ನಟಿ ಕುಬ್ರಾ ಸೇಠ್ (Kubbra Sait) ಅವರು ವೆಬ್ ಸೀರಿಸ್ನಲ್ಲಿ ನಟಿಸಿ ಹೆಚ್ಚು ಫೇಮಸ್ ಆಗಿದ್ದಾರೆ. 2018ರ ‘ಸೆಕ್ರೇಡ್ ಗೇಮ್ಸ್’ ಸೀರಿಸ್ನಲ್ಲಿ ಅವರು ಮಾಡಿದ ಪಾತ್ರ ಎಲ್ಲರ ಗಮನ ಸೆಳೆದಿತ್ತು. ಅವರ ಬಾಳಲ್ಲಿ ಹಲವು ಅಹಿತಕರ ಘಟನೆಗಳು ನಡೆದಿವೆ. ಆದರೆ, ಅವೆಲ್ಲವನ್ನು ಎದುರಿಸಿ ಅವರು ಜೀವನ ಕಟ್ಟಿಕೊಂಡಿದ್ದಾರೆ. ಆಗಾಗ ಸಂದರ್ಶನಗಳಲ್ಲಿ ಅವರು ತಮ್ಮ ಜೀವನದ ಬಗ್ಗೆ ಹೇಳಿಕೊಳ್ಳುತ್ತಾರೆ. ಈಗ ಅವರು ಮಾಲ್ಡೀವ್ಸ್ನಲ್ಲಿ (Maldives) ನಡೆದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ಆ ಘಟನೆ ಅದೆಷ್ಟು ಹಾರಿಬಲ್ ಆಗಿತ್ತು ಎಂಬುದನ್ನು ಕುಬ್ರಾ ಸೇಠ್ ವಿವರಿಸಿದ್ದಾರೆ.
ವಿಲಕ್ಷಣ ಸ್ಥಳದಲ್ಲಿ ಮದುವೆ ಆಯೋಜನೆ ಮಾಡಲಾಗಿತ್ತು. ಅದನ್ನು ಹೋಸ್ಟ್ ಮಾಡಲು ಕುಬ್ರಾ ಅವರನ್ನು ಸಂಪರ್ಕಿಸಲಾಯಿತು. ಉಳಿದುಕೊಳ್ಳಲು ಖಾಸಗಿ ಕೋಣೆ ನೀಡುತ್ತಾರೆ ಎಂದು ಭಾವಿಸಿ ವಾಸ್ತವ್ಯದ ಬಗ್ಗೆ ಅವರು ಚರ್ಚಿಸಲಿಲ್ಲ. ವಿಮಾನ ಇಳಿದ ಬಳಿಕ ಅವರು ಮದುವೆ ನಡೆಯುವ ಸ್ಥಳಕ್ಕೆ ಹೋದರು. ಬೋಟ್ನಲ್ಲಿ ಅವರಿಗೆ ಉಳಿದುಕೊಳ್ಳಲು ಹೇಳಲಾಯಿತು. ಇನ್ನೂ ಕೆಲವರ ಜೊತೆ ಅವರು ಹೊಂದಿಕೊಳ್ಳಬೇಕಿತ್ತು. ನಟಿ ಅದನ್ನು ನಿರಾಕರಿಸಿದರು. ಅವರು ಹಿಂದಿರುಗಿ ಹೋಗೋದಾಗಿ ಎಚ್ಚರಿಕೆ ನೀಡಿದರು. ಆ ಬಳಿಕವೇ ಅವರಿಗೆ ಪ್ರತ್ಯೇಕ ರೂಂ ನೀಡಲಾಯಿತು.
‘ಸಂಗೀತ ಸಮಾರಂಭದಲ್ಲಿ ಸಾಕಷ್ಟು ಅತಿಥಿಗಳಿದ್ದರು. ಅದು ವಯಸ್ಕರ ಸ್ಟ್ರಿಪ್ಟೀಸ್ ಶೋ ರೀತಿ ಇತ್ತು. ನನ್ನ ಹಿಂಭಾಗಕ್ಕೆ ಒಬ್ಬ ವಯಸ್ಸಾದ ವ್ಯಕ್ತಿ ಪಾನೀಯ ಎರಚಿದ. ಶಾಂಪೇನ್ ಚೆಲ್ಲಿ ಗಮನ ಸೆಳೆಯೋದು ಅವನ ಉದ್ದೇಶ ಆಗಿತ್ತು. ನನಗೆ ಸಿಟ್ಟು ಬಂತು. ಗ್ಲಾಸ್ ಅನ್ನು ನೆಲದ ಮೇಲೆ ಎಸೆದು ಅವನಿಗೆ ಎಚ್ಚರಿಕೆ ನೀಡಿದೆ’ ಎಂದಿದ್ದಾರೆ ಕುಬ್ರಾ.
‘ಸೇಕ್ರೆಡ್ ಗೇಮ್ಸ್’ ವೆಬ್ ಸರಣಿಯಲ್ಲಿ ಕುಬ್ರಾ ಸೇಠ್ ಮಾಡಿದ್ದ ಕುಕೂ ಎಂಬ ಪಾತ್ರ ಗಮನ ಸೆಳೆದಿತ್ತು. ಅವರು ಆ ವೆಬ್ ಸೀರಿಸ್ನಲ್ಲಿ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಅವರ ಪಾತ್ರ ಕೂಡ ಎಲ್ಲರ ಗಮನ ಸೆಳೆದಿತ್ತು. ಆದರೆ, ಈ ದೃಶ್ಯ ಶೂಟ್ ಮಾಡುವಾಗ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ . ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ: ದಾನಿಶ್ ಸೇಠ್ ಸಹೋದರಿ ಕುಬ್ರಾ ಸೇಠ್ಗೆ ‘ಫೌಂಡೇಶನ್’ ಅವಕಾಶ; ಹಾಲಿವುಡ್ ಕಲಾವಿದರ ಜತೆ ನಟನೆ
ಗಣೇಶ್ ಕಾಯ್ತೊಂಡೆಗೆ (ನವಾಜುದ್ದೀನ್ ಸಿದ್ಧಕಿ) ಕೂಕು (ಕುಬ್ರಾ ಸೇಟ್) ಮೇಲೆ ಪ್ರೀತಿ ಮೂಡುತ್ತದೆ. ಇಬ್ಬರೂ ಒಂದೆಡೆ ಸೇರುತ್ತಾರೆ. ಈ ವೇಳೆ ಇಬ್ಬರ ನಡುವೆ ಇಂಟಿಮೇಟ್ ದೃಶ್ಯಗಳಿವೆ. ಇಬ್ಬರ ನಡುವೆ ಮೊಳೆತ ಪ್ರೀತಿಯನ್ನು ವ್ಯಕ್ತಪಡಿಸಲು ಈ ದೃಶ್ಯದ ಅವಶ್ಯಕತೆ ಇತ್ತು. ಆದರೆ, ಇದನ್ನು ಶೂಟ್ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಈ ದೃಶ್ಯದ ಶೂಟ್ ಮಾಡುವಾಗ ಬರೋಬ್ಬರಿ ಏಳು ಟೇಕ್ ತೆಗೆದುಕೊಳ್ಳಲಾಗಿತ್ತು. ಇದರಿಂದ ಕುಬ್ರಾ ಆಘಾತಕ್ಕೆ ಒಳಗಾಗಿದ್ದರು. ಅಲ್ಲದೆ, ನೆಲದ ಮೇಲೆ ಬಿಕ್ಕಿಬಿಕ್ಕಿ ಅತ್ತಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:29 pm, Wed, 12 April 23