Hrithik Roshan: ಹೊಸ ಗೆಳತಿ ಸಿಕ್ಕಿದ್ಮೇಲೆ ಗಡ್ಡಕ್ಕೆ ಬೈ ಬೈ ಹೇಳಲು ಪ್ಲಾನ್ ಮಾಡಿದ್ರಾ ಹೃತಿಕ್? ಇಲ್ಲಿದೆ ಅಸಲಿ ಸಮಾಚಾರ

| Updated By: shivaprasad.hs

Updated on: May 28, 2022 | 6:55 AM

Hrithik Roshan Beard Look | Vikram Vedha: ಬಾಲಿವುಡ್ ನಟ ಹೃತಿಕ್ ರೋಷನ್ ಗಡ್ಡದ ಲುಕ್​ಗೆ ಬೈ ಬೈ ಹೇಳುವುದಾಗಿ ಘೋಷಿಸಿದ್ದಾರೆ. ಇತ್ತೀಚೆಗೆ ಹೊಸ ಗೆಳತಿ ಸಬಾ ಆಜಾದ್ ಜತೆ ಸುತ್ತಾಡುತ್ತಿರುವ ಹೃತಿಕ್ ಗೆಟಪ್ ಬದಲಾಯಿಸಲು ಅಸಲಿ ಕಾರಣವೇನು?

Hrithik Roshan: ಹೊಸ ಗೆಳತಿ ಸಿಕ್ಕಿದ್ಮೇಲೆ ಗಡ್ಡಕ್ಕೆ ಬೈ ಬೈ ಹೇಳಲು ಪ್ಲಾನ್ ಮಾಡಿದ್ರಾ ಹೃತಿಕ್? ಇಲ್ಲಿದೆ ಅಸಲಿ ಸಮಾಚಾರ
ಗಡ್ಡದ ಅವತಾರದಲ್ಲಿ ಹೃತಿಕ್ ರೋಷನ್
Image Credit source: Hrithik Roshan/ Instagram
Follow us on

ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan)​ ಕಳೆದ ಕೆಲವು ಸಮಯದಿಂದ ಸಖತ್ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ರಿಲೇಶನ್​ಶಿಪ್ ವಿಚಾರ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ನಟಿ ಸಬಾ ಆಜಾದ್ (Saba Azad) ಜತೆ ಹೃತಿಕ್ ಸುತ್ತಾಡುತ್ತಿದ್ದಾರೆ. ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡಾಗ ಹೃತಿಕ್ ಹಾಗೂ ಸಬಾ ಮುಖ ಮರೆಸಿಕೊಳ್ಳಲು ಯತ್ನಿಸಿದ್ದರು. ನಂತರದಲ್ಲಿ ಕ್ಯಾಮೆರಾಗಳಿಂದ ತಪ್ಪಿಸಿಕೊಂಡೇ ಈರ್ವರೂ ಓಡಾಡುತ್ತಿದ್ದರು. ಆದರೆ ಪ್ರಸ್ತುತ ಈರ್ವರೂ ಸಾರ್ವಜನಿಕವಾಗಿ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬಾಲಿವುಡ್​ನ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ಹುಟ್ಟುಹಬ್ಬದ ಪಾರ್ಟಿಯಲ್ಲೂ ಹೃತಿಕ್-ಸಬಾ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಹೃತಿಕ್ ಗಣ್ಯರಿಗೆ ಗೆಳತಿಯನ್ನು ತಾವೇ ಪರಿಚಯ ಮಾಡಿಸಿಕೊಟ್ಟಿದ್ದರು. ಈ ಮೂಲಕ ಈರ್ವರೂ ಸಂಬಂಧವನ್ನು ಮೊದಲ ಬಾರಿಗೆ ಅಧಿಕೃತವಾಗಿ ಹೇಳಿಕೊಂಡಿದ್ದರು. ಇದೀಗ ಸಬಾ ಜತೆ ಸುತ್ತಾಡುತ್ತಿರುವ ಸಮಯದಲ್ಲೇ ತಮ್ಮ ಗೆಟಪ್​ ಬದಲಾಯಿಸಲು ಮುಂದಾಗಿದ್ದಾರೆ ನಟ. ಕಳೆದ ಕೆಲವು ಸಮಯದಿಂದ ಬಿಟ್ಟಿರುವ ಗಡ್ಡಕ್ಕೆ ಬೈ ಬೈ ಹೇಳಲಿದ್ದೇನೆ ಎಂದಿದ್ದಾರೆ ‘ಕ್ರಿಶ್’ ಖ್ಯಾತಿಯ ಹೃತಿಕ್.

ತಮ್ಮ ಗಡ್ಡದ ವಿಚಾರದ ಬಗ್ಗೆ ಹೃತಿಕ್ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ‘ಕೊನೆಯ ರಾತ್ರಿ.. ಹಾಗೆಯೇ ಗಡ್ಡದೊಂದಿಗಿರುವ ಕೊನೆಯ ಪೋಸ್ಟ್​’ ಎಂದು ಬರೆದುಕೊಂಡಿರುವ ಹೃತಿಕ್, ಫೋಟೋ ಹಂಚಿಕೊಂಡಿದ್ದಾರೆ. ಸದ್ಯ ಹೃತಿಕ್ ಪೋಸ್ಟ್​ಗೆ ಬಗೆಬಗೆಯ ಕಾಮೆಂಟ್​ಗಳು ಬಂದಿದ್ದು, ಅಭಿಮಾನಿಗಳು ಇದೇ ಲುಕ್​ ಉಳಿಸಿಕೊಳ್ಳುವಂತೆಯೂ ಮನವಿ ಮಾಡಿದ್ದಾರೆ. ಮತ್ತೆ ಕೆಲವರು ಹೊಸ ಗೆಳತಿ​ ಬಂದಮೇಲೆ ಗಡ್ಡಕ್ಕೆ ಬೈಬೈ ಹೇಳುತ್ತಿದ್ದೀರಾ ಎಂದು ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ
ಅಜಯ್ ದೇವಗನ್-ಕಿಚ್ಚ ಸುದೀಪ್ ಬಾಕ್ಸ್ಆಫೀಸ್ ಕ್ಲ್ಯಾಶ್​ಗೆ ಬ್ರೇಕ್​; ರಿಲೀಸ್ ಡೇಟ್ ಮುಂದಕ್ಕೆ
Sruthi Hariharan: ಶೃತಿ ಹರಿಹರನ್​ ಬತ್ತಳಿಕೆಯಲ್ಲಿ ಎಷ್ಟು ಚಿತ್ರಗಳಿವೆ? ಹೊಸ ಸಿನಿಮಾದ ಬಗ್ಗೆ ಹೊರಬಿತ್ತು ವಿಶೇಷ ಮಾಹಿತಿ
ಒಂದೇ ವಾರಕ್ಕೆ ಚಿತ್ರಮಂದಿರದಿಂದ ಸಂಪೂರ್ಣವಾಗಿ ಕಾಲ್ಕಿತ್ತ ಕಂಗನಾ ಸಿನಿಮಾ; ‘ಧಾಕಡ್’ ಗಳಿಸಿದ್ದೆಷ್ಟು?
Vikrant Rona: ಕನ್ನಡದಲ್ಲೇ ಮಾತನಾಡಿದ ಜಾಕ್ವೆಲಿನ್; ‘ರಕ್ಕಮ್ಮ’ಗಾಗಿ ಮೊದಲ ಬಾರಿಗೆ ರೀಲ್ಸ್ ಮಾಡಿದ ಕಿಚ್ಚ ಸುದೀಪ್

ಹೃತಿಕ್ ಹೊಸ ಲುಕ್ ಇಲ್ಲಿದೆ:

ಇದನ್ನೂ ಓದಿ: ಅಬ್ಬಬ್ಬಾ.. ಮದುವೆಯಲ್ಲಿ ಡ್ಯಾನ್ಸ್ ಮಾಡೋಕೆ ಶಾರುಖ್​, ಸಲ್ಮಾನ್​, ಹೃತಿಕ್ ಪಡೆಯುವ ಸಂಭಾವನೆ ಇಷ್ಟೊಂದಾ?

ವಾಸ್ತವವಾಗಿ ಹೃತಿಕ್ ಗಡ್ಡ ತೆಗೆಯುತ್ತಿರುವುದಕ್ಕೆ ಅಸಲಿ ಕಾರಣ ಬೇರೆಯೇ ಇದೆ. ಸದ್ಯ ‘ವಿಕ್ರಂ ವೇದ’ ಚಿತ್ರದ ಚಿತ್ರೀಕರಣದಲ್ಲಿ ನಟ ಭಾಗಿಯಾಗಿದ್ದಾರೆ. ತಮಿಳಿನ ಸೂಪರ್ ಹಿಟ್ ಚಿತ್ರವಾದ ‘ವಿಕ್ರಂ ವೇದ’ವನ್ನು ಅದೇ ಹೆಸರಿನಲ್ಲಿ ಹಿಂದಿಗೆ ರಿಮೇಕ್ ಮಾಡಲಾಗುತ್ತಿದೆ. ಸೈಫ್ ಅಲಿ ಖಾನ್ ಹೃತಿಕ್​ ಜತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಗಡ್ಡದ ಗೆಟಪ್​ನಲ್ಲಿ ಹೃತಿಕ್ ಕಾಣಿಸಿಕೊಂಡಿದ್ದಾರೆ. ಸದ್ಯ ಹೃತಿಕ್ ಹಂಚಿಕೊಂಡಿರುವ ಪೋಸ್ಟ್​ ಚಿತ್ರೀಕರಣ ಮುಕ್ತಾಯವಾಗಿರುವ ಸೂಚನೆಯನ್ನೂ ನೀಡಿದೆ. ಇದೇ ಕಾರಣದಿಂದ ಅವರು ಲುಕ್​ ಬದಲಾಯಿಸಿಕೊಳ್ಳುತ್ತಿದ್ಧಾರೆ ಎನ್ನಲಾಗಿದೆ. ‘ವಿಕ್ರಂ ವೇದ’ ಚಿತ್ರದಲ್ಲಿ ಹೃತಿಕ್ ಹಿಂದೆಂದಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಆ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: Hrithik Roshan: ಮಾಜಿ ಪತ್ನಿ ನೀಡಿದ ಪಾರ್ಟಿಯಲ್ಲಿ ಹೊಸ ಗೆಳತಿಯೊಂದಿಗೆ ಹಾಜರಾದ ಹೃತಿಕ್; ಫೋಟೋಗಳು ವೈರಲ್

48 ವರ್ಷದ ಹೃತಿಕ್ ‘ಫೈಟರ್’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ದೊಡ್ಡ ಮಟ್ಟದ ಆಕ್ಷನ್ ದೃಶ್ಯಗಳಿರುವ ಆ ಚಿತ್ರದ ಚಿತ್ರೀಕರಣವೂ ನಡೆಯುತ್ತಿದೆ. ‘ವಿಕ್ರಂ ವೇದ’ ಚಿತ್ರದ ಕೆಲಸಗಳು ಒಂದು ಹಂತಕ್ಕೆ ಬಂದ ಕಾರಣ ಇನ್ನು ನಟ ‘ಫೈಟರ್’ ಕಡೆ ಹೆಚ್ಚಿನ ಗಮನ ನೀಡುವ ನಿರೀಕ್ಷೆ ಇದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ