ಕಾಂಟ್ರವರ್ಶಿಯಲ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಅನೇಕ ವಿಚಾರಗಳ ಬಗ್ಗೆ ಅವರು ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾರೆ. ಈಗ ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ (The Kashmir Files Movie) ಬಗ್ಗೆ ಮಾತನಾಡಿದ್ದಾರೆ. ದೇಶಾದ್ಯಂತ ಈ ಚಿತ್ರದ ಬಗ್ಗೆ ಚರ್ಚೆ ಆಗುತ್ತಿದೆ. ರಾಜಕೀಯ ವಲಯದವರು ಕೂಡ ಈ ಸಿನಿಮಾ ನೋಡುತ್ತಿದ್ದಾರೆ. ಅನೇಕ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಪಡೆದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ಯಾವುದೇ ಕಮರ್ಷಿಯಲ್ ಅಂಶಗಳು ಇಲ್ಲದೇ, ದೊಡ್ಡ ಸ್ಟಾರ್ ಹೀರೋಗಳು ಇಲ್ಲದೆಯೂ ಈ ಚಿತ್ರ 150 ಕೋಟಿ ರೂಪಾಯಿಗಿಂತಲೂ ಹೆಚ್ಚು ಕಲೆಕ್ಷನ್ ಮಾಡುವಲ್ಲಿ ಯಶಸ್ವಿ ಆಗಿದೆ. ಈಗ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ರಾಮ್ ಗೋಪಾಲ್ ವರ್ಮಾ ಅವರು ವಿಮರ್ಶೆ (The Kashmir Files Review) ಮಾಡಿದ್ದಾರೆ. ‘ನಾನು ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಹೇಟ್ ಮಾಡುತ್ತೇನೆ’ ಎಂಬ ಕ್ಯಾಪ್ಷನ್ನೊಂದಿಗೆ ತಮ್ಮ ವಿಮರ್ಶೆಯನ್ನು ಅವರು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
‘ನನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ನಾನು ಸಿನಿಮಾ ವಿಮರ್ಶೆ ಮಾಡುತ್ತಿದ್ದೇನೆ. ಈ ಸಿನಿಮಾದ ವಿವಾದಾತ್ಮಕ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ. ಸಿನಿಮಾವನ್ನು ಹೇಗೆ ಮಾಡಬೇಕು ಎಂಬುದನ್ನು ನಾವೆಲ್ಲ ನಂಬಿದ್ದೆವೋ ಅದೆಲ್ಲವನ್ನೂ ಈ ಚಿತ್ರ ಬದಲಾಯಿಸಿದೆ. ಡ್ರಾಮಾ ಸೃಷ್ಟಿಸಲು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ರಯತ್ನಿಸಿಲ್ಲ. ಅನುಪಮ್ ಖೇರ್ ನಟನೆ ಚೆನ್ನಾಗಿದೆ. 10 ದಿನಗಳ ಹಿಂದೆ ನನ್ನನ್ನೂ ಸೇರಿದಂತೆ ಇಡೀ ಸಿನಿಮಾ ಜಗತ್ತು ನಂಬಿದ್ದೇ ಬೇರೆ. ದೊಡ್ಡ ಬಜೆಟ್ನ ಸಿನಿಮಾಗಳು, ಸ್ಟಾರ್ ಹೀರೋಗಳ ಸಿನಿಮಾಗಳು ಮಾತ್ರ ಜನರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರುತ್ತವೆ ಅಂತ ನಂಬಿದ್ದೆವು. ಆ ಎಲ್ಲ ನಂಬಿಕೆ ಮತ್ತು ನಿಯಮಗಳನ್ನು ಈ ಸಿನಿಮಾ ಮುರಿದು ಹಾಕಿದೆ. ಜನರನ್ನು ಇಂಪ್ರೆಸ್ ಮಾಡಬೇಕು ಎಂಬ ಪ್ರಯತ್ನವನ್ನೇ ವಿವೇಕ್ ಅಗ್ನಿಹೋತ್ರಿ ಮಾಡಿಲ್ಲ’ ಎಂದು ರಾಮ್ ಗೋಪಾಲ್ ವರ್ಮಾ ಹೊಗಳಿದಿದ್ದಾರೆ.
‘ನಾನು ಈ ಸಿನಿಮಾವನ್ನು ಹೇಟ್ ಮಾಡುತ್ತೇನೆ. ಯಾಕೆಂದರೆ ನಾನು ಈವರೆಗೆ ಕಲಿತಿದ್ದೆಲ್ಲವನ್ನೂ, ಸರಿ ಅಂತ ನಂಬಿದ್ದೆಲ್ಲವನ್ನೂ ಈ ಸಿನಿಮಾ ನಾಶ ಮಾಡಿದೆ. ಆದರೆ ವಿವೇಕ್ ಅಗ್ನಿಹೋತ್ರಿ ಅವರನ್ನು ನಾನು ಪ್ರೀತಿಸುತ್ತೇನೆ’ ಎಂದು ತಮ್ಮದೇ ಶೈಲಿಯಲ್ಲಿ ರಾಮ್ ಗೋಪಾಲ್ ವರ್ಮಾ ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಹೊಗಳಿದ್ದಾರೆ.
I HATED @vivekagnihotri’s #KashmirFiles Here is my Review https://t.co/Er9ce8A0vV
— Ram Gopal Varma (@RGVzoomin) March 19, 2022
ಈ ಚಿತ್ರವನ್ನು ಜನರು ಯಾಕೆ ಮುಗಿಬಿದ್ದು ನೋಡುತ್ತಿದ್ದಾರೆ? ಇದರ ನಿರೂಪಣೆ ತುಂಬ ಸ್ಲೋ ಆಗಿರುವುದು ಎಷ್ಟು ಅನುಕೂಲ ಆಗಿದೆ? ಪ್ರಧಾನಿ ನರೇಂದ್ರ ಮೋದಿ ನಿಜವಾಗಿಯೂ ಈ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರಾ? ಈ ಎಲ್ಲ ವಿಚಾರಗಳ ಬಗ್ಗೆ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ವಿಮರ್ಶೆಯಲ್ಲಿ ಮಾತನಾಡಿದ್ದಾರೆ. ಯೂಟ್ಯೂಬ್ನಲ್ಲಿ ಅವರು ಹಂಚಿಕೊಂಡ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.
ಇದನ್ನೂ ಓದಿ:
The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು
‘ದಿ ಕಾಶ್ಮೀರ್ ಫೈಲ್ಸ್’ಗಿಂತಲೂ ಹೆಚ್ಚು IMDb ರೇಟಿಂಗ್ ಪಡೆದ ‘ಜೇಮ್ಸ್’; 10ಕ್ಕೆ 9.9 ನೀಡಿದ ಪ್ರೇಕ್ಷಕರು
Published On - 8:24 am, Mon, 21 March 22