AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿರಾನಿ ಸ್ಕ್ರಿಪ್ಟ್ ಬಗ್ಗೆ ಆಮಿರ್ ಖಾನ್ ಅಸಮಾಧಾನ; ನಿಂತಿತು ದೊಡ್ಡ ಪ್ರಾಜೆಕ್ಟ್

ಖ್ಯಾತ ನಿರ್ದೇಶಕ ರಾಜಮೌಳಿ ಮತ್ತು ರಾಜ್​ಕುಮಾರ್ ಹಿರಾನಿ ಇಬ್ಬರೂ ದಾದಾಸಾಹೇಬ್ ಫಾಲ್ಕೆ ಬಯೋಪಿಕ್ ನಿರ್ದೇಶಿಸಲು ಮುಂದಾಗಿದ್ದರು. ಆದರೆ, ಜೂನಿಯರ್ ಎನ್​ಟಿಆರ್ ನಟಿಸಬೇಕಿದ್ದ ರಾಜಮೌಳಿ ಅವರ ಯೋಜನೆಯನ್ನು ಫಾಲ್ಕೆ ಕುಟುಂಬ ವಿರೋಧಿಸಿತು. ಮತ್ತೊಂದೆಡೆ, ಆಮಿರ್ ಖಾನ್‌ಗೆ ಸ್ಕ್ರಿಪ್ಟ್ "ಡ್ರೈ" ಎನಿಸಿದ್ದರಿಂದ ಹಿರಾನಿ ಅವರ ಸಿನಿಮಾ ಕೂಡ ನಿಂತಿದೆ.

ಹಿರಾನಿ ಸ್ಕ್ರಿಪ್ಟ್ ಬಗ್ಗೆ ಆಮಿರ್ ಖಾನ್ ಅಸಮಾಧಾನ; ನಿಂತಿತು ದೊಡ್ಡ ಪ್ರಾಜೆಕ್ಟ್
ಹಿರಾನಿ-ಆಮಿರ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 12, 2025 | 10:44 AM

Share

ಖ್ಯಾತ ನಿರ್ದೇಶಕ ಎಸ್​ಎಸ್ ರಾಜಮೌಳಿ ಅವರು ‘ದಾದಾಸಹೇಬ್ ಫಾಲ್ಕೆ’ ಸಿನಿಮಾನ ನಿರ್ದೇಶನ ಮಾಡುವ ಬದಲು ಅದನ್ನು ಪ್ರೆಸೆಂಟ್ ಮಾಡಲು ಮುಂದಾದರು. ಈ ಚಿತ್ರವನ್ನು ನಿತಿನ್ ಕಕ್ಕರ್ ನಿರ್ದೇಶನ ಮಾಡಬೇಕಿತ್ತು. ಈ ಚಿತ್ರದಲ್ಲಿ ದಾದಾಸಾಹೇಬ್ ಫಾಲ್ಕೆ ಪಾತ್ರದಲ್ಲಿ ಜೂನಿಯರ್ ಎನ್​ಟಿಆರ್ ನಟಿಸಬೇಕಿತ್ತು. ಈಗ ಸಿನಿಮಾ ನಿಂತಿದೆ ಎಂಬ ಸುದ್ದಿಯು ಹರಿದಾಡಿದೆ.  ಹೀಗಿರುವಾಗಲೇ ಹಿರಾನಿ ನಿರ್ದೇಶನ ಮಾಡಬೇಕಿದ್ದ ಚಿತ್ರವೂ ನಿಂತಿದೆಯಂತೆ.

ದಾದಾಸಾಹೇಬ್ ಫಾಲ್ಕೆ ಸಿನಿಮಾ ಮಾಡುವ ವಿಚಾರದಲ್ಲಿ ಸ್ಪರ್ಧೆ ಏರ್ಪಟ್ಟಿತ್ತು ಎಂದರೂ ತಪ್ಪಾಗಲಾರದು. ನಿತಿನ್ ಅವರು ಹೇಗೆ ಈ ಸಿನಿಮಾ ಮಾಡಲು ಆಸಕ್ತಿ ತೋರಿಸಿದ್ದರೋ ಬಾಲಿವುಡ್ ನಿರ್ದೇಶಕ ರಾಜ್​ಕುಮಾರ್ ಹಿರಾನಿ ಇದೇ ವಿಷಯ ಇಟ್ಟುಕೊಂಡು ಬಯೋಪಿಕ್ ಮಾಡಲು ನಿರ್ಧರಿಸಿದ್ದರು. ಈ ಚಿತ್ರಕ್ಕೆ ಆಮಿರ್ ಖಾನ್ ಹೀರೋ. ಆದರೆ, ಈಗ ಈ ಚಿತ್ರವೂ ಈಗ ನಿಂತಿದೆಯಂತೆ.

ಫಾಲ್ಕೆ ಕುಟುಂಬ ರಾಜ್​ಕುಮಾರ್ ಹಿರಾನಿ ಪರವಾಗಿ ನಿಂತಿತ್ತು. ಅವರ ಸಿನಿಮಾನ ಕುಟುಂಬ ಬೆಂಬಲಿಸಿತ್ತು. ರಾಜಮೌಳಿ ವರ್ಷನ್​ಗೆ ಕುಟುಂಬ ವಿರೋಧ ಹೊರಹಾಕಿತ್ತು. ಹೀಗಾಗಿ, ರಾಜಮೌಳಿ ಸಿನಿಮಾ ನಿಂತಿದೆ ಎನ್ನಲಾಗಿದೆ. ಈಗ ಹಿರಾನಿ ಸಿನಿಮಾ, ಸ್ಕ್ರಿಪ್ಟ್ ಕಾರಣದಿಂದ ನಿಂತು ಹೋಗಿದೆ ಎನ್ನಲಾಗುತ್ತಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.

ಇಂದಿನ ಜಗತ್ತಿನಲ್ಲಿ ಸಿನಿಮಾನ ಮನರಂಜನೆ ದೃಷ್ಟಿಯಿಂದ ಮಾತ್ರ ನೋಡಲಾಗುತ್ತಿದೆ. ಬಯೋಪಿಕ್ ಮಾಡುವುದಾದರೂ ಅಲ್ಲಿ ಮಸಾಲೆ ಬೇಕು. ರಾಜ್​ಕುಮಾರ್ ಹಿರಾನಿ ಮಾಡಿಕೊಂಡ ಸ್ಕ್ರಿಪ್ಟ್ ಆಮಿರ್​ಗೆ ಡ್ರೈ ಎನಿಸಿದೆಯಂತೆ. ರಾಜ್​ಕುಮಾರ್ ಹಿರಾನಿ ಸಿನಿಮಾಗಳಲ್ಲಿ ಹಾಸ್ಯ ಪ್ರಧಾನ ಆಗಿರುತ್ತವೆ. ಆದರೆ, ಈ ಸ್ಕ್ರಿಪ್ಟ್​ನಲ್ಲಿ ಅದು ಕಾಣಿಸದ ಕಾರಣ, ಸಿನಿಮಾದಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಆಮಿರ್ ಬಂದಿದ್ದಾರಂತೆ. ಇದರಿಂದ ಚಿತ್ರ ನಿಂತಿದೆ ಎನ್ನಲಾಗಿದೆ. ಈಗ ರಾಜಮೌಳಿ ಅವರು ಫಾಲ್ಕೆ ಕುಟುಂಬವನ್ನು ಸಂಪರ್ಕಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಯೂಟ್ಯೂಬ್​​​ನಲ್ಲಿ ಸಿನಿಮಾ ಬಿಡುಗಡೆ ಮಾಡಿ ಗೆದ್ದರೇ ಆಮಿರ್ ಖಾನ್, ಗಳಿಸಿದ್ದೆಷ್ಟು?

ಆಮಿರ್ ಖಾನ್ ಹಾಗೂ ಹಿರಾನಿ ‘3 ಈಡಿಯಟ್ಸ್ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಇದರ ಜೊತೆಗೆ ‘ಪಿಕೆ’ ಸಿನಿಮಾ ಕೂಡ ಮಾಡಿದ್ದರು. ಎರಡೂ ಸಿನಿಮಾಗಳು ಸೂಪರ್ ಹಿಟ್ ಆದವು. ಈ ಎನರ್ಜಿಯನ್ನು ಮ್ಯಾಚ್ ಮಾಡಲು ಮತ್ತೊಮ್ಮೆ ಸಾಧ್ಯವಾಗೋದು ಅನುಮಾನವೇ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್