ಗದರ್ 2: ಮತ್ತೆ ಲಾಹೋರ್​ಗೆ ನುಗ್ಗಿದ ತಾರಾ ಸಿಂಗ್, ಈ ಬಾರಿ ಏನು ಕಿತ್ತೊಗೆಯುತ್ತಾನೆ?

Gadar 2: 2001 ರಲ್ಲಿ ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಗಿದ್ದ ಗದರ್ ಸಿನಿಮಾದ ಎರಡನೇ ಭಾಗ ಇದೀಗ 22 ವರ್ಷಗಳ ಬಳಿಕ ಬಿಡುಗಡೆ ಆಗುತ್ತಿದೆ.

ಗದರ್ 2: ಮತ್ತೆ ಲಾಹೋರ್​ಗೆ ನುಗ್ಗಿದ ತಾರಾ ಸಿಂಗ್, ಈ ಬಾರಿ ಏನು ಕಿತ್ತೊಗೆಯುತ್ತಾನೆ?
ಗದರ್ 2
Follow us
ಮಂಜುನಾಥ ಸಿ.
|

Updated on: Jun 12, 2023 | 5:57 PM

ಬಾಲಿವುಡ್​ನ (Bollywood) 2000 ರ ದಶಕದ ಕಲ್ಟ್ ಕ್ಲಾಸಿಕ್ ಸಿನಿಮಾಗಳ ಪಟ್ಟಿಯಲ್ಲಿ ಗದರ್ (Gadar) ಸಹ ಒಂದು. ದಿಲ್​ ವಾಲೆ ದುಲ್ಹನಿಯಾ ಲೇ ಜಾಯೆಂಗೆ, ಕುಚ್ ಕುಚ್ ಹೋತಾ ಹೇ, ಹಮ್ ಆಪ್ಕೆ ಹೈ ಕೋನ್ ಸಿನಿಮಾಗಳ ಜೊತೆಗೆ ಗದರ್ ಸಹ ನಿಲ್ಲುತ್ತದೆ. ಸನ್ನಿ ಡಿಯೋಲ್, ಅಮೀಶಾ ಪಟೇಲ್ ನಟಿಸಿದ್ದ ಈ ಸಿಖ್-ಮುಸ್ಲಿಂ ಪ್ರೇಮಕತೆ ಸಿನಿಮಾ ಆಗಿನ ಕಾಲಕ್ಕೆ ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳಲ್ಲಿ ಸೂಪರ್ ಡೂಪರ್ ಹಿಟ್ ಆಗಿತ್ತು. ಇದೀಗ ಈ ಸಿನಿಮಾದ ಏರಡನೇ ಭಾಗ ಬರುತ್ತಿದೆ ಅದೂ 22 ವರ್ಷಗಳ ಬಳಿಕ.

ಗದರ್ ಸಿನಿಮಾದ ಎರಡನೇ ಭಾಗ ಗದರ್ 2 ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಸಿನಿಮಾದ ಟೀಸರ್ ಇದೀಗ ಬಿಡುಗಡೆ ಆಗಿದೆ. ಗದರ್ ಮೊದಲ ಭಾಗದಲ್ಲಿ ತಾರಾ ಸಿಂಗ್ ಪಾತ್ರಧಾರಿ ತಾರಾ ಸಿಂಗ್ ಲಾಹೋರ್​ಗೆ ನುಗ್ಗಿ ಅಬ್ಬರ ಎಬ್ಬಿಸಿದ್ದ. ಇದೀಗ ಗದರ್ 2 ಟೀಸರ್​ ಪ್ರಕಾರ ತಾರಾ ಸಿಂಗ್ ಮತ್ತೆ ಲಾಹೋರ್​ಗೆ ನುಗ್ಗಿದ್ದಾರೆ. ಕಳೆದ ಬಾರಿ ಹ್ಯಾಂಡ್​ಪಂಪ್ ಕಿತ್ತು ಕೈಗೆತ್ತಿಕೊಂಡಿದ್ದ ತಾರಾ ಸಿಂಗ್ ಈ ಬಾರಿ ಬಂಡಿಯ ಚಕ್ರವನ್ನು ಕಿತ್ತು ಎಸೆದಿದ್ದಾರೆ. ಒಟ್ಟಿನಲ್ಲಿ ತಾರಾ ಸಿಂಗ್​ರ ಭಿನ್ನ ಮಾದರಿಯ ಫೈಟ್ ಗದರ್​ 2 ನಲ್ಲೂ ಮುಂದುವರೆದಿದೆ.

22 ವರ್ಷದ ಬಳಿಕ ಬಿಡುಗಡೆ ಆಗುತ್ತಿದ್ದರೂ ಸಹ ಗದರ್ 2 ಸಿನಿಮಾದ ಕತೆ ನಡೆಯುವುದು 1971ರ ಅವಧಿಯಲ್ಲಿ. ಟೀಸರ್​ನಲ್ಲಿ ಮಹಿಳೆಯೊಬ್ಬರ ಹಿನ್ನೆಲೆ ಧ್ವನಿ ಇದ್ದು ತಾರಾ ಸಿಂಗ್ ಪಾಕಿಸ್ತಾನದ ಅಳಿಯ, ಈ ಬಾರಿ ವರದಕ್ಷಿಣೆ ಹೆಸರಲ್ಲಿ ಪೂರ್ತಿ ಲಾಹೋರ್ ಅನ್ನೇ ತೆಗೆದುಕೊಂಡು ಹೋಗುತ್ತಾನೆ ಎಂಬ ಸಂಭಾಷಣೆ ಕೇಳುತ್ತದೆ. ಅಲ್ಲಿಗೆ ಗದರ್ 2 ಸಿನಿಮಾ ಸಹ ಭಾರತ-ಪಾಕಿಸ್ತಾನದ ಕುರಿತಾದ ಕತೆಯನ್ನು ಹೊಂದಿರುವುದು ಪಕ್ಕಾ ಆಗಿದೆ. ಮೊದಲ ಭಾಗದ ಕತೆ ನಡೆದಿದ್ದ ಲಾಹೋರ್​ನಲ್ಲಿಯೇ ಎರಡನೇ ಭಾಗದ ಕತೆಯೂ ನಡೆಯಲಿದೆ. ಮೊದಲ ಭಾಗದಲ್ಲಿ ತಾರಾ ಸಿಂಗ್ ಹಾಗೂ ಶಕೀನ್​ಗೆ ಮಗನೊಬ್ಬ ಜನಿಸಿದ್ದ ಅವನ ಪ್ರೇಮಕತೆಯನ್ನು ಗದರ್ 2 ಸಿನಿಮಾ ಒಳಗೊಂಡಿರುವ ಸಾಧ್ಯತೆ ಇದೆ. ಆದರೆ ಟೀಸರ್​ನಲ್ಲಿ ಈ ಬಗ್ಗೆ ಯಾವುದೇ ಸುಳಿವಿಲ್ಲ.

ಗದರ್ 2 ಸಿನಿಮಾ ಆಗಸ್ಟ್ 11 ರಂದು ತೆರೆಗೆ ಬರಲಿದೆ. ಗದರ್ ಸಿನಿಮಾದಲ್ಲಿ ನಟಿಸಿದ್ದ ಸನ್ನಿ ಡಿಯೋಲ್, ಅಮೀಷಾ ಪಟೇಲ್ ಅವರುಗಳೇ ಈ ಸಿನಿಮಾದಲ್ಲಿಯೂ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆಗೆ ಯುವನಟರಾದ ಉತ್ಕರ್ಷ್ ಶರ್ಮಾ ಹಾಗೂ ಸಿಮ್ರತ್ ಕೌರ್ ನಟಿಸಿದ್ದಾರೆ. ವಿಲನ್ ಪಾತ್ರದಲ್ಲಿ ಮನೀಷ್ ವಾಡಾ ಹಾಗೂ ಮೀರ್ ಸರ್ವಾರ್ ಇದ್ದಾರೆ.

ಗದರ್ 2 ಸಿನಿಮಾ ಬಿಡುಗಡೆ ಆಗುವ ಕಾರಣ ಕಳೆದ ವಾರವಷ್ಟೆ ಗದರ್ ಸಿನಿಮಾದ ಮೊದಲ ಭಾಗ ಬಿಡುಗಡೆ ಆಗಿತ್ತು. ಮರುಬಿಡುಗಡೆ ಆದ ಮೊದಲ ವೀಕೆಂಡ್​ನಲ್ಲಿ ಈ ಸಿನಿಮಾ 1.50 ಕೋಟಿ ಹಣ ಗಳಿಕೆ ಮಾಡಿದೆ. ಗದರ್ ಏಕ್ ಪ್ರೇಮ್ ಕಥಾ ಸಿನಿಮಾ 2001 ರಲ್ಲಿ ಬಿಡುಗಡೆ ಆಗಿತ್ತು. ಆಗ ಈ ಸಿನಿಮಾವನ್ನು ಅನಿಲ್ ಶರ್ಮಾ ನಿರ್ದೇಶನ ಮಾಡಿದ್ದರು. ಆಗಿನ ಕಾಲಕ್ಕೆ ಈ ಸಿನಿಮಾದ ಸುಮಾರು 5 ಕೋಟಿ ಟಿಕೆಟ್​ಗಳು ಮಾರಾಟವಾಗಿದ್ದವು. ಇದು ಆಗಿನ ಕಾಲಕ್ಕೆ ಬಹುದೊಡ್ಡ ದಾಖಲೆ. ಈ ಸಿನಿಮಾ ಭಾರತ ಮಾತ್ರವೇ ಅಲ್ಲದೆ ಪಾಕಿಸ್ತಾನದಲ್ಲಿಯೂ ಸೂಪರ್ ಹಿಟ್. ಕೆನಡಾ, ಯುಎಸ್​ಎ, ಬ್ರಿಟನ್​ಗಳಲ್ಲಿಯೂ ಸೂಪರ್ ಹಿಟ್ ಆಗಿತ್ತು. ಇದೀಗ ಗದರ್ 2 ಸಿನಿಮಾವನ್ನು ಸಹ ಅನಿಲ್ ಶರ್ಮಾ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ