ದೇಶದ ಅತ್ಯುತ್ತಮ ಮತ್ತು ಪ್ರತಿಭಾವಂತ ಗಾಯಕರಲ್ಲಿ ಒಬ್ಬರಾದ ಅರ್ಮಾನ್ ಮಲಿಕ್ ಈ ವರ್ಷ ಜುಲೈ 22 ರಂದು 26 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಜನರು ಅವರ ಸುಮಧುರ ಧ್ವನಿಗಾಗಿ ಅವರನ್ನು ಪ್ರೀತಿಸುತ್ತಾರೆ, ಮತ್ತು ಅವರು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ 9.9 ಮಿಲಿಯನ್ ರಷ್ಟು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅರ್ಮಾನ್ ಕೇವಲ ಅದ್ಭುತ ಗಾಯಕನಲ್ಲ, ಬಹುಮುಖ ಕಲಾವಿಧನೂ ಹೌದು. ಅವರು ಹಾಡಿದ ವೈವಿಧ್ಯಮಯ ಹಾಡುಗಳೇ ಅವರ ಬಹುಮುಖತೆಗೆ ಪುರಾವೆಯಾಗಿದೆ.
ಹಿಟ್ ಸಿಂಗಲ್ಸ್ ನೀಡುವುದರಿಂದ ಹಿಡಿದು ಚಲನಚಿತ್ರಗಳಿಗೆ ಹಿಟ್ ಹಾಡುಗಳನ್ನು ಹಾಡುವವರೆಗೂ ಅರ್ಮಾನ್ ಎಲ್ಲೆಡೆ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ.
ಅರ್ಮಾನ್ ಮಲಿಕ್ ಅವರ ಕೆಲವು ಅತ್ಯುತ್ತಮ ಹಾಡುಗಳು:
ಜಬ್ ತಕ್: ಈ ಹಾಡು 2016 ರಲ್ಲಿ ಬಿಡುಗಡೆಯಾದ ‘ಎಂ.ಎಸ್.ಧೋನಿ – ದಿ ಅನ್ಟೋಲ್ಡ್ ಸ್ಟೋರಿ’ ಚಿತ್ರದಿಂದ ಬಂದಿದೆ. ಇದು ಚಿತ್ರದ ಅತ್ಯಂತ ಜನಪ್ರಿಯ ಗೀತೆಗಳಲ್ಲಿ ಒಂದಾಗಿದೆ.
ಬುದ್ದು ಸಾ ಮನ್: ಅರ್ಮಾನ್ ಹಾಡಿದ ಈ ಹಾಡು ಎಲ್ಲರ ಮನ ಸೂರೆಗೊಳಿಸುವಲ್ಲಿ ಎರಡು ಮಾತಿಲ್ಲ. 2016 ರಲ್ಲಿ ಬಿಡುಗಡೆಯಾದ ಈ ಹಾಡು ‘ಕಪೂರ್ ಅಂಡ್ ಸನ್ಸ್’ ಎಂಬ ಹಿಟ್ ಚಿತ್ರದ ಒಂದು ಭಾಗವಾಗಿದೆ.
ಪೆಹೆಲಾ ಪ್ಯಾರ್: ಈ ಹಾಡು ‘ಕಬೀರ್ ಸಿಂಗ್’ ಚಿತ್ರದ ಮ್ಯೂಸಿಕ್ ಆಲ್ಬಂ ಬಿಡುಗಡೆಯಾಗುವ ಮೊದಲೇ ದೊಡ್ಡ ಹಿಟ್ ಆಗಿತ್ತು. ಅರ್ಮಾನ್ ತಮ್ಮ ಅದ್ಭುತವಾದ ಧ್ವನಿಯಲ್ಲಿ ಒಬ್ಬರ ಮೊದಲ ಪ್ರೀತಿಯನ್ನು ವಿವರಿಸುವ ಹಾಡು ಇದಾಗಿದೆ.
ವಾಜಾ ತುಮ್ ಹೋ: ಈ ಹಾಡು 2015 ರಲ್ಲಿ ಬಿಡುಗಡೆಯಾದ ‘ಹೇಟ್ ಸ್ಟೋರಿ 3’ ಚಿತ್ರದಿಂದ ಬಂದಿದೆ. ರೋಮ್ಯಾಂಟಿಕ್ ಹಾಡುಗಳನ್ನು ಹಾಡುವಲ್ಲಿ ಅರ್ಮಾನ್ಗೆ ಸಾಟಿಯೇ ಇಲ್ಲ. ಈ ಹಾಡು ಅರ್ಮಾನ್ ರವರ ಪ್ರತಿಭೆಯ ಪುರಾವೆಯಾಗಿದೆ.
ಬುಟ್ಟಾ ಬೊಮ್ಮಾ: ನೀವು ಟಿಕ್ಟಾಕ್ ಅಥವಾ ಇನ್‌ಸ್ಟಾಗ್ರಾಮ್ ರೀಲ್ಸ್ ಅಭಿಮಾನಿಯಾಗಿದ್ದರೆ, ನೀವು ಖಂಡಿತವಾಗಿಯೂ ಈ ವೈರಲ್ ಹಾಡನ್ನು ಕೇಳಿದ್ದಿರಬೇಕು. ತೆಲುಗು ಚಿತ್ರ ‘ಅಲಾ ವೈಕುಂಠಪುರರಾಮುಲೂ’ ದ ಹಾಡಾಗಿದೆ.
ನಿಮಗೆ ಭಾಷೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದರೂ, ಅರ್ಮಾನ್ ಹಾಡುಗಳನ್ನು ಕೇವಲ ಕೇಳಿಯೂ ಆನಂದಿಸಿಬಹುದು. ಏಕೆಂದರೆ ಅವರ ಮನೋಹರವಾದ ಧ್ವನಿಗೆ ಭಾಷೆಗಳ ಮಿತಿಯಿಲ್ಲ.