
ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಸ್ಪೈ ಯೂನಿವರ್ಸ್ ಭಾಗವಾದ ‘ವಾರ್ 2’ (War 2) ಸಿನಿಮಾ ಆಗಸ್ಟ್ 14ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್ಟಿಆರ್ ಅವರು ನಟಿಸುತ್ತಿದ್ದಾರೆ. ಅಯಾನ್ ಮುಖರ್ಜಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಟ್ರೇಲರ್ ಬಗ್ಗೆ ಈಗ ಮಾಹಿತಿ ಸಿಕ್ಕಿದೆ. ಈ ಚಿತ್ರಕ್ಕೆ ಸಾಕಷ್ಟು ಪ್ರಚಾರ ನೀಡಲಾಗುತ್ತಿದೆ. ಟ್ರೇಲರ್ ಲಾಂಚ್ ಸಿನಿಮಾದ ಒಂದು ಭಾಗವಾಗಿದೆ.
ಈ ಸಿನಿಮಾದಲ್ಲಿ ಒಂದು ವಿಶೇಷತೆ ಇದೆ. ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್ಟಿಆರ್ ಚಿತ್ರರಂಗಕ್ಕೆ ಬಂದು 25 ವರ್ಷಗಳು ಕಳೆದಿದ್ದು, ಇವರಿಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಜುಲೈ 25ರಂದು ಟ್ರೇಲರ್ ರಿಲೀಸ್ ಆಗಲಿದೆ ಎಂಬ ಮಾಹಿತಿಯನ್ನು ತಂಡದವರು ನೀಡಿದ್ದಾರೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.
ಈ ಮೊದಲು ರಿಲೀಸ್ ಆದ ‘ವಾರ್ 2’ ಚಿತ್ರದ ಟೀಸರ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು ಗೊತ್ತೇ ಇದೆ. ಈ ಟೀಸರ್ ರಿಲೀಸ್ ಆಗಿದ್ದು ಜೂನಿಯರ್ ಎನ್ಟಿಆರ್ ಬರ್ತ್ಡೇ ದಿನವಾಗಿತ್ತು. ಆದರೆ, ಚಿತ್ರತಂಡದವರು ಹೈಲೈಟ್ ಮಾಡಿದ್ದು ಹೃತಿಕ್ ರೋಷನ್ ಅವರನ್ನು. ಇದು ಜೂ.ಎನ್ಟಿಆರ್ ಫ್ಯಾನ್ಸ್ ಬೇಸರಕ್ಕೆ ಕಾರಣ ಆಯಿತು. ಈಗ ಟ್ರೇಲರ್ನಲ್ಲಿ ಆ ತಪ್ಪು ಸರಿ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಚಿತ್ರದಲ್ಲಿ ಹೃತಿಕ್ ಅವರು ಕಬೀರ್ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಅವರು ಈ ಮೊದಲು ವಾರ್ ಸಿನಿಮಾದಲ್ಲೂ ನಟಿಸಿದ್ದರು.
ಇದನ್ನೂ ಓದಿ:‘ವಾರ್ 2’ ಜೂ ಎನ್ಟಿಆರ್ಗೆ ನೋ ಹೇಳಿತಾ ಯಶ್ ರಾಜ್ ಫಿಲಮ್ಸ್
ಯಶ್ ರಾಜ್ ಫಿಲ್ಮ್ಸ್ ತಮ್ಮದೇ ಸ್ಪೈ ಯೂನಿವರ್ಸ್ ಮಾಡಿದ್ದಾರೆ. ಈ ಮೊದಲು ಬೇರೆ ಬೇರೆ ಸಿನಿಮಾಗಳಲ್ಲಿ ಬೇರೆ ಬೇರೆ ಹೀರೋಗಳು ಬಂದು ಅತಿಥಿ ಪಾತ್ರ ಮಾಡಿ ಹೋಗಿದ್ದರು. ‘ವಾರ್ 2’ ಚಿತ್ರದಲ್ಲಿ ಆ ರೀತಿ ಇರೋದಿಲ್ಲ ಎಂದು ತಂಡದವರು ಹೇಳಿದ್ದಾರೆ.
ಈ ಬಾರಿ ‘ವಾರ್ 2’ ಸಿನಿಮಾ ಬಗ್ಗೆ ನಿರ್ಮಾಪಕರಿಗೂ ದಕ್ಷಿಣದವರಿಗೂ ಸಾಕಷ್ಟು ನಿರೀಕ್ಷೆ ಇದೆ. ಇದಕ್ಕೆ ಕಾರಣ ಜೂನಿಯರ್ ಎನ್ಟಿಆರ್. ಇದೇ ಮೊದಲ ಬಾರಿಗೆ ಸ್ಪೈ ಯೂನಿವರ್ಸ್ನಲ್ಲಿ ದಕ್ಷಿಣದ ಹೀರೋ ಒಬ್ಬರು ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಇದು ಜೂನಿಯರ್ ಎನ್ಟಿಆರ್ ಅವರ ಮೊದಲ ಹಿಂದಿ ಸಿನಿಮಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:07 pm, Tue, 22 July 25