ಹೃತಿಕ್​ ಕಟ್ಟುಮಸ್ತಾದ ಬಾಡಿ ಹಿಂದಿರುವ ಟ್ರೇನರ್​ ಇವರೇ; ಹುಟ್ಟುಹಬ್ಬಕ್ಕೂ ಬಿಡಲಿಲ್ಲ ವರ್ಕೌಟ್​

|

Updated on: Jan 31, 2024 | 1:16 PM

ಬಾಲಿವುಡ್​ನ ಖ್ಯಾತ ನಟ ಹೃತಿಕ್​ ರೋಷನ್​ ಅಭಿನಯದ ‘ಫೈಟರ್​’ ಸಿನಿಮಾ ಗಣರಾಜ್ಯೋತ್ಸವದ ಪ್ರಯುಕ್ತ ಜ.25ರಂದು ತೆರೆಕಂಡು ಉತ್ತಮವಾಗಿ ಕಲೆಕ್ಷನ್​ ಮಾಡಿದೆ. ಈ ಚಿತ್ರದಲ್ಲಿ ಅವರು ಯುದ್ಧ ವಿಮಾನದ ಪೈಲೆಟ್​ ಆಗಿ ನಟಿಸಿದ್ದಾರೆ. ಈ ಸಿನಿಮಾದ ಯಶಸ್ಸಿನ ನಂತರ ಹೃತಿಕ್​ ರೋಷನ್​ ಅವರ ಬೇಡಿಕೆ ಹೆಚ್ಚಾಗಿದೆ. ಈಗ ಅವರು ‘ವಾರ್​ 2’ ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಫಿಟ್ನೆಸ್​ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

ಹೃತಿಕ್​ ಕಟ್ಟುಮಸ್ತಾದ ಬಾಡಿ ಹಿಂದಿರುವ ಟ್ರೇನರ್​ ಇವರೇ; ಹುಟ್ಟುಹಬ್ಬಕ್ಕೂ ಬಿಡಲಿಲ್ಲ ವರ್ಕೌಟ್​
ಹೃತಿಕ್​ ರೋಷನ್​, ಸ್ವಪ್ನೀಲ್​ ಹಜಾರೆ
Follow us on

ನಟ ಹೃತಿಕ್​ ರೋಷನ್​ (Hrithik Roshan) ಅವರು ಮನ ಸೆಳೆಯುವ ನಟನೆಯಿಂದ ಅಭಿಮಾನಿಗಳನ್ನು ರಂಜಿಸುತ್ತಾರೆ. ಅಷ್ಟೇ ಅಲ್ಲದೇ, ಕಟ್ಟುಮಸ್ತಾದ ದೇಹದ ಕಾರಣದಿಂದಲೂ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಫಿಟ್ನೆಸ್​ ಬಗ್ಗೆ ಸಖತ್​ ಕಾಳಜಿ ಹೊಂದಿರುವ ಅವರು ಒಂದು ದಿನವೂ ವರ್ಕೌಟ್​ ತಪ್ಪಿಸುವುದಿಲ್ಲ. ಅಂದಹಾಗೆ, ಅವರಿಗೆ ವರ್ಕೌಟ್​ ಹೇಳಿಕೊಡಲು ವಿಶೇಷ ತರಬೇತುರಾರರು ಇದ್ದಾರೆ. ಅವರ ಹೆಸರು ಸ್ವಪ್ನೀಲ್​ ಹಜಾರೆ. ಇಂದು (ಜನವರಿ 31) ಸ್ವಪ್ನೀಲ್​ ಹಜಾರೆ (Swapneel Hazare) ಅವರ ಜನ್ಮದಿನ. ಅದಕ್ಕಾಗಿ ಹೃತಿಕ್​ ರೋಷನ್​ ಅವರು ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ.

ಹೃತಿಕ್​ ರೋಷನ್​ ಅವರ ಸಿಕ್ಸ್​ ಪ್ಯಾಕ್​ ಆ್ಯಬ್ಸ್​ ನೋಡಿ ಎಲ್ಲರೂ ವಾವ್​ ಎನ್ನುತ್ತಾರೆ. ಅಂಥ ಕಟ್ಟುಮಸ್ತಾದ ಬಾಡಿ ಹೊಂದಲು ಪ್ರತಿದಿನವೂ ಕಷ್ಟಪಡಬೇಕು. ಸೂಕ್ತ ರೀತಿಯ ತರಬೇತಿ ಬೇಕು. ಅದರ ಜವಾಬ್ದಾರಿಯನ್ನು ಸ್ವಪ್ನೀಲ್​ ಹಜಾರೆ ವಹಿಸಿಕೊಂಡಿದ್ದಾರೆ. ವಿಶೇಷ ಏನೆಂದರೆ, ತಮ್ಮ ಹುಟ್ಟುಹಬ್ಬದ ದಿನವೂ ಸ್ವಪ್ನೀಲ್​ ಹಜಾರೆ ಅವರು ಟ್ರೇನಿಂಗ್​ ನೀಡುವುದನ್ನು ತಪ್ಪಿಸಿಲ್ಲ.

ಇದನ್ನೂ ಓದಿ: ‘12th ಫೇಲ್​’ ಸಿನಿಮಾ ನೋಡಿ ಮನಸಾರೆ ಹೊಗಳಿದ ಹೃತಿಕ್​ ರೋಷನ್​

‘ಹುಟ್ಟಹಬ್ಬದ ದಿನದ ವರ್ಕೌಟ್​ ಮುಗಿಯಿತು. ಬರ್ತ್​ಡೇ ವರ್ಕೌಟ್​ಗಳು ತುಂಬ ಸ್ಪೆಷಲ್​ ಆಗಿರುತ್ತವೆ. ನಿಮ್ಮ ಹುಟ್ಟುಹಬ್ಬದ ದಿನವೂ ನನ್ನನ್ನು ಸಾಯಿಸಿದ್ದಕ್ಕೆ ಧನ್ಯವಾದಗಳು. ಈ ವರ್ಷ ನಾವು ಹೊಸ ಗುರಿ ಮುಟ್ಟೋಣ. ಜನ್ಮದಿನದ ಶುಭಾಶಯಗಳು’ ಎಂದು ಹೃತಿಕ್​ ರೋಷನ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಸ್ವಪ್ನೀಲ್​ ಹಜಾರೆಗೆ ವಿಶ್​ ಮಾಡಿದ್ದಾರೆ. ಇಬ್ಬರೂ ಜೊತೆಗಿರುವ ಫೋಟೋವನ್ನು ಪೋಸ್ಟ್​ ಮಾಡಿದ್ದಾರೆ.

ಹೃತಿಕ್​ ರೋಷನ್​ ಇನ್​ಸ್ಟಾಗ್ರಾಮ್​ ಪೋಸ್ಟ್​:

 

ಹೃತಿಕ್​ ರೋಷನ್​ ನಟನೆಯ ‘ಫೈಟರ್​’ ಸಿನಿಮಾ ಜನವರಿ 25ರಂದು ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್​ ಮಾಡಿದೆ. ಈ ಸಿನಿಮಾದಲ್ಲಿ ಅವರು ಭಾರತೀಯ ವಾಯುಸೇನೆಯ ಪೈಲೆಟ್​ ಆಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಈ ಚಿತ್ರದ ಗೆಲುವಿನ ಬಳಿಕ ಹೃತಿಕ್​ ರೋಷನ್​ ಅವರ ಡಿಮ್ಯಾಂಡ್​ ಹೆಚ್ಚಿದೆ. ಈಗ ಅವರು ‘ವಾರ್​ 2’ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಹಗಲಿರುಳು ವರ್ಕೌಟ್​ ಮಾಡುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಜೂನಿಯರ್​ ಎನ್​ಟಿಆರ್​ ಕೂಡ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ