ಗ್ಯಾಂಗ್ ಶೂಟೌಟ್, ಹರಿಯಾಣ್ವಿ ಗಾಯಕ ಸ್ಥಳದಲ್ಲೇ ಮೃತ

YouTuber Ankit Baliyan: ಸಿಧು ಮೂಸೆವಾಲ ಹತ್ಯೆ, ರೋಹಿತ್ ಶೆಟ್ಟಿ, ಸಲ್ಮಾನ್ ಖಾನ್, ಕಪಿಲ್ ಶರ್ಮಾ ಇನ್ನೂ ಹಲವು ಸಣ್ಣ ಮತ್ತು ದೊಡ್ಡ ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕುವ, ಮನೆ ಮುಂದೆ ಶೂಟೌಟ್ ಘಟನೆಗಳು ನಡೆಯುತ್ತಲೇ ಇವೆ. ಇದೀಗ ಹರಿಯಾಣ್ವಿ ಗಾಯಕನೋರ್ವನನ್ನು ಇದೇ ರೀತಿಯ ಲೋಕಲ್ ಗ್ಯಾಂಗ್ ಒಂದು ಅಮಾನುಷವಾಗಿ ಹತ್ಯೆ ಮಾಡಿದೆ. ಅದೂ ತೀರಾ ಕ್ಷುಲ್ಲಕ ಕಾರಣಕ್ಕೆ.

ಗ್ಯಾಂಗ್ ಶೂಟೌಟ್, ಹರಿಯಾಣ್ವಿ ಗಾಯಕ ಸ್ಥಳದಲ್ಲೇ ಮೃತ
Ankit Baliyan

Updated on: Aug 27, 2026 | 12:29 PM

ಮುಖ್ಯಾಂಶಗಳು

  • ಹರಿಯಾಣ್ವಿ ಗಾಯಕ ಅಂಕಿತ್ ನಿಧನ
  • ದುಷ್ಕರ್ಮಿಗಳ ಗುಂಡಿನ ದಾಳಿಯಲ್ಲಿ ಗಾಯಕ ಮೃತ್ಯು
  • ದಾಳಿಗೆ ಕಾರಣವೇನು? ದಾಳಿ ಮಾಡಿದ್ದು ಯಾರು?

ಉತ್ತರ ಭಾರತದಲ್ಲಿ ವಿಶೇಷವಾಗಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ ಇನ್ನಿತರೆ ಕೆಲ ಕಡೆಗಳಲ್ಲಿ ಲೋಕಲ್ ಗ್ಯಾಂಗ್​​ಗಳವರು ಕಲಾವಿದರನ್ನು (Artist) ಟಾರ್ಗೆಟ್ ಮಾಡುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗಿದೆ. ಸಿಧು ಮೂಸೆವಾಲ ಹತ್ಯೆ, ರೋಹಿತ್ ಶೆಟ್ಟಿ, ಸಲ್ಮಾನ್ ಖಾನ್, ಕಪಿಲ್ ಶರ್ಮಾ ಇನ್ನೂ ಹಲವು ಸಣ್ಣ ಮತ್ತು ದೊಡ್ಡ ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕುವ, ಮನೆ ಮುಂದೆ ಶೂಟೌಟ್ ಘಟನೆಗಳು ನಡೆಯುತ್ತಲೇ ಇವೆ. ಇದೀಗ ಹರಿಯಾಣ್ವಿ ಗಾಯಕನೋರ್ವನನ್ನು ಇದೇ ರೀತಿಯ ಲೋಕಲ್ ಗ್ಯಾಂಗ್ ಒಂದು ಅಮಾನುಷವಾಗಿ ಹತ್ಯೆ ಮಾಡಿದೆ. ಅದೂ ತೀರಾ ಕ್ಷುಲ್ಲಕ ಕಾರಣಕ್ಕೆ.

ಹರಿಯಾಣ್ವಿ ರ್ಯಾಪ್ ಗಾಯಕ ಅಂಕಿತ್ ಬಲಿಯಾನ್ ಮೇಲೆ ನಿನ್ನೆ (ಆಗಸ್ಟ್ 26) ಸಂಜೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, 20 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಅಂಕಿತ್ ಬಲಿಯಾನ್, ಹರಿಯಾಣದ ಜನಪ್ರಿಯ ಗಾಯಕ ಆಗಿರುವ ಜೊತೆಗೆ ಯೂಟ್ಯೂಬರ್ ಸಹ ಆಗಿದ್ದರು. ಅವರಿಗೆ ಸಾಕಷ್ಟು ಜನಪ್ರಿಯತೆ ಸಾಮಾಜಿಕ ಜಾಲತಾಣದಲ್ಲಿ ಇತ್ತು. ಅವರ ಕೆಲವು ಹಾಡುಗಳು ಸಖತ್ ವೈರಲ್ ಸಹ ಆಗಿದ್ದವು. ಇದೀಗ ಲೋಕಲ್ ಗ್ಯಾಂಗ್ ಒಂದರ ದ್ವೇಷಕ್ಕೆ ಗಾಯಕ ಬಲಿ ಆಗಿದ್ದಾನೆ.

ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಅಂಕಿತ್ ಬಲಿಯಾನ್ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಜಿಮ್ ಮುಗಿಸಿ ಹೊರಬಂದಾಗ ನಾಲ್ವರು ದುಷ್ಕರ್ಮಿಗಳು ಅಂಕಿತ್ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಸುಮಾರು 20 ಸುತ್ತು ಗುಂಡು ಹಾರಿಸಲಾಗಿದ್ದು, ಅಂಕಿತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಉತ್ತರ ಪ್ರದೇಶದಲ್ಲಿ ಸಕ್ರಿಯವಾಗಿರುವ ರೌಡಿಗಳ ಗುಂಪು ‘ಗೋಗಿ ಗ್ರೂಪ್’ ಈ ಕೊಲೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು, ಫೇಸ್​​ಬುಕ್, ಇನ್​​ಸ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್ ಸಹ ಹಂಚಿಕೊಂಡಿದೆ. ‘ಇದು ಕೇವಲ ಆರಂಭ ಅಷ್ಟೆ, ಎಲ್ಲರ ಸಮಯವೂ ಬರುತ್ತದೆ’ ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ.

ಅಂಕಿತ್ ಬಲಿಯಾನ್, ಗೋಗಿ ಗ್ರೂಪ್​​ನ ವೈರಿಗಳ ಜೊತೆ ಕೈಸೇರಿಸಿದ್ದರು, ವೈರಿಗಳ ಗುಂಪಿಗಾಗಿ ಒಂದು ಹಾಡನ್ನು ಸಹ ಅವರು ರೆಕಾರ್ಡ್ ಮಾಡುತ್ತಿದ್ದರು. ಅದೂ ಸಹ ಗೋಗಿ ಗ್ರೂಪ್​​ಗೆ ಸೇರಿದ ಒಂದು ಪ್ರಮುಖವಾದ ವಿಷಯವನ್ನು ಆಧರಿಸಿ ಅಂಕಿತ್ ಹಾಡು ಮಾಡಲು ತಯಾರಾಗಿದ್ದರು ಎಂಬ ಕಾರಣಕ್ಕೆ ಇದೀಗ ಗೋಗಿ ಗ್ರೂಪ್, ಅಂಕಿತ್ ಅವರನ್ನು ಕೊಂದಿದೆ.

ಇದನ್ನೂ ಓದಿ:‘ರಾಮಾಯಣ’ ಸಿನಿಮಾದ ಪೆನ್ಸಿಲ್ ಆರ್ಟ್: ಮಂಗಳೂರಿನ ಯುವ ಕಲಾವಿದ ಜೀವನ್ ಕುಲಾಲ್ ಕೈಚಳಕಕ್ಕೆ ಮೆಚ್ಚುಗೆ

ಅಂಕಿತ್, ಹರಿಯಾಣ್ವಿ ಗಾಯಕರಾಗಿದ್ದು, ಅವರು ಮಾಡಿದ್ದ ‘ಭರೀ ಕೋರ್ಟ್​ ಮೆ ಗೋಲಿ ಮಾರೆಂಗೆ ಮೇರಿ ಜಾನ್’ (ತುಂಬಿದ ಕೋರ್ಟ್​​ನಲ್ಲಿ ಗುಂಡು ಹೊಡೀತೀನಿ) ಎಂಬ ಹಾಡು ಬಹಳ ಜನಪ್ರಿಯವಾಗಿತ್ತು. ಅಂಕಿತ್, ಸಾಮಾನ್ಯವಾಗಿ ಗ್ಯಾಂಗು, ಬಂದೂಕು, ರೌಡಿಸಂ ಇವುಗಳನ್ನು ವೈಭವೀಕರಿಸುವ ಹಾಡುಗಳನ್ನೇ ಮಾಡುತ್ತಿದ್ದರು. ಅಂಕಿತ್​​ಗೆ ಕೆಲವು ಲೋಕಲ್ ಗ್ಯಾಂಗುಗಳ ಜೊತೆಗೆ ಸಂಬಂಧವೂ ಇತ್ತು ಎನ್ನಲಾಗುತ್ತದೆ. ಅಂಕಿತ್, ಗಾಯಕ ಆಗಿರುವ ಜೊತೆಗೆ ಯೂಟ್ಯೂಬರ್ ಸಹ ಆಗಿದ್ದರು. ಡೈಲಿ ವ್ಲಾಗ್, ಮ್ಯೂಸಿಕ್ ವಿಡಿಯೋ, ಪಾಡ್​​ಕಾಸ್ಟ್, ಶಾರ್ಟ್ ವಿಡಿಯೋಗಳನ್ನು ಸಹ ಅವರು ಅಪ್​​ಲೋಡ್ ಮಾಡುತ್ತಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us