ಹೃತಿಕ್ ರೋಷನ್​ ಫ್ಯಾಮಿಲಿ ಬಗ್ಗೆ ನೆಟ್​ಫ್ಲಿಕ್ಸ್​ ಡಾಕ್ಯುಮೆಂಟರಿ; ಯಾವಾಗ ಪ್ರಸಾರ?

ಹೊಸ ಹೊಸ ಬಗೆಯ ಮನರಂಜನಾ ಕಾರ್ಯಕ್ರಮಗಳನ್ನು ಜನರಿಗೆ ನೀಡುವಲ್ಲಿ ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ಹಿಂದಿ ಚಿತ್ರರಂಗದ ಖ್ಯಾತ ಸೆಲೆಬ್ರಿಟಿಗಳ ಬಗ್ಗೆ ಡಾಕ್ಯುಮೆಂಟರಿ ಮಾಡಲಾಗುತ್ತಿದೆ. ಹೃತಿಕ್ ರೋಷನ್​ ಅವರ ಕುಟುಂಬದವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯ ಬಗ್ಗೆ ಇದರಲ್ಲಿ ಮಾಹಿತಿ ನೀಡಲಾಗುವುದು. ಇಂಟರೆಸ್ಟಿಂಗ್​ ವಿಷಯಗಳು ಕೂಡ ಇರಲಿವೆ.

ಹೃತಿಕ್ ರೋಷನ್​ ಫ್ಯಾಮಿಲಿ ಬಗ್ಗೆ ನೆಟ್​ಫ್ಲಿಕ್ಸ್​ ಡಾಕ್ಯುಮೆಂಟರಿ; ಯಾವಾಗ ಪ್ರಸಾರ?
ಹೃತಿಕ್​ ರೋಷನ್​, ರಾಕೇಶ್​ ರೋಷನ್​
Follow us
ಮದನ್​ ಕುಮಾರ್​
|

Updated on: Sep 15, 2024 | 4:57 PM

ಕೆಲವೇ ದಿನಗಳ ಹಿಂದೆ ‘ಅಮೇಜಾನ್​ ಪ್ರೈಂ ವಿಡಿಯೋ’ ಒಟಿಟಿಯಲ್ಲಿ ‘ದಿ ಆ್ಯಂಗ್ರಿ ಯಂಗ್​ ಮೆನ್​’ ಡಾಕ್ಯುಮೆಂಟರಿ ಬಿಡುಗಡೆ ಆಯಿತು. ಅದರಲ್ಲಿ ಆ ಕಾಲದ ಬಹುಬೇಡಿಕೆಯ ಕಥೆಗಾರರಾದ ಸಲೀಂ ಖಾನ್​ ಮತ್ತು ಜಾವೇದ್​ ಅಖ್ತರ್​ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗಿದೆ. ಅದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್​ನ ಇನ್ನುಳಿದ ಸೆಲೆಬ್ರಿಟಿಗಳ ಜೀವನದ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಾಣ ಮಾಡಲು ಒಟಿಟಿ ಸಂಸ್ಥೆಗಳು ಆಕಸ್ತಿ ತೋರಿಸಿವೆ. ಹೃತಿಕ್ ರೋಷನ್​ ಅವರ ಫ್ಯಾಮಿಲಿ ಕುರಿತು ನೆಟ್​ಫ್ಲಿಕ್ಸ್​ ಒಂದು ಡಾಕ್ಯುಮೆಂಟರಿ ನಿರ್ಮಾಣ ಮಾಡಲಿದೆ.

ಹಲವು ವರ್ಷಗಳಿಂದ ಹೃತಿಕ್​ ರೋಷನ್​ ಅವರ ಕುಟುಂಬದವರು ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಹೃತಿಕ್​ ರೋಷನ್​ ತಂದೆ ರಾಕೇಶ್​ ರೋಷನ್​ ಅವರು ಹಿಂದಿ ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕ ಮತ್ತು ನಿರ್ದೇಶಕ. ‘ಕೊಯಿ ಮಿಲ್​ ಗಯಾ’, ‘ಕ್ರಿಷ್​’ ಮುಂತಾದ ಸೂಪರ್​ ಹಿಟ್​ ಸಿನಿಮಾಗಳನ್ನು ಅವರು ನೀಡಿದ್ದಾರೆ. ಅವರ ತಂದೆ ರೋಷನ್​ ಸಂಗೀತ ನಿರ್ದೇಶಕರಾಗಿದ್ದರು. ರಾಕೇಶ್ ರೋಷನ್​ ಸಹೋದರ ರಾಜೇಶ್​ ರೋಷನ್​ ಕೂಡ ಸಂಗೀತ ನಿರ್ದೇಶಕರು.

ಇನ್ನು, ಹೃತಿಕ್​ ರೋಷನ್​ ಬಗ್ಗೆ ಹೊಸದಾಗಿ ಹೇಳಬೇಕಾದ್ದಿಲ್ಲ. ಬಾಲಿವುಡ್​ನ ಬಹುಬೇಡಿಕೆಯ ಹೀರೋಗಳಲ್ಲಿ ಅವರು ಕೂಡ ಪ್ರಮುಖರು. ಅವರ ಇಡೀ ಫ್ಯಾಮಿಲಿಯ ಕೆಲವು ಇನ್​ಸೈಡ್​​ ಮಾಹಿತಿ ತಿಳಿದುಕೊಳ್ಳಲು ಅಭಿಮಾನಿಗಳಿಗೆ ಆಸಕ್ತಿ ಇದೆ. ಹಾಗಾಗಿ ‘ದಿ ರೋಷನ್ಸ್​’ ಶೀರ್ಷಿಕೆಯಲ್ಲಿ ಡಾಕ್ಯುಮೆಂಟರಿ ನಿರ್ಮಾಣ ಆಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್​ ತಿಂಗಳಲ್ಲಿ ಇದರ ಪ್ರಸಾರ ಆಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ‘ಪ್ರಭಾಸ್​ ಮುಂದೆ ಹೃತಿಕ್​ ರೋಷನ್​ ಏನೇನೂ ಅಲ್ಲ’: ವೈರಲ್​ ವಿಡಿಯೋದಲ್ಲಿ ಅಲ್ಲು ಅರ್ಜುನ್​ ಹೇಳಿಕೆ

ಈ ಸಾಕ್ಷ್ಯಚಿತ್ರದಲ್ಲಿ ಹಿಂದಿ ಚಿತ್ರರಂಗದ ಅನೇಕರು ಹೃತಿಕ್​ ರೋಷನ್​ ಕುಟುಂಬದ ಬಗ್ಗೆ ಮಾತನಾಡಲಿದ್ದಾರೆ. 2025ರ ಜನವರಿಗೆ ಹೃತಿಕ್ ರೋಷನ್​ ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಕಳೆಯಲಿದೆ. ಅವರು ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ‘ಕಹೋ ನಾ ಪ್ಯಾರ್​ ಹೈ’ ಸಿನಿಮಾ 2000ನೇ ಇಸವಿಯಲ್ಲಿ ಬಿಡುಗಡೆ ಆಗಿತ್ತು. ಈ ಎಲ್ಲ ವಿಚಾರಗಳ ಬಗ್ಗೆ ‘ದಿ ರೋಷನ್ಸ್​’ ಡಾಕ್ಯುಮೆಂಟರಿಯಲ್ಲಿ ಅವರು ಮಾತನಾಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.