ಧರ್ಮೇಂದ್ರ ಹಾಗೂ ಹೇಮಾ ಮಾಲಿನ ನಡುವಿನ ವಯಸ್ಸಿನ ಅಂತರ ಇಷ್ಟೊಂದಾ?

ಧರ್ಮೇಂದ್ರ-ಹೇಮಾ ಮಾಲಿನಿ ಮದುವೆ, ಅವರ ವಯಸ್ಸಿನ ಅಂತರ ಹಾಗೂ ವಿವಾದಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ಮೊದಲ ಪತ್ನಿ ಮತ್ತು ಮಕ್ಕಳಿದ್ದರೂ ಧರ್ಮೇಂದ್ರ ಹೇಮಾ ಮಾಲಿನಿ ಅವರನ್ನು ವಿವಾಹವಾದರು. ನಂತರ ಡಿಯೋಲ್ ಕುಟುಂಬದೊಂದಿಗಿನ ಸಂಬಂಧ ಸುಧಾರಿಸಿದೆ. ಹೇಮಾ ಮಾಲಿನಿ ಮತ್ತು ಸನ್ನಿ ಡಿಯೋಲ್ ನಡುವಿನ ವಯಸ್ಸಿನ ಅಂತರ ಹಾಗೂ ಧರ್ಮೇಂದ್ರ ಅವರ ಇತ್ತೀಚಿನ ಆರೋಗ್ಯ ಅಪ್‌ಡೇಟ್ ಕುರಿತು ವಿವರಗಳು ಇಲ್ಲಿವೆ.

ಧರ್ಮೇಂದ್ರ ಹಾಗೂ ಹೇಮಾ ಮಾಲಿನ ನಡುವಿನ ವಯಸ್ಸಿನ ಅಂತರ ಇಷ್ಟೊಂದಾ?
ಹೇಮಾ-ಧರ್ಮೇಂದ್ರ
Updated By: ರಾಜೇಶ್ ದುಗ್ಗುಮನೆ

Updated on: Nov 12, 2025 | 8:13 AM

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ (Dharmendra) ಮತ್ತು ಅವರ ಎರಡನೇ ಪತ್ನಿ ಹೇಮಾ ಮಾಲಿನಿ ನಡುವೆ ಮದುವೆ ನಡೆದು ಸಾಕಷ್ಟು ಸಮಯ ಕಳೆದಿದೆ. ಇವರ ಸಂಬಂಧವು ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಚರ್ಚೆಯ ವಿಷಯವಾಗಿದೆ. ಹೇಮಾ ಮಾಲಿನಿಯನ್ನು ಮದುವೆ ಆಗುವಾಗ ಧರ್ಮೇಂದ್ರ ಅವರಿಗೆ ಆಗಲೇ ವಿವಾಹ ಆಗಿತ್ತು. ಆ ಸಮಯದಲ್ಲಿ ಇವರ ಮಧ್ಯೆ ತುಂಬಾನೇ ದೊಡ್ಡ ವಯಸ್ಸಿನ ಅಂತರ ಇತ್ತು.

ವಿವಾಹ ನಡೆಯುವಾಗ ಹೇಮಾ ಮಾಲಿನಿಗೆ 32 ವರ್ಷ ಹಾಗೂ ಧರ್ಮೇಂದ್ರ ಅವರಿಗೆ 45 ವರ್ಷ ಆಗಿತ್ತು. ಆದರೂ ಧರ್ಮೇಂದ್ರ ಅವರನ್ನು ವಿವಾಹವಾದರು ಹೇಮಾ ಮಾಲಿನಿ. ಆ ಸಮಯದಲ್ಲಿ, ಇಬ್ಬರ ಮದುವೆಯ ಬಗ್ಗೆ ಸಾಕಷ್ಟು ವಿವಾದಗಳು ನಡೆದವು. ಧರ್ಮೇಂದ್ರ ಅವರ ನಿರ್ಧಾರವು ಅವರ ಮನೆಯಲ್ಲಿ ಸಾಕಷ್ಟು ವಿವಾದಗಳಿಗೆ ಕಾರಣವಾಯಿತು. ಏಕೆಂದರೆ ಧರ್ಮೇಂದ್ರ ಅವರು ತಮ್ಮ ಮೊದಲ ಪತ್ನಿ ಮತ್ತು ನಾಲ್ಕು ಮಕ್ಕಳನ್ನು ಹೊಂದಿದ್ದಾಗ ಈ ಹೆಜ್ಜೆ ಇಟ್ಟಿದ್ದರು.

ಧರ್ಮೇಂದ್ರ ಹೇಮಾ ಮಾಲಿನಿಯನ್ನು ಮದುವೆಯಾದ ನಂತರ,  ಮೊದಲ ಪತ್ನಿ ಪ್ರಕಾಶ್ ಕೌರ್ ಮಮತ್ತು ತಮ್ಮ ಮಕ್ಕಳಾದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಅವರಿಂದ ದೂರ ಸರಿಯಬೇಕಾಯಿತು. ಧರ್ಮೇಂದ್ರ ಅವರ ಕುಟುಂಬದೊಂದಿಗಿನ ಸಂಬಂಧ ಹದಗೆಟ್ಟಿತ್ತು. ಆದರೆ ನಂತರ ಎಲ್ಲವೂ ಸಾಮಾನ್ಯವಾಯಿತು. ಹೇಮಾ ಮಾಲಿನಿ ಈಗ ಸನ್ನಿ ಮತ್ತು ಬಾಬಿ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಹೇಮಾ ಮಾಲಿನಿ ಮತ್ತು ಸನ್ನಿ ಡಿಯೋಲ್ ನಡುವೆ ವಯಸ್ಸಿನಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ.

ಸನ್ನಿ ತಮ್ಮ ಮಲತಾಯಿಗಿಂತ ಕೇವಲ 9 ವರ್ಷ ಚಿಕ್ಕವರು. ಹೇಮಾ ಮಾಲಿನಿ ಮತ್ತು ಬಾಬಿ ಡಿಯೋಲ್ ನಡುವೆ 21 ವರ್ಷಗಳ ವಯಸ್ಸಿನ ಅಂತರವಿದೆ. ಒಮ್ಮೆ, ಮಾತನಾಡುತ್ತಿರುವಾಗ, ಒಬ್ಬ ವ್ಯಕ್ತಿ ಹೇಮಾ ಮಾಲಿನಿಯವರನ್ನು ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ನಿಮ್ಮನ್ನು ಏನು ಕರೆಯುತ್ತಾರೆ ಎಂದು ಕೇಳಿದ್ದರು. ಇದಕ್ಕೆ ನಟಿ ‘ಹೇಮಾ ಜಿ’ ಎಂದು ಉತ್ತರಿಸಿದ್ದರು.

ಇದನ್ನೂ ಓದಿ: ನಟ ಧರ್ಮೇಂದ್ರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಮಗ ಸನ್ನಿ ಡಿಯೋಲ್

ಸದ್ಯ ಧರ್ಮೇಂದ್ರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಆಸ್ಪತ್ರೆ ಕಡೆಯಿಂದ ಯಾವುದೇ ಅಪ್​ಡೇಟ್ ಸಿಕ್ಕಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.