
‘ಹೇರಾ ಫೇರಿ 3’ ಸಿನಿಮಾದಿಂದ ಪರೇಶ್ ರಾವಲ್ (Paresh Rawal) ಹೊರ ನಡೆದಿದ್ದು ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. ಈ ವಿಚಾರದಲ್ಲಿ ತಪ್ಪು ಯಾರದ್ದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಿರುವಾಗಲೇ ಅಕ್ಷಯ್ ಕುಮಾರ್ ಒಡೆತನದ ನಿರ್ಮಾಣ ಸಂಸ್ಥೆ ಪರೇಶ್ಗೆ ನೋಟಿಸ್ ನೀಡಿದೆ. ಈ ನೋಟಿಸ್ನಿಂದ ಪರೇಶ್ಗೆ ಮತ್ತಷ್ಟು ಬೇಸರ ಮೂಡಿಸಿದೆ. ಹಾಗಾದರೆ ಮುಂದಿನ ದಿನಗಳಲ್ಲಿ ಪರೇಶ್ ಅವರು ಈ ಸರಣಿಗೆ ಮರಳುತ್ತಾರಾ? ಸಾಧ್ಯವೇ ಇಲ್ಲ ಎಂಬುದು ಅವರ ಸ್ಪಷ್ಟ ಮಾತು.
ಈ ಮೊದಲು ದೊಡ್ಡ ದೊಡ್ಡ ಸಿನಿಮಾಗಳಿಂದ ಸ್ಟಾರ್ ಹೀರೋಗಳು, ಪೋಷಕ ಕಲಾವಿದರು ಹೊರ ನಡೆದ ಸಾಕಷ್ಟು ಉದಾಹರಣೆ ಇದೆ. ಆದರೆ, ಕೆಲವೊಮ್ಮೆ ಮಾತುಕತೆಯಿಂದ ಸಮಸ್ಯೆ ಬಗೆಹರಿದು ಕಲಾವಿದರು ಮರಳಿದ ಸಾಕಷ್ಟು ಉದಾಹರಣೆ ಇದೆ. ‘ಹೇರಾ ಫೇರಿ 3’ ಚಿತ್ರದಲ್ಲೂ ಆ ಸಾಧ್ಯತೆ ಇದೆಯೇ ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಈ ವಿಚಾರವನ್ನು ಅಭಿಮಾನಿಯೋರ್ವ ಕೇಳಿದ್ದಾನೆ.
NO … There are Three Heroes in Hera Pheri . 🙏❤️ https://t.co/k7naUD5jiC
— Paresh Rawal (@SirPareshRawal) June 9, 2025
ಎಕ್ಸ್ (ಟ್ವಿಟರ್) ಮೂಲಕ ಅಭಿಮಾನಿಯೋರ್ವ ಪರೇಶ್ ಅವರನ್ನು ಟ್ಯಾಗ್ ಮಾಡಿ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ‘ಸರ್ ದಯವಿಟ್ಟು ಸಿನಿಮಾ ತಂಡ ಸೇರುವ ಬಗ್ಗೆ ಯೋಚಿಸಿ’ ಎಂದು ಬರೆದಿದ್ದರು. ಇದಕ್ಕೆ ಉತ್ತರಿಸಿರೋ ಪರೇಶ್ ರಾವಲ್, ‘ಇಲ್ಲ, ಹೇರಾ ಫೇರಿಯಲ್ಲಿ ಮೂರು ಹೀರೋಗಳು ಇದ್ದಾರೆ’ ಎಂದು ಹೇಳಿದ್ದಾರೆ. ಅಂದರೆ, ಇಲ್ಲಿ ಏನೋ ದೊಡ್ಡದಾಗಿಯೇ ಸಮಸ್ಯೆ ಉಂಟಾಗಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಆ ಮೂರು ಹೀರೋಗಳು ಯಾರು ಎನ್ನುವ ಪ್ರಶ್ನೆ ಸದ್ಯದ್ದು.
ಇದನ್ನೂ ಓದಿ: ‘ಅವರನ್ನು ಮೂರ್ಖ ಎನ್ನಬೇಡಿ, ಒಳ್ಳೆಯ ಸ್ನೇಹಿತ’; ಪರೇಶ್ ಪರ ಅಕ್ಷಯ್ ಕುಮಾರ್ ಬ್ಯಾಟಿಂಗ್
ಪರೇಶ್ ರಾವಲ್ ಅವರು ಈ ಸಿನಿಮಾದಿಂದ ಹೊರ ನಡೆಯಲು ಇಗೋ ಕ್ಲ್ಯಾಶ್ ಕಾರಣ ಎಂದು ಹೇಳಲಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟವಾಗಿ ಮಾಹಿತಿ ಇಲ್ಲ. ಇನ್ನು ಅಕ್ಷಯ್ ಒಡೆತನ ನಿರ್ಮಾಣ ಸಂಸ್ಥೆ ಮೂಲಕ ಪರೇಶ್ಗೆ ನೋಟಿಸ್ ಹೋಗಿದೆ. ಈ ನೋಟಿಸ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಸದ್ಯ ಪ್ರಕರಣ ಕೋರ್ಟ್ನಲ್ಲಿ ಇರುವುದರಿಂದ ಈ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದು ಅಕ್ಷಯ್ ಕುಮಾರ್ ಈ ಮೊದಲು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.