
ಹೊಂಬಾಳೆ ಫಿಲಮ್ಸ್, ಕನ್ನಡ ಸಿನಿಮಾಗಳ (Kannada Cinema) ಶಕ್ತಿಯನ್ನು ದೇಶಕ್ಕೆ ಪರಿಚಯಿಸಿದ ನಿರ್ಮಾಣ ಸಂಸ್ಥೆ. ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ಇಲ್ಲ. ಸೀಮಿತ ಬಜೆಟ್ನಲ್ಲಿ ಮಾತ್ರವೇ ಸಿನಿಮಾ ಮಾಡಬೇಕು ಎಂಬ ಮಾತುಗಳು ಚಾಲ್ತಿಯಲ್ಲಿದ್ದ ಸಮಯದಲ್ಲಿ, ಕನ್ನಡ ಸಿನಿಮಾಗಳ ಮೇಲೆ ಊಹೆಗೂ ಮೀರಿದ ಬಜೆಟ್ ತೊಡಗಿಸಿ ಸಿನಿಮಾಗಳನ್ನು ನಿರ್ಮಿಸಿದ್ದು ಮಾತ್ರವೇ ಅಲ್ಲದೆ, ಕನ್ನಡ ಸಿನಿಮಾಗಳನ್ನು ದೇಶದೆಲ್ಲೆಡೆ ಪ್ರದರ್ಶಿಸಿ, ಕನ್ನಡ ಚಿತ್ರರಂಗದ ಶಕ್ತಿಯನ್ನು ದೇಶಕ್ಕೆ ಸಾರಿದ ನಿರ್ಮಾಣ ಸಂಸ್ಥೆ ಇದು. ವರ್ಷದಿಂದ ವರ್ಷಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತಾರಗೊಳಿಸುತ್ತಲೇ ಸಾಗುತ್ತಿರುವ ಹೊಂಬಾಳೆ ಫಿಲಮ್ಸ್, ಮಲಯಾಳಂ, ತೆಲುಗು ಮತ್ತು ತಮಿಳಿನ ಬಳಿಕ ಇದೀಗ ಬಾಲಿವುಡ್ಗೆ ಕಾಲಿರಿಸಿದೆ.
ಹೊಂಬಾಳೆ ಫಿಲಮ್ಸ್ ಬಾಲಿವುಡ್ ಸಿನಿಮಾ ನಿರ್ಮಾಣ ಮಾಡಲಿದೆ ಎಂಬ ಸುದ್ದಿ ಹಳೆಯದ್ದೇ, ಆದರೆ ಯಾವ ಹೀರೋ ಜೊತೆಗೆ ಸಿನಿಮಾ ನಿರ್ಮಿಸಲಿದೆ ಎಂಬುದು ಸ್ಪಷ್ಟವಾಗಿರಲಿಲ್ಲ. ಇದೀಗ ಹೊಂಬಾಳೆ ತನ್ನ ಮೊದಲ ಹಿಂದಿ ಪ್ಯಾನ್ ಇಂಡಿಯಾ ಸಿನಿಮಾದ ಘೋಷಣೆ ಮಾಡಿದ್ದು, ಬಾಲಿವುಡ್ನ ಸ್ಟಾರ್ ನಟನ ಜೊತೆಗೆ ಸಿನಿಮಾ ಮಾಡಲು ಮುಂದಾಗಿದೆ.
ಅಕ್ಷಯ್ ಕುಮಾರ್, ಶಾರುಖ್ ಖಾನ್ ಅವರ ಹೆಸರುಗಳು ಈ ಮೊದಲು ಕೇಳಿ ಬಂದಿದ್ದವು. ಆದರೆ ಇದೀಗ ಆಶ್ಚರ್ಯಕರ ರೀತಿಯಲ್ಲಿ ಹೃತಿಕ್ ರೋಷನ್ ಜೊತೆಗೆ ಸಿನಿಮಾ ಘೋಷಣೆ ಮಾಡಿದೆ ಹೊಂಬಾಳೆ. ಸಿನಿಮಾದ ನಿರ್ದೇಶಕ ಹಾಗೂ ಇತರೆ ತಂತ್ರಜ್ಞರು ಮತ್ತು ಪಾತ್ರವರ್ಗವನ್ನು ಇನ್ನಷ್ಟೆ ಘೋಷಣೆ ಮಾಡಬೇಕಿದೆ. ಸಿನಿಮಾದ ಕತೆ ಅಂತಿಮಗೊಂಡಿದ್ದು, ಚಿತ್ರಕತೆ ಹಂತದಲ್ಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:‘ಕೆಜಿಎಫ್ 3’ ಬಗ್ಗೆ ಸುಳಿವು ಕೊಟ್ಟ ಹೊಂಬಾಳೆ ಫಿಲ್ಮ್ಸ್: ಯಶ್ ಅಭಿಮಾನಿಗಳಿಗೆ ಖುಷಿ
‘ಕೆಜಿಎಫ್’, ‘ಕಾಂತಾರ’, ‘ಸಲಾರ್’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಇದೀಗ ಹೃತಿಕ್ ರೋಷನ್ ಅವರ ಸಿನಿಮಾ ಸೇರಿದಂತೆ ಒಟ್ಟಿಗೆ ಎಂಟು ಸಿನಿಮಾಗಳ ಮೇಲೆ ಬಂಡವಾಳ ಹೂಡಿದಂತಾಗಿದೆ. ‘ಕಾಂತಾರ ಚಾಪ್ಟರ್ 1’, ಅನಿಮೇಷನ್ ಸಿನಿಮಾ ‘ಮಹಾವತಾರ ನರಸಿಂಹ’, ರಕ್ಷಿತ್ ಶೆಟ್ಟಿಯ ‘ರಿಚರ್ಡ್ ಆಂಟೊನಿ’, ಪ್ರಭಾಸ್ ಜೊತೆಗೆ ಒಟ್ಟಿಗೆ ಮೂರು ಸಿನಿಮಾ ಸಹಿ ಮಾಡಿದೆ. ಮಲಯಾಳಂನ ‘ಟೈಸನ್’ ಸಿನಿಮಾ. ಇದೀಗ ಬಾಲಿವುಡ್ ಸಿನಿಮಾದ ಘೋಷಣೆ ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ