ಜಾನ್ವಿ ಕಪೂರ್​ ದಕ್ಷಿಣ ಭಾರತಕ್ಕೆ ಕಾಲಿಡದೇ ಇರಲು ಕಾರಣವೇನು? ಅವರಿಂದಲೇ ಸಿಕ್ತು ಉತ್ತರ

| Updated By: ರಾಜೇಶ್ ದುಗ್ಗುಮನೆ

Updated on: Oct 28, 2021 | 3:00 PM

ಶ್ರೀದೇವಿ ಬಾಲಿವುಡ್​ ಮಾತ್ರವಲ್ಲ ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇಲ್ಲಿಯೂ ಅವರು ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಈ ಕಾರಣಕ್ಕೆ ದಕ್ಷಿಣ ಸಿನಿ ರಂಗದಲ್ಲೂ ಅವರ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ.

ಜಾನ್ವಿ ಕಪೂರ್​ ದಕ್ಷಿಣ ಭಾರತಕ್ಕೆ ಕಾಲಿಡದೇ ಇರಲು ಕಾರಣವೇನು? ಅವರಿಂದಲೇ ಸಿಕ್ತು ಉತ್ತರ
ಜಾನ್ನವಿ ಕಪೂರ್
Follow us on

ಖ್ಯಾತ ನಟಿ ಶ್ರೀದೇವಿ ಮಗಳು ಜಾನ್ವಿ ಕಪೂರ್​ ಬಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಜಾನ್ವಿಗೆ ಹೇಳಿಕೊಳ್ಳುವಂಥ ದೊಡ್ಡ ಯಶಸ್ಸು ಸಿಗದೇ ಇದ್ದರೂ ಸ್ಟಾರ್​ ಕಿಡ್​ ಎನ್ನುವ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದೆ. ಆದರೆ, ಅವರು ಯಾವುದೇ ದಕ್ಷಿಣ ಭಾರತದ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಇದೇಕೆ ಎನ್ನುವ ಪ್ರಶ್ನೆಗೆ ಜಾನ್ವಿ ಕಡೆಯಿಂದಲೇ ಉತ್ತರ ಸಿಕ್ಕಿದೆ.

ಶ್ರೀದೇವಿ ಬಾಲಿವುಡ್​ ಮಾತ್ರವಲ್ಲ ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇಲ್ಲಿಯೂ ಅವರು ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಈ ಕಾರಣಕ್ಕೆ ದಕ್ಷಿಣ ಸಿನಿ ರಂಗದಲ್ಲೂ ಅವರ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಅದೇ ರೀತಿ ಅವರ ಮಗಳು ಜಾನ್ವಿ ಕೂಡ ದಕ್ಷಿಣಕ್ಕೆ ಕಾಲಿಡಲಿ ಎಂಬುದು ಅನೇಕರ ಬಯಕೆ. ಆದರೆ, ಅದು ಸಾಧ್ಯವಾಗಿಲ್ಲ. ಈಗ ಈ ಕುರಿತು ಜಾನ್ವಿ ಮಾತನಾಡಿದ್ದಾರೆ. ‘ದಕ್ಷಿಣ ಭಾರತದ ಸಾಕಷ್ಟು ಸಿನಿಮಾಗಳ ಕಥೆಗಳನ್ನು ಕೇಳಿದ್ದೇನೆ. ಆದರೆ, ಯಾವ ಕಥೆಯೂ ಇಷ್ಟವಾಗಿಲ್ಲ. ಈ ಸಿನಿಮಾ ನಾನು ಮಾಡಲೇಬೇಕು ಎನಿಸಿದರೆ ಅಂಥ ಸಿನಿಮಾವನ್ನು ಕೈಗೆತ್ತಿಕೊಳ್ಳುತ್ತೇನೆ’ ಎಂದಿದ್ದಾರೆ ಅವರು.

ಮಲಯಾಳಂನ ಖ್ಯಾತ ನಟ ಫಹಾದ್​ ಫಾಸಿಲ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಬಳಗದಲ್ಲಿ ಜಾನ್ವಿ ಕೂಡ ಒಬ್ಬರು. ಜಾನ್ವಿಗೆ ಫಹಾದ್ ನಟನೆಯನ್ನು ಕಂಡರೆ ಬಹಳ ಇಷ್ಟವಂತೆ. ಫಹಾದ್ ನಟನೆಯ ‘ಟ್ರಾನ್ಸ್​’ ಸಿನಿಮಾವನ್ನು ಜಾನ್ವಿ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆಯೂ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಜಾನ್ವಿ ಕಪೂರ್​​ಗೆ ಯಾಕೋ ಪದೇಪದೇ ಅದೃಷ್ಟ ಕೈ ಕೊಡುತ್ತಿದೆ. ನಟಿಸಿದ ಯಾವ ಸಿನಿಮಾಗಳೂ ಕೈ ಹಿಡಿಯುತ್ತಿಲ್ಲ. ಮೊದಲ ಸಿನಿಮಾ ‘ಧಡಕ್​’ ಬಳಿಕ ಅವರಿಗೆ ಮತ್ತೆ ದೊಡ್ಡ​ ಗೆಲುವು ಸಿಗಲೇ ಇಲ್ಲ. ‘ಗುಂಜನ್​ ಸಕ್ಸೇನಾ’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇತ್ತಾದರೂ ಸಿನಿಪ್ರಿಯರು ಅದಕ್ಕೆ ಮೆಚ್ಚುಗೆ ಸೂಚಿಸಿಲ್ಲ. ಅವರ ನಟನೆಯ ‘ರೂಹಿ’ ಸಿನಿಮಾ ಕೂಡ ನೆಲಕಚ್ಚಿತು. ಸದ್ಯ, ‘ದೋಸ್ತಾನಾ 2’ ‘ಗುಡ್​ ಲಕ್​ ಜೆರ್ರಿ’ ಮತ್ತು ‘ಮಿಲಿ’ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.

ಇದನ್ನೂ ಓದಿ: ನಾಗ ಚೈತನ್ಯ ನೆನಪನ್ನು ಸಂಪೂರ್ಣವಾಗಿ ಡಿಲೀಟ್​ ಮಾಡಿದ ಸಮಂತಾ; ಇಲ್ಲಿದೆ ಸಾಕ್ಷ್ಯ

ತಿರುಪತಿಯಲ್ಲಿ ಮದುವೆ ಆಗಲಿದ್ದಾರೆ ಶ್ರೀದೇವಿ ಪುತ್ರಿ; ಮನದಾಳದ ಮಾತು ಹಂಚಿಕೊಂಡ ಜಾನ್ವಿ ಕಪೂರ್