Kamaal R Khan: ‘ಕೊರೊನಾ ವ್ಯಾಕ್ಸಿನ್​ ಪಡೆದ ಬಳಿಕ 1 ಕಿ.ಮೀ. ನಡೆಯೋಕೂ ಆಗ್ತಿಲ್ಲ, ಎದೆನೋವು ಬರ್ತಿದೆ’: ಆತಂಕದಲ್ಲಿ ಟ್ವೀಟ್​ ಮಾಡಿದ ಕೆಆರ್​ಕೆ

Corona Vaccine: ಕಮಾಲ್​ ಆರ್​. ಖಾನ್​ ಮಾಡಿರುವ ಈ ಪೋಸ್ಟ್​ ವೈರಲ್​ ಆಗಿದೆ. ಅದಕ್ಕೆ ಅನೇಕರು ಕಮೆಂಟ್​ ಮಾಡಿದ್ದಾರೆ. ಕೆಆರ್​ಕೆ ಮಾತಿಗೆ ಬಹುತೇಕರು ಸಹಮತ ಸೂಚಿಸಿದ್ದಾರೆ.

Kamaal R Khan: ‘ಕೊರೊನಾ ವ್ಯಾಕ್ಸಿನ್​ ಪಡೆದ ಬಳಿಕ 1 ಕಿ.ಮೀ. ನಡೆಯೋಕೂ ಆಗ್ತಿಲ್ಲ, ಎದೆನೋವು ಬರ್ತಿದೆ’: ಆತಂಕದಲ್ಲಿ ಟ್ವೀಟ್​ ಮಾಡಿದ ಕೆಆರ್​ಕೆ
ಕಮಾಲ್​ ಆರ್​. ಖಾನ್​
Follow us
ಮದನ್​ ಕುಮಾರ್​
|

Updated on: Jun 12, 2023 | 9:31 AM

ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಸ್ವಯಂ ಘೋಷಿತ ವಿಮರ್ಶಕ ಕಮಾಲ್​ ಆರ್​. ಖಾನ್​ (Kamaal R Khan) ಅವರು ಸದಾ ಸುದ್ದಿ ಆಗುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಮೂರು ಹೊತ್ತು ಏನಾದರೂ ಪೋಸ್ಟ್​ ಮಾಡುತ್ತಲೇ ಇರುತ್ತಾರೆ. ತಮ್ಮದೇ ಶೈಲಿಯಲ್ಲಿ ಸಿನಿಮಾಗಳನ್ನು ವಿಮರ್ಶೆ ಮಾಡುವ ಮೂಲಕ ಅವರು ಒಂದಷ್ಟು ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದುಂಟು. ನಟ-ನಟಿಯರಿಗೆ ಬಾಡಿ ಶೇಮಿಂಗ್​ ಮಾಡುವುದರಿಂದಲೂ ಅವರು ಕಿರಿಕ್ ಮಾಡಿಕೊಂಡ ಉದಾಹರಣೆ ಇದೆ. ಇದೆಲ್ಲವನ್ನೂ ಬಿಟ್ಟು ಈಗ ಕಮಾಲ್​ ಆರ್​. ಖಾನ್ (KRK)​ ಅವರು ತಮ್ಮ ಆರೋಗ್ಯದ ಬಗ್ಗೆ ಈಗ ಟ್ವೀಟ್​ ಮಾಡಿದ್ದಾರೆ. ಕೊರೊನಾ ವ್ಯಾಕ್ಸಿನ್​ (Corona Vaccine) ಪಡೆದ ಬಳಿಕ ತಮಗೆ ಏನೆಲ್ಲ ತೊಂದರೆ ಆಗುತ್ತಿದೆ ಎಂಬುದನ್ನು ಅವರು ವಿವರಿಸಿದ್ದಾರೆ. ಇಂದು (ಜೂನ್​ 12) ನಸುಕಿನ 3.44ಕ್ಕೆ ಎದ್ದು ಅವರು ಆತಂಕದಲ್ಲಿ ಟ್ವೀಟ್​ ಮಾಡಿದ್ದಾರೆ.

‘ಕೊರೊನಾ ವ್ಯಾಕ್ಸಿನ್​ ಪಡೆದುಕೊಂಡಾಗಿನಿಂದ ನನಗೆ ಒಂದು ಕಿಲೋ ಮೀಟರ್​ ಕೂಡ ನಡೆಯಲು ಸಾಧ್ಯವಾಗುತ್ತಿಲ್ಲ. ಎದೆಯಲ್ಲಿ ವಿಪರೀತ ನೋವು ಆಗುತ್ತಿದೆ. ಒಂದು ವೇಳೆ ನಾನು ಹೆಚ್ಚು ನಡೆಯಲು ಪ್ರಯತ್ನಿಸಿದರೆ ನನ್ನ ಸ್ನೇಹಿತ ರಾಜು ಶ್ರೀವಾಸ್ತವ ರೀತಿ ಕುಸಿದು ಬಿದ್ದು ಸಾಯುತ್ತೇನೆ ಅಂತ ವೈದ್ಯರು ನನಗೆ ಹೇಳಿದರು. ಇದು ಕೊರೊನಾ ಲಸಿಕೆಯ ದೊಡ್ಡ ಹಗರಣ’ ಎಂದು ಕಮಾಲ್​ ಆರ್​. ಖಾನ್​ ಬರೆದುಕೊಂಡಿದ್ದಾರೆ.

ಕಮಾಲ್​ ಆರ್​. ಖಾನ್​ ಮಾಡಿರುವ ಈ ಪೋಸ್ಟ್​ ವೈರಲ್​ ಆಗಿದೆ. ಅದಕ್ಕೆ ಅನೇಕರು ಕಮೆಂಟ್​ ಮಾಡಿದ್ದಾರೆ. ಕೆಆರ್​ಕೆ ಮಾತಿಗೆ ಬಹುತೇಕರು ಸಹಮತ ಸೂಚಿಸಿದ್ದಾರೆ. ತಮಗೂ ಅದೇ ರೀತಿ ಅನುಭವ ಆಗುತ್ತಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ‘ಏನೂ ಆಗಲ್ಲ. ಧೈರ್ಯದಿಂದಿರಿ’ಎಂದು ಕೆಲವರು ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: KRK: ಕಮಾಲ್​ ಆರ್​. ಖಾನ್​ ಮೇಲೆ ಸಲ್ಮಾ​ನ್​ ಖಾನ್ ಕೇಸ್​ ಹಾಕಿದ್ದು ದುಡ್ಡಿಗೋಸ್ಕರನಾ? ಶುರುವಾಯ್ತು ಚರ್ಚೆ

ಕೇವಲ ಸಿನಿಮಾ ಮಾತ್ರವಲ್ಲದೇ ಇನ್ನುಳಿದ ವಿಚಾರಗಳ ಬಗ್ಗೆಯೂ ಕಮಾಲ್​ ಆರ್​. ಖಾನ್​ ಮಾತನಾಡಲಾರಂಭಿಸಿದ್ದಾರೆ. ರಾಜಕೀಯದ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಇತ್ತೀಚೆಗೆ ಅವರು ರಾಹುಲ್​ ಗಾಂಧಿ ಕುರಿತು ಟ್ವೀಟ್​ ಮಾಡಿದ್ದರು. ಇದು ತಮ್ಮ ಭವಿಷ್ಯವಾಣಿ ಎಂದು ಹೇಳಿದ್ದರು. ‘ಮುಂದೊಂದು ದಿನ ರಾಹುಲ್​ ಗಾಂಧಿ ಅವರು ಪ್ರಧಾನ ಮಂತ್ರಿ ಆಗುತ್ತಾರೆ. ಅವರನ್ನು ಭಾರತದ ಇತಿಹಾಸದಲ್ಲೇ ಅತ್ಯುತ್ತಮ ಪ್ರಧಾನಿ ಎಂದು ಕರೆಯಲಾಗುತ್ತದೆ’ ಎಂದು ಕೆಆರ್​ಕೆ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ: KRK: ಶ್ರದ್ಧಾ ಕಪೂರ್​ಗೆ ಬಾಡಿ ಶೇಮಿಂಗ್​ ಮಾಡಿದ ಕಾಂಟ್ರವರ್ಸಿ ವಿಮರ್ಶಕ ಕಮಾಲ್​ ಆರ್​. ಖಾನ್​

2008ರಲ್ಲಿ ‘ದೇಶದ್ರೋಹಿ’ ಸಿನಿಮಾ ತೆರೆಕಂಡಿತ್ತು. ಆ ಚಿತ್ರದಲ್ಲಿ ಕಮಾಲ್​ ಆರ್​. ಖಾನ್​ ಮುಖ್ಯಭೂಮಿಕೆ ನಿಭಾಯಿಸಿದ್ದರು. ನಿರ್ಮಾಣ ಕೂಡ ಅವರದ್ದೇ. ಆ ಸಿನಿಮಾ ಅತಿ ಕೆಟ್ಟ ವಿಮರ್ಶೆ ಪಡೆದುಕೊಂಡಿತ್ತು. ಪ್ರೇಕ್ಷಕರಿಗೂ ಕಿಂಚಿತ್ತೂ ಹಿಡಿಸಲಿಲ್ಲ. ಹೀನಾಯವಾಗಿ ಸೋತರೂ ಕಮಾಲ್​ ಆರ್​. ಖಾನ್​ಗೆ ಬುದ್ಧಿ ಬಂದಿಲ್ಲ. ಈಗ ಅವರು ‘ದೇಶದ್ರೋಹಿ 2’ ಸಿನಿಮಾ ಮಾಡುವ ಉತ್ಸಾಹದಲ್ಲಿದ್ದಾರೆ. 2022ರ ಏಪ್ರಿಲ್​ 18ರಂದು ಕಮಾಲ್​ ಆರ್​. ಖಾನ್​ ಅವರು ‘ದೇಶದ್ರೋಹಿ 2’ ಚಿತ್ರದ ಹೊಸ ಪೋಸ್ಟರ್​ ಶೇರ್​ ಮಾಡಿಕೊಂಡಿದ್ದರು. ಸಿನಿಮಾದ ಶೂಟಿಂಗ್ ಸದ್ಯದಲ್ಲೇ ಆರಂಭ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ