ಆಮಿರ್ ಖಾನ್ (Aamir Khan) ಅವರು ವೈಯಕ್ತಿಕ ವಿಚಾರದಲ್ಲಿ ಮೊದಲಿನಿಂದಲೂ ಸುದ್ದಿಯಲ್ಲಿದ್ದಾರೆ. ಸಂಬಂಧಗಳನ್ನು ಹ್ಯಾಂಡಲ್ ಮಾಡಲು ಅವರ ಬಳಿ ಸಾಧ್ಯವಾಗಿಲ್ಲ. ಈ ಮೊದಲು ರೀನಾ ದತ್ತ ಜೊತೆ ಸಂಬಂಧ ಕಡಿದುಕೊಂಡಿದ್ದರು. ಆ ಬಳಿಕ ಕಿರಣ್ ರಾವ್ನ ಮದುವೆ ಆದರು. ಕಿರಣ್ ರಾವ್ ಜೊತೆಗಿನ ಸಂಬಂಧವೂ ಕೊನೆ ಆಗಿದೆ. ಇದಕ್ಕೆ ಕಾರಣ ಏನು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಈ ಮಧ್ಯೆ ಹಳೆಯ ಘಟನೆ ಕುರಿತು ಅವರ ಮಾಜಿ ಪತ್ನಿ ಕಿರಣ್ ರಾವ್ ಮಾತನಾಡಿದ್ದಾರೆ.
ಆಮಿರ್ ಹಾಗೂ ರೀನಾ ದತ್ ದಂಪತಿ 2002ರಲ್ಲಿ ಸಂಬಂಧ ಕಡಿದುಕೊಂಡರು. ‘ಲಗಾನ್’ ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಕಳೆದಿತ್ತು. ಈ ಚಿತ್ರಕ್ಕೆ ಕಿರಣ್ ಅವರು ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಇವರಿಬ್ಬರು ಸುತ್ತಾಟ ನಡೆಸಿದ್ದರಿಂದಲೇ ಆಮಿರ್ ಹಾಗೂ ರೀನಾ ಬೇರೆ ಆದರು ಎನ್ನುವ ಮಾತು ಮೊದಲಿನಿಂದಲೂ ಇದೆ. ಈ ವಿಚಾರದ ಬಗ್ಗೆ ಕಿರಣ್ ರಾವ್ ಅವರು ಮಾತನಾಡಿದ್ದಾರೆ. ‘ನಾವು ಡೇಟಿಂಗ್ ಆರಂಭಿಸಿದ್ದು 2004ರಲ್ಲಿ’ ಎಂದು ಸ್ಪಷ್ಟನೆ ನೀಡಿದ್ದಾರೆ.
‘ನಾನು ಹಾಗೂ ಆಮಿರ್ ಖಾನ್ ಲಗಾನ್ ಸಿನಿಮಾದಲ್ಲಿ ಕನೆಕ್ಟ್ ಆದೆವು ಎಂದು ಅನೇಕರು ಭಾವಿಸಿದ್ದಾರೆ. ಆದರೆ, ಅದರಲ್ಲಿ ನಿಜವಿಲ್ಲ. ನಮ್ಮಿಬ್ಬರ ಮಧ್ಯೆ ಆಪ್ತತೆ ಬೆಳೆದಿದ್ದು ಸ್ವದೇಶ್ ಸಿನಿಮಾ ಟೈಮ್ನಲ್ಲಿ. ನಾವು ಆ ಸಂದರ್ಭದಲ್ಲಿ ಕೆಲವು ಕಮರ್ಷಿಯಲ್ಗಳಲ್ಲಿ ಒಟ್ಟಾಗಿ ನಟಿಸಿದೆವು. ಇದು ನಡೆದಿದ್ದು ಲಗಾನ್ ರಿಲೀಸ್ ಆಗಿ ಮೂರು ವರ್ಷಗಳ ಬಳಿಕ. ಲಗಾನ್ ಬಳಿಕ ನಾನು ಆಮಿರ್ ಜೊತೆ ಸಂಪರ್ಕದಲ್ಲಿ ಇರಲಿಲ್ಲ. ರೀನಾ ಹಾಗೂ ಆಮಿರ್ ವಿಚ್ಛೇದನ ಪಡೆಯಲು ನಾನು ಕಾರಣನಲ್ಲ’ ಎಂದಿದ್ದಾರೆ ಅವರು.
‘ಒಂದು ಸಂಬಂಧ ಕೊನೆಯಾಗಿ ಬಳಿಕ ಅವರನ್ನು ಮದುವೆಯಾದಾಗ ಅದು ಈಗಿನ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಇಂಥ ಸಂದರ್ಭದಲ್ಲಿ ಕುಳಿತು ಮಾತನಾಡುವುದು ಅತ್ಯಗತ್ಯವಾಗಿರುತ್ತದೆ. ಆಮಿರ್ ಮತ್ತು ನಾನು ಕೌನ್ಸೆಲಿಂಗ್ಗೆ ಒಳಗಾದೆವು. ನಾವಿಬ್ಬರೂ ಒಬ್ಬರಿಗೊಬ್ಬರು ಪ್ರಾಮಾಣಿಕವಾಗಿರಬೇಕು ಎಂದು ಇಬ್ಬರೂ ಒಪ್ಪಂದ ಮಾಡಿಕೊಂಡೆವು’ ಎಂದಿದ್ದಾರೆ ಕಿರಣ್ ರಾವ್
ಇದನ್ನೂ ಓದಿ: ‘ಕಿರಣ್ಗೆ ಸಿನಿಮಾ ಮಾಡೋಕೆ ಆಗುತ್ತಿರಲಿಲ್ಲ’; ಮಾಜಿ ಪತ್ನಿಯ ಒದ್ದಾಟ ತಿಳಿಸಿದ ಆಮಿರ್ ಖಾನ್
ಆಮಿರ್ ಖಾನ್ ಹಾಗೂ ಕಿರಣ್ ರಾವ್ ಅವರು 2005ರಲ್ಲಿ ಮದುವೆ ಆದರು. 2021ರಲ್ಲಿ ಇಬ್ಬರೂ ಬೇರೆ ಆದರು. ಸಾಮಾನ್ಯವಾಗಿ ವಿಚ್ಛೇದನ ಪಡೆದ ಬಳಿಕ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ, ಆಮಿರ್ ಹಾಗೂ ಕಿರಣ್ ರಾವ್ ವಿಚಾರದಲ್ಲಿ ಆ ರೀತಿ ಇಲ್ಲ. ಇಬ್ಬರೂ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ. ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡಿಸ್’ ಚಿತ್ರವನ್ನು ಆಮಿರ್ ಖಾನ್ ಅವರೇ ನಿರ್ಮಾಣ ಮಾಡಿದ್ದರು. ಈ ಸಿನಿಮಾ ಎಲ್ಲರ ಮೆಚ್ಚುಗೆ ಪಡೆದಿದೆ. ಈ ಚಿತ್ರವನ್ನು ವಿಮರ್ಶಕರು ಬಾಯ್ತುಂಬಾ ಹೊಗಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ