ಪೈರಸಿಯಿಂದಲೇ ಚೀನಾದಲ್ಲಿ ಸೂಪರ್‌ಸ್ಟಾರ್ ಆದ ಆಮಿರ್ ಖಾನ್
ಸಿನಿಮಾ ಪೈರಸಿಯಿಂದ ನಿರ್ಮಾಪಕರಿಗೆ ನಷ್ಟವಾಗುವುದು ಸಾಮಾನ್ಯ. ಆದರೆ, ಆಮಿರ್ ಖಾನ್ ಅವರ ವಿಷಯದಲ್ಲಿ ಇದು ವಿಭಿನ್ನವಾಗಿತ್ತು. '3 ಈಡಿಯಟ್ಸ್' ಸಿನಿಮಾ ಚೀನಾದಲ್ಲಿ ಪೈರಸಿ ಮೂಲಕ ಜನರಿಗೆ ತಲುಪಿದ ಕಾರಣ, ಆಮಿರ್ ಖಾನ್ ಖ್ಯಾತಿ ಹೆಚ್ಚಿತು. ಇದರ ಫಲವಾಗಿ, 'ದಂಗಲ್' ಮತ್ತು 'ಸೀಕ್ರೆಟ್ ಸೂಪರ್‌ಸ್ಟಾರ್' ಚಿತ್ರಗಳು ಚೀನಾದಲ್ಲಿ ಅದ್ಭುತ ಯಶಸ್ಸು ಕಂಡವು.

ಪೈರಸಿ ಮಾಡಬೇಡಿ, ಥಿಯೇಟರ್ ಅಥವಾ ಒಟಿಟಿಯಲ್ಲೇ ಸಿನಿಮಾ ನೋಡಿ ಎಂಬುದು ಸಿನಿಮಾ ನಿರ್ಮಾತೃರರ ಕೋರಿಕೆ. ಆದಾಗ್ಯೂ ಸಿನಿಮಾ ಕೆಲವೊಮ್ಮೆ ದೊಡ್ಡ ಮಟ್ಟದಲ್ಲಿ ಪೈರಸಿ ಆಗಿ ಬಿಡುತ್ತದೆ. ಈ ರೀತಿ ಆದಾಗ ನಿರ್ಮಾಪಕರಿಗೆ ಸಾಕಷ್ಟು ನಷ್ಟ ಉಂಟಾಗುತ್ತದೆ. ಜನರು ಥಿಯೇಟರ್ಗೆ ಬಂದು ನೋಡಬೇಕಿರುವ ಹಣ ನಷ್ಟವಾಗುತ್ತದೆ. ಆದರೆ, ಪೈರಸಿಯಿಂದ ಆಮಿರ್ ಖಾನ್ ಅವರಿಗೆ ಲಾಭ ಆಗಿತ್ತು. ಈ ಬಗ್ಗೆ ಅವರು ಈ ಮೊದಲು ಮಾತನಾಡಿದ್ದರು.
ಆಮಿರ್ ಖಾನ್ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘3 ಈಡಿಯಟ್ಸ್’ ಸೇರಿದಂತೆ ಅನೇಕ ಚಿತ್ರಗಳು ಇದರಲ್ಲಿ ಇವೆ. ಆಮಿರ್ ಖಾನ್ ಅವರ ನಟನೆಯ ‘ದಂಗಲ್’ ಸಿನಿಮಾ ಚೀನಾದಲ್ಲಿ ರಿಲೀಸ್ ಆಗಿ ಸೂಪರ್ ಡೂಪರ್ ಹಿಟ್ ಆಯಿತು. ಇದಕ್ಕೆ ಕಾರಣಕ್ಕೆ ಆಗಿದ್ದು, ‘3 ಈಡಿಯಟ್ಸ್’ ಚಿತ್ರದ ಪೈರಸಿ ಕಾಪಿ ಎಂದರೆ ನಂಬಲೇಬೇಕು. ಈ ಬಗ್ಗೆ ಆಮಿರ್ ಖಾನ್ ಈ ಮೊದಲು ಮಾತನಾಡಿದ್ದರು.
‘ದಂಗಲ್ ಚೀನಾದಲ್ಲಿ ಅಷ್ಟು ದೊಡ್ಡ ಹಿಟ್ ಹೇಗೆ ಆಯಿತು ಎಂದು ಎಲ್ಲರೂ ಕೇಳುತ್ತಾರೆ. ಇದಕ್ಕೆ ಕಾರಣ ಪೈರಸಿ. 3 ಈಡಿಯಟ್ಸ್ ಸಿನಿಮಾ ಭಾರತದಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಪೈರೆಟ್ ವರ್ಷನ್ನ ಚೀನಾದವರು ಯಾರೋ ನೋಡಿದಾರೆ. ಹಾಗೆ ನೋಡಿ ನೋಡಿ ಇಡೀ ಚೀನಾ ನೋಡಿದೆ ಅನಿಸುತ್ತದೆ’ ಎಂದಿದ್ದಾರೆ ಅವರು.
View this post on Instagram
‘ದಂಗಲ್ ಸಿನಿಮಾ ಥಿಯೇಟರ್ಗೆ ಬಂತು. ನಾವು ಮಾಡಿದ್ದು ಏನು ಎಂದರೆ ಒಳ್ಳೆಯ ಸಿನಿಮಾ ಮಾಡಿದ್ದೆವು. 3 ಈಡಿಯಟ್ಸ್ ರಿಲೀಸ್ ಆದಮೇಲೆ ಚೀನಾದವರು ನನ್ನ ಸಾಕಷ್ಟು ಸಿನಿಮಾಗಳನ್ನು ಪೈರಸಿ ಮುಖಾಂತರ ನೋಡಿದ್ದರು ಅನಿಸುತ್ತದೆ. ಈ ಕಾರಣದಿಂದಲೇ ದಂಗಲ್ ಚಿತ್ರವನ್ನು ಚೀನಾ ಥಿಯೇಟರ್ನಲ್ಲಿ ರಿಲೀಸ್ ಮಾಡಿದಾಗ ಅಲ್ಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿದರು’ ಎಂದಿದ್ದರು ಆಮಿರ್ ಖಾನ್.
ಇದನ್ನೂ ಓದಿ: ಹಿರಾನಿ ಸ್ಕ್ರಿಪ್ಟ್ ಬಗ್ಗೆ ಆಮಿರ್ ಖಾನ್ ಅಸಮಾಧಾನ; ನಿಂತಿತು ದೊಡ್ಡ ಪ್ರಾಜೆಕ್ಟ್
ಆಮಿರ್ ಖಾನ್ ನಟನೆಯ ‘ಸೀಕ್ರೆಟ್ ಸೂಪರ್‌ಸ್ಟಾರ್’ ಸಿನಿಮಾ ಕೂಡ ಚೀನಾದಲ್ಲಿ ದೊಡ್ಡ ಗೆಲುವು ಕಂಡಿದೆ. ಈ ಸಿನಿಮಾ ಭಾರತದಲ್ಲಿ ಸಾಧಾರಣ ಎನಿಸಿಕೊಂಡಿತ್ತು. ಆದರೆ, ಚೀನಾದಲ್ಲಿ ಈ ಚಿತ್ರವನ್ನು ಜನರು ಇಷ್ಟಪಟ್ಟರು. ಭಾರತದ ಅನೇಕ ಸಿನಿಮಾಗಳು ಜಪಾನ್, ಚೀನಾ ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



