Kangana Ranaut: ‘ನೀವು ಒಮ್ಮೆ ನನಗೆ ಹೊಡೆದರೆ, ನಾನು ನಿಮಗೆ ಸಾಯೋತನಕ ಹೊಡೆಯುತ್ತೇನೆ’: ಕಂಗನಾ ವಾರ್ನಿಂಗ್

|

Updated on: Jun 12, 2023 | 6:45 AM

ಕಂಗನಾ ರಣಾವತ್​ ಅವರು ರಣಬೀರ್​ ಕಪೂರ್​ ವಿರುದ್ಧ ಕೆಂಡಕಾರಿದ್ದಾರೆ. ಅಲ್ಲದೇ ಈ ರೀತಿ ಎಚ್ಚರಿಕೆ ಸಂದೇಶವನ್ನೂ ನೀಡಿದ್ದಾರೆ.

Kangana Ranaut: ‘ನೀವು ಒಮ್ಮೆ ನನಗೆ ಹೊಡೆದರೆ, ನಾನು ನಿಮಗೆ ಸಾಯೋತನಕ ಹೊಡೆಯುತ್ತೇನೆ’: ಕಂಗನಾ ವಾರ್ನಿಂಗ್
ಕಂಗನಾ ರಣಾವತ್​
Follow us on

ನಟಿ ಕಂಗನಾ ರಣಾವತ್​ (Kangana Ranaut) ಅವರು ಅನೇಕರ ಜೊತೆ ದ್ವೇಷ ಕಟ್ಟಿಕೊಂಡಿದ್ದಾರೆ. ಸಿನಿಮಾ ಕೆಲಸಗಳ ನಡುವೆ ಅವರು ಜಗಳಗಳ ಕಾರಣದಿಂದಲೂ ಸುದ್ದಿ ಆಗುತ್ತಾರೆ. ಬಾಲಿವುಡ್​ನಲ್ಲಿ ಇರುವ ಅನೇಕ ಕುತಂತ್ರಗಳ ಬಗ್ಗೆ ಕಂಗನಾ ಆಗಾದ ಧ್ವನಿ ಎತ್ತುತ್ತಾರೆ. ನೆಪೋಟಿಸಂ (Nepotism) ಕಂಡರೆ ಅವರು ಉರಿದು ಬೀಳುತ್ತಾರೆ. ಗುಂಪುಗಾರಿಕೆಗೂ ಛೀಮಾರಿ ಹಾಕುತ್ತಾರೆ. ಅವರ ಈ ನೇರ ನಡೆ-ನುಡಿ ಕೆಲವರಿಗೆ ಹಿಡಿಸುವುದಿಲ್ಲ. ಈಗ ಕಂಗನಾ ರಣಾವತ್​ ಅವರು ರಣಬೀರ್​ ಕಪೂರ್​ (Ranbir Kapoor) ಬಗ್ಗೆ ಕೆಂಡಕಾರಿದ್ದಾರೆ. ಅಲ್ಲದೇ ಒಂದು ಎಚ್ಚರಿಕೆ ಸಂದೇಶವನ್ನೂ ನೀಡಿದ್ದಾರೆ. ‘ನೀವು ಒಮ್ಮೆ ನನಗೆ ಹೊಡೆದರೆ, ನಾನು ನಿಮಗೆ ಸಾಯೋತನಕ ಹೊಡೆಯುತ್ತೇನೆ’ ಎಂದು ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ರಣಬೀರ್​ ಕಪೂರ್ ಅವರನ್ನು ಕಂಡರೆ ಕಂಗನಾ ರಣಾವತ್​ ಅವರಿಗೆ ವಿಪರೀತ ಅಸಮಾಧಾನ. ರಾಮಾಯಣ ಆಧರಿಸಿ ಬಾಲಿವುಡ್​ನಲ್ಲಿ ಒಂದು ಹೊಸ ಸಿನಿಮಾ ತಯಾರಾಗಲಿದೆ. ನಿತೇಶ್​​ ತಿವಾರಿ ನಿರ್ದೇಶನ ಮಾಡಲಿರುವ ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ ಅವರು ರಾಮನ ಪಾತ್ರ ಮಾಡುತ್ತಾರೆ ಎಂಬ ಗಾಸಿಪ್​ ಹರಡಿದೆ. ಅದನ್ನು ಕೇಳಿ ಕಂಗನಾಗೆ ಕೋಪ ಬಂದಂತಿದೆ. ಹಾಗಾಗಿ ಅವರು ರಣಬೀರ್​ ಕಪೂರ್ ವಿರುದ್ಧ ಕಿಡಿಕಾರುವಂತಹ ಸಾಲುಗಳನ್ನು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಅದರ ಕೊನೆಯಲ್ಲಿ ಅವರು ನೀಡಿದ ವಾರ್ನಿಂಗ್​ ತುಂಬ ಖಡಕ್​ ಆಗಿದೆ. ಆದರೆ ಎಲ್ಲಿಯೂ ಅವರು ರಣಬೀರ್​ ಕಪೂರ್​ ಹೆಸರನ್ನು ಪ್ರಸ್ತಾಪಿಸಿಲ್ಲ. ಹಾಗಿದ್ದರೂ ಕೂಡ ಇದು ರಣಬೀರ್​ ಕುರಿತಾಗಿಯೇ ಹೇಳಿದ್ದು ಎಂಬುದು ಸ್ಪಷ್ಟವಾಗಿದೆ.

ಇದನ್ನೂ ಓದಿ: Kangana Ranaut: ‘ಡ್ರಗ್ಸ್​ ತೆಗೆದುಕೊಳ್ಳುವ, ಸ್ತ್ರೀಲೋಲ ನಟನಿಗೆ ರಾಮನ ಪಾತ್ರವೇ? ಇದೆಂಥ ಕಲಿಯುಗ’: ಕಂಗನಾ ಕಿಡಿಕಾರಿದ್ದು ಯಾರ ಬಗ್ಗೆ?

ಈ ಮೊದಲು ಕೂಡ ರಣಬೀರ್​ ಕಪೂರ್​ ಮೇಲೆ ಕಂಗನಾ ರಣಾವತ್​ ಅವರು ಕೆಲವು ಆರೋಪ ಹೊರಿಸಿದ್ದರು. ಈ ವರ್ಷ ಫೆಬ್ರವರಿಯಲ್ಲಿ ಕಂಗನಾ​ರ ವಾಟ್ಸಪ್​ ಸಂದೇಶ ಲೀಕ್​ ಆಗಿತ್ತು. ಸ್ವತಃ ಕಂಗನಾ ಅವರೇ ಆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ತಮ್ಮ ಮೇಲೆ ಗೂಢಚಾರಿಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದರು. ಇದನ್ನೆಲ್ಲ ಮಾಡುತ್ತಿರುವುದು ಬಾಲಿವುಡ್​ನ ಸ್ಟಾರ್​ ದಂಪತಿ ಎಂದು ಕೂಡ ಅವರು ಹೇಳಿದ್ದರು. ಆಗ ಅವರು ಬಳಸಿದ್ದ ಪದಗಳನ್ನು ಗಮನಿಸಿದರೆ ಅದು ರಣಬೀರ್​ ಕಪೂರ್​ ಬಗ್ಗೆಯೇ ಹೇಳಿದ್ದು ಎಂಬುದು ಗೊತ್ತಾಗುವಂತಿತ್ತು.

ಇದನ್ನೂ ಓದಿ: Kangana Ranaut: ಒಟ್ಟಾಗಿ ಡ್ಯಾನ್ಸ್ ಮಾಡಿದ ಕಂಗನಾ-ಸಲ್ಮಾನ್ ಖಾನ್; ಹಳೆಯ ವಿಡಿಯೋ ವೈರಲ್

‘ನೆಪೋಟಿಸಂ ಮಾಫಿಯಾದ ಆ ವಿದೂಷಕ ಒಮ್ಮೆ ನನ್ನ ಮನೆ ಬಾಗಿಲಿಗೆ ಬಂದು ಬಲವಂತಕ್ಕೆ ಯತ್ನಿಸಿದ್ದ. ಆತ ಸ್ತ್ರಿಲೋಲ ಅಂತಲೇ ಗುರುತಿಸಿಕೊಂಡಿದ್ದವನು. ಈಗ ನೆಪೋಟಿಸಂ ಸಂಘದ ಉಪಾಧ್ಯಕ್ಷ ಆಗಿದ್ದಾನೆ. ತನ್ನ ಹೆಂಡತಿಯನ್ನು ನಿರ್ಮಾಪಕಿ ಆಗು ಅಂತ ಒತ್ತಾಯಿಸುತ್ತಿದ್ದಾನೆ. ಮಹಿಳಾಪ್ರಧಾನ ಸಿನಿಮಾಗಳನ್ನು ಹೆಚ್ಚಾಗಿ ಮಾಡುವಂತೆ ಒತ್ತಾಯಿಸುತ್ತಿದ್ದಾನೆ’ ಎಂದು ಕಂಗನಾ ರಣಾವತ್​ ಬರೆದುಕೊಂಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.