ಹೃತಿಕ್ ರೋಷನ್ ಅವರು ಬಾಲಿವುಡ್ನ ಬೇಡಿಕೆಯ ಹೀರೋ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಈ ಪೈಕಿ ‘ಕ್ರಿಶ್’ ಚಿತ್ರ ಕೂಡ ಒಂದು. ‘ಕೊಯಿ ಮಿಲ್ ಗಯಾ’ ಚಿತ್ರದ ಮುಂದುವರಿದ ಭಾಗವಾಗಿ ಈ ಸಿನಿಮಾ ಮೂಡಿ ಬಂದಿತ್ತು. ಈ ಚಿತ್ರದ ಶೂಟ್ ವೇಳೆ ಹೃತಿಕ್ ರೋಷನ್ ಅವರು ಸಾವಿನ ಕದ ತಟ್ಟಿ ಬಂದಿದ್ದರು. ಅದೃಷ್ಟವಶಾತ್ ಅವರು ಬಚಾವ್ ಆಗಿದ್ದರು.
‘ಕ್ರಿಶ್’ ಚಿತ್ರವನ್ನು ಹೃತಿಕ್ ತಂದೆ ರಾಕೇಶ್ ರೋಷನ್ ನಿರ್ದೇಶನ ಮಾಡಿದ್ದರು. ಇದು ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ದೃಶ್ಯ ಇತ್ತು. ಈ ಚಿತ್ರದ ಶೂಟ್ ಮಾಡುವಾಗ 2005ರಲ್ಲಿ ಒಂದು ದುರಂತ ನಡೆಯುವುದರಲ್ಲಿ ಇತ್ತು. ಅದರಿಂದ ಹೃತಿಕ್ ಬಚಾವ್ ಆಗಿದ್ದರು.
‘ಕ್ರಿಶ್’ ಸಿನಿಮಾ ಶೂಟ್ ಮಾಡುವಾಗ 50 ಅಡಿ ಕಟ್ಟಡದಿಂದ ಕೆಳಕ್ಕೆ ಬೀಳುವವರಾಗಿದ್ದರು. ಅದೃಷ್ಟವಶಾತ್ ಇದರಿಂದ ಅವರು ಬಚಾವ್ ಆದರು. ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಜಿಗಿಯುವ ದೃಶ್ಯ ಇತ್ತು. ಈ ವೇಳೆ ಸೇಫ್ ಕೇಬಲ್ ಧರಿಸಿದ್ದರು. ಆದರೆ, ಕೇಬಲ್ ಕಟ್ ಆಗಿತ್ತು. ಅದೃಷ್ಟವಶಾತ್ ಮುಂಜಾಗೃತ ಕ್ರಮವಾಗಿ ಹಾಕಿದ್ದ ನೆಟ್ ಮೇಲೆ ಹೃತಿಕ್ ಬಿದ್ದರು. ಅದು ಇಲ್ಲದಿದ್ದರೆ ಹೃತಿಕ್ ಸಾವಿನ ದಡ ಸೇರುತ್ತಿದ್ದರು.
ಈ ಘಟನೆ ವೇಳೆ ಹೃತಿಕ್ ಬೆನ್ನಿನ ಭಾಗಕ್ಕೆ ಪೆಟ್ಟಾಗಿತ್ತು. ಕೆಲವು ದಿನಗಳ ಕಾಲ ಅವರು ವಿಶ್ರಾಂತಿ ಪಡೆದರು. ನಂತರ ಅವರು ನಟನಗೆ ಮರಿದರು. ಈ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಸದ್ಯ ಹೃತಿಕ್ ರೋಷನ್ ಅವರು ‘ಕ್ರಿಶ್ 4’ ಸಿನಿಮಾದಲ್ಲಿ ನಟಿಸಬೇಕಿದೆ.
ಇದನ್ನೂ ಓದಿ: ಹೃತಿಕ್ ರೋಷನ್ ಮಕ್ಕಳ ಫೋಟೋ ವೈರಲ್; ಚಿತ್ರರಂಗದ ಎಂಟ್ರಿಗೆ ಕಾದಿರುವ ಫ್ಯಾನ್ಸ್
‘ಕ್ರಿಶ್ 4’ ಸಿನಿಮಾದ ನಿರ್ದೇಶನವನ್ನು ರಾಕೇಶ್ ಮಾಡಬೇಕಿತ್ತು. ಆದರೆ, ಅವರಿಗೆ ವಯಸ್ಸಾಗಿರುವುದರಿಂದ ಈಗಾಗಲೇ ನಿರ್ದೇಶನಕ್ಕೆ ಬ್ರೇಕ್ ಹಾಕಿದ್ದಾರೆ. ‘ಕ್ರಿಶ್ 4’ ಚಿತ್ರವನ್ನು ಅವರೇ ನಿರ್ಮಾಣ ಮಾಡಲಿದ್ದಾರೆ. ಆದರೆ, ಈ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ ಎಂಬುದು ಇನ್ನೂ ನಿರ್ಧಾರ ಆಗಿಲ್ಲ. ಹೃತಿಕ್ ನಟನೆಯ ‘ಫೈಟರ್’ ಈ ವರ್ಷ ರಿಲೀಸ್ ಆಗಿದೆ. ಸದ್ಯ ಅವರು ‘ವಾರ್ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.