ಹೃತಿಕ್ ರೋಷನ್ ಮಕ್ಕಳ ಫೋಟೋ ವೈರಲ್; ಚಿತ್ರರಂಗದ ಎಂಟ್ರಿಗೆ ಕಾದಿರುವ ಫ್ಯಾನ್ಸ್

ನಟ ಹೃತಿಕ್ ರೋಷನ್​ ಅವರು ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವ ಅವರು ಸಖತ್ ಬೇಡಿಕೆ ಹೊಂದಿದ್ದಾರೆ. ಈಗ ಅವರ ಮಕ್ಕಳು ಬೆಳೆದು ದೊಡ್ಡವರಾಗಿದ್ದಾರೆ. ಅವರು ಯಾವಾಗ ಬಾಲಿವುಡ್​ಗೆ ಎಂಟ್ರಿ ನೀಡುತ್ತಾರೆ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಮಕ್ಕಳ ಫೋಟೋ ವೈರಲ್ ಆಗಿದೆ.

ಹೃತಿಕ್ ರೋಷನ್ ಮಕ್ಕಳ ಫೋಟೋ ವೈರಲ್; ಚಿತ್ರರಂಗದ ಎಂಟ್ರಿಗೆ ಕಾದಿರುವ ಫ್ಯಾನ್ಸ್
ರಿಹಾನ್ ರೋಷನ್​, ಸುಸಾನೆ ಖಾನ್, ಹೃದಾನ್ ರೋಷನ್
Follow us
ಮದನ್​ ಕುಮಾರ್​
|

Updated on:Nov 07, 2024 | 7:43 PM

ಹಿಂದಿ ಚಿತ್ರರಂಗಕ್ಕೆ ರೋಷನ್ ಕುಟುಂಬ ಸಾಕಷ್ಟು ಕೊಡುಗೆ ನೀಡಿದೆ. ಹೃತಿಕ್ ರೋಷನ್ ಅವರು ಸೂಪರ್​ ಸ್ಟಾರ್​ ನಟನಾಗಿ ಮಿಂಚಿದ್ದಾರೆ. ಅವರ ತಂದೆ ರಾಕೇಶ್ ರೋಷನ್ ನಿರ್ದೇಶಕನಾಗಿ, ನಿರ್ಮಾಪಕನಾಗಿ ಹೆಸರು ಮಾಡಿದ್ದಾರೆ. ಚಿಕ್ಕಪ್ಪ ರಾಜೇಶ್ ರೋಷನ್ ಮ್ಯೂಸಿಕ್ ಡೈರೆಕ್ಟರ್​ ಆಗಿದ್ದಾರೆ. ಹೃತಿಕ್ ರೋಷನ್ ಅವರ ಮಕ್ಕಳಾದ ಹೃದಾನ್ ರೋಷನ್​ ಮತ್ತು ರಿಹಾನ್ ರೋಷನ್​ ಕೂಡ ಚಿತ್ರರಂಗಕ್ಕೆ ಕಾಲಿಡಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ಈ ಊಹೆಗೆ ಕಾರಣ ಆಗಿರುವುದ ಒಂದು ಫೋಟೋ. ಹೌದು, ಹೃತಿಕ್ ರೋಷನ್​ ಅವರ ಇಬ್ಬರು ಗಂಡು ಮಕ್ಕಳ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಹೃತಿಕ್ ರೋಷನ್​ ಅವರು 2000ನೇ ಇಸವಿಯಲ್ಲಿ ಸುಸಾನೆ ಖಾನ್ ಜೊತೆ ಮದುವೆ ಆದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು. 2014ರಲ್ಲಿ ಹೃತಿಕ್ ಮತ್ತು ಸುಸಾನೆ ಖಾನ್ ವಿಚ್ಛೇದನ ಪಡೆದರು. ಆದರೆ ಮಕ್ಕಳ ಪಾಲನೆಯ ಜವಾಬ್ದಾರಿಯನ್ನು ಇಬ್ಬರೂ ವಹಿಸಿಕೊಂಡಿದ್ದಾರೆ. ತಾಯಿ ಸುನಾನೆ ಜೊತೆ ಹೃದಾನ್ ಮತ್ತು ರಿಹಾನ್ ಬೆಳೆದಿದ್ದಾರೆ. ಮಕ್ಕಳ ಫೋಟೋವನ್ನು ಸುಸಾನೆ ಖಾನ್ ಅವರು ಶೇರ್​ ಮಾಡಿಕೊಂಡಿದ್ದಾರೆ.

View this post on Instagram

A post shared by Sussanne Khan (@suzkr)

ಮಕ್ಕಳು ತಮಗಿಂತಲೂ ಎತ್ತರಕ್ಕೆ ಬೆಳೆದು ನಿಂತಿರುವುದನ್ನು ನೋಡಲು ಸುಸಾನೆ ಖಾನ್ ಅವರಿಗೆ ಖುಷಿ ಆಗುತ್ತಿದೆ. ಆದ್ದರಿಂದ ಈ ಫೋಟೋವನ್ನು ಅವರು ಹೆಮ್ಮೆಯಿಂದ ಶೇರ್​ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಹೃದಾನ್ ಮತ್ತು ರಿಹಾನ್ ಅವರನ್ನು ನೋಡಿದ ಅಭಿಮಾನಿಗಳು ಹಲವು ರೀತಿಯಲ್ಲಿ ಕಮೆಂಟ್ಸ್ ಮಾಡುತ್ತಿದ್ದಾರೆ. ಇವರಿಬ್ಬರ ಅಂದ-ಚಂದಕ್ಕೆ ನೆಟ್ಟಿಗರು ಮರುಳಾಗಿದ್ದಾರೆ.

ಇದನ್ನೂ ಓದಿ: ಹೃತಿಕ್ ರೋಷನ್​ ಫ್ಯಾಮಿಲಿ ಬಗ್ಗೆ ನೆಟ್​ಫ್ಲಿಕ್ಸ್​ ಡಾಕ್ಯುಮೆಂಟರಿ; ಯಾವಾಗ ಪ್ರಸಾರ?

‘ಹೃತಿಕ್ ರೋಷನ್ ಮಕ್ಕಳು ಚಿತ್ರರಂಗಕ್ಕೆ ಬರೋದು ಗ್ಯಾರಂಟಿ. ಅಪ್ಪನ ರೀತಿಯೇ ಅವರು ತುಂಬ ಸುಂದರವಾಗಿದ್ದಾರೆ’ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಸೆಲೆಬ್ರಿಟಿಗಳ ಮಕ್ಕಳು ಚಿತ್ರರಂಗಕ್ಕೆ ಕಾಲಿಡುವುದು ಹೊಸದೇನೂ ಅಲ್ಲ. ಅವರಿಗೆ ಸುಲಭವಾಗಿ ಎಂಟ್ರಿ ಸಿಗುತ್ತದೆ. ಅದಕ್ಕೆ ನೆಪೋಟಿಸಂ ಎನ್ನುತ್ತಾರೆ. ಹೃತಿಕ್ ರೋಷನ್ ಮಕ್ಕಳು ನೆಪೋಟಿಸಂ ಹಾದಿಯಲ್ಲಿ ಚಿತ್ರರಂಗಕ್ಕೆ ಬರುತ್ತಾರಾ ಅಥವಾ ಬೇರೆ ಕ್ಷೇತ್ರವನ್ನು ಆಯ್ದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕು. ಸದ್ಯಕ್ಕೆ ಹೃತಿಕ್ ರೋಷನ್ ಅವರು ಹೊಸ ಗೆಳತಿ ಸಬಾ ಆಜಾದ್ ಜೊತೆ ರಿಲೇಷನ್​ಶಿಪ್​ನಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:41 pm, Thu, 7 November 24

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ