ಎಂದು ಅವರು ಹೇಳಿದ್ದರು. ಖುಷ್ಬೂ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡುವ ಮೂಲಕ ಅನಿರುದ್ಧಾಚಾರ್ಯ ಮಹಾರಾಜ್ ಅವರನ್ನು ಟೀಕಿಸಿದ್ದರು. ‘ಬಾಬಾ ರಾಷ್ಟ್ರವಿರೋಧಿ. ನೀವು ಅಂತಹ ಕಿಡಿಗೇಡಿಗಳನ್ನು ಬೆಂಬಲಿಸಬಾರದು. ಈ ಸಮಾಜದಲ್ಲಿರುವ ಎಲ್ಲಾ ಶಕ್ತಿಹೀನ ಜನರು ಅವರನ್ನು ಅನುಸರಿಸುತ್ತಾರೆ’ ಎಂದು ಹೇಳಿದ್ದರು.
ಇದನ್ನೂ ಓದಿ:ಸನಾತನ ಧರ್ಮಕ್ಕೆ ಅವಮಾನ ಮಾಡಿದ ನಟಿ ದಿಶಾ ಪಟಾನಿ ಮನೆ ಎದುರು ಗುಂಡಿನ ದಾಳಿ
ಸದ್ಯದ ಮಾಹಿತಿ ಮಾಹಿತಿಯ ಪ್ರಕಾರ, ರೋಹಿತ್ ಗೋದ್ರಾ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್ ಘಟನೆಯ ಹೊಣೆಯನ್ನು ಹೊತ್ತುಕೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಅವರು, ಗುಂಡಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ‘ಖುಷ್ಬು ಪೂಜ್ಯ ಸಂತರನ್ನು ಅವಮಾನಿಸಿದ್ದಾರೆ. ಅವರು ಸನಾತನ ಧರ್ಮವನ್ನು ಅವಮಾನಿಸಿದ್ದಾರೆ.. ನಮ್ಮ ದೇವರುಗಳನ್ನು ಅವಮಾನಿಸುವುದನ್ನು ಸಹಿಸಲಾಗುವುದಿಲ್ಲ. ಇದು ಕೇವಲ ಟ್ರೇಲರ್ ಆಗಿತ್ತು. ಮುಂದಿನ ಬಾರಿ ಅವರು ಅಥವಾ ಬೇರೆ ಯಾರಾದರೂ ನಮ್ಮ ಧರ್ಮವನ್ನು ಅಗೌರವಿಸಿದರೆ, ಅವರ ಮನೆಯಲ್ಲಿ ಯಾರನ್ನೂ ಜೀವಂತವಾಗಿ ಬಿಡುವುದಿಲ್ಲ’ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ. ಗುಂಡಿನ ದಾಳಿಯ ನಂತರ, ದಿಶಾ ಪಟಾನಿ ಅವರ ಮನೆಯ ಹೊರಗೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ದಿಶಾ ಪಟಾಣಿ ಅವರು ಹಿಂದಿ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರು ಮುಂಬೈನಲ್ಲೇ ಸೆಟಲ್ ಆಗಿದ್ದಾರೆ. ಈ ಘಟನೆಯಿಂದ ದಿಶಾ ಶಾಕ್ಗೆ ಒಳಲಾಗಿದ್ದಾರೆ. ದಿಶಾ ಜೊತೆ ಅವರ ಅಭಿಮಾನಿಗಳು ಕೂಡ ಶಾಕ್ನಲ್ಲಿ ಇದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:57 pm, Sat, 13 September 25