AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ದಿನದಲ್ಲಿ 39,000 ಟಿಕೆಟ್​ಗಳ ಮಾರಾಟ: ಕೆಜಿಎಫ್ 2 ದಾಖಲೆ ಮುರಿಯಲಿದೆಯೇ ಆದಿಪುರುಷ್?

Adipurush: ಆದಿಪುರುಷ್ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು ಸಿನಿಮಾದ 39,000 ಟಿಕೆಟ್​ಗಳು ಈಗಾಗಲೇ ಮಾರಾಟವಾಗಿವೆ. ಕೆಜಿಎಫ್ 2 ಸಿನಿಮಾದ ದಾಖಲೆಯನ್ನು ಮುರಿಯಲಿದೆಯೇ ಆದಿಪುರುಷ್?

ಒಂದೇ ದಿನದಲ್ಲಿ 39,000 ಟಿಕೆಟ್​ಗಳ ಮಾರಾಟ: ಕೆಜಿಎಫ್ 2 ದಾಖಲೆ ಮುರಿಯಲಿದೆಯೇ ಆದಿಪುರುಷ್?
ಆದಿಪುರುಷ್
ಮಂಜುನಾಥ ಸಿ.
|

Updated on: Jun 12, 2023 | 10:40 PM

Share

ಪ್ರಭಾಸ್ (Prabhas) ನಟನೆಯ ಬಿಗ್ ಬಜೆಟ್ ಪ್ಯಾನ್ ಇಂಡಿಯಾ (Pan India) ಸಿನಿಮಾ ಆದಿಪುರುಷ್ (Adipurush) ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಟಿಕೆಟ್​ಗಳ ಅಡ್ವಾನ್ಸ್ ಬುಕಿಂಗ್ ನಿನ್ನೆಯಷ್ಟೆ ಓಪನ್ ಆಗಿದ್ದು ಅಭೂತಪೂರ್ವ ಪ್ರತಿಕ್ರಿಯೆ ಪ್ರೇಕ್ಷಕರಿಂದ ಮೊದಲ ದಿನ ವ್ಯಕ್ತವಾಗಿದ್ದು, ದಾಖಲೆ ಸಂಖ್ಯೆಯ ಟಿಕೆಟ್​ಗಳು ಮುಂಗಡವಾಗಿ ಮೊದಲ ದಿನವೇ ಮಾರಾಟವಾಗಿವೆ. ಆ ಮೂಲಕ ಸಿನಿಮಾದ ಫಸ್ಟ್ ಡೇ ಕಲೆಕ್ಷನ್​ ಹಲವು ದಾಖಲೆಗಳನ್ನು ಮುರಿಯುವ ಸುಳಿವು ನೀಡಿದೆ.

ಪಿವಿಆರ್-ಐನಾಕ್ಸ್, ಸಿನೆಪೊಲೀಸ್ ಇನ್ನಿತರೆ ಮಲ್ಟಿಪ್ಲೆಕ್ಸ್​ ಚೈನ್​ಗಳಲ್ಲಿ ಮೊದಲ ದಿನವೇ ಆದಿಪುರುಷ್ ಸಿನಿಮಾದ 39,000 ಟಿಕೆಟ್​ಗಳು ಅಡ್ವಾನ್ಸ್ ಆಗಿ ಬುಕ್ ಆಗಿವೆ. ಅದೂ ಕೇವಲ ಹಿಂದಿ ಆವೃತ್ತಿಯ 39,000 ಟಿಕೆಟ್​ಗಳು ಅಡ್ವಾನ್ಸ್ ಆಗಿ ಮಾರಾಟವಾಗಿವೆ. ಬೇರೆ ಭಾಷೆಯ ಆವೃತ್ತಿಯ ಸಿನಿಮಾದ ಟಿಕೆಟ್​ಗಳೂ ಸಹ ದೊಡ್ಡ ಸಂಖ್ಯೆಯಲ್ಲಿ ಬುಕ್ ಆಗಿವೆ. ಆ ಮೂಲಕ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡುವ ಸುಳಿವನ್ನು ಆದಿಪುರುಷ್ ನೀಡಿದೆ.

18500 ಟಿಕೆಟ್​ಗಳು ಪಿವಿಆರ್​ನಲ್ಲಿ, 12500 ಟಿಕೆಟ್​ಗಳು ಐನಾಕ್ಸ್​ನಲ್ಲಿ ಹಾಗೂ ಸುಮಾರು 8000 ಟಿಕೆಟ್​ಗಳು ಸಿನೆಪೊಲೀಸ್​ನಲ್ಲಿ ಬುಕ್ ಆಗಿವೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಎಷ್ಟು ಟಿಕೆಟ್​ಗಳು ಮುಂಗಡ ಬುಕಿಂಗ್ ಆಗಿವೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಪಠಾಣ್ ಹಾಗೂ ಬ್ರಹ್ಮಾಸ್ತ್ರ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಅನ್ನು ಇನ್ನೊಂದು ಅಥವಾ ಎರಡು ದಿನದಲ್ಲಿ ಆದಿಪುರುಷ್ ಸಿನಿಮಾ ಮುರಿಯುವ ಸಾಧ್ಯತೆ ಇದೆ.

ಇದನ್ನೂ ಓದಿ:Prabhas: ‘ಆದಿಪುರುಷ್​’ ಬಿಡುಗಡೆ ದಿನ ಪ್ರಭಾಸ್​ ಭಾರತದಲ್ಲಿ ಇರಲ್ಲ? ಅಮೆರಿಕಕ್ಕೆ ತೆರಳಿದ ಪ್ಯಾನ್​ ಇಂಡಿಯಾ ಸ್ಟಾರ್​

ಹಿಂದಿ ಆವೃತ್ತಿಯ ಆದಿಪುರುಷ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆಯಾದರೂ ದಕ್ಷಿಣ ಭಾರತದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಡ್ವಾನ್ಸ್ ಬುಕಿಂಗ್ ಆಗಿಲ್ಲ ಎನ್ನಲಾಗುತ್ತಿದೆ. ಹಾಗಿದ್ದರೂ ಸಹ ಆದಿಪುರುಷ್ ಸಿನಿಮಾ ಈ ವರ್ಷದ ಅತಿ ದೊಡ್ಡ ಓಪನಿಂಗ್ ಪಡೆಯಲಿದೆ ಎಂದು ಟ್ರೇಡ್ ವಿಶ್ಲೇಷಕರು ಅಂದಾಜು ಹಾಕಿದ್ದಾರೆ. ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ಓಪನಿಂಗ್ ಕಲೆಕ್ಷನ್ ಅನ್ನು ಆದಿಪುರುಷ್ ಸಿನಿಮಾ ಹಿಂದಿಕ್ಕಲಿದೆ ಎನ್ನಲಾಗುತ್ತಿದೆ. ಆದರೆ ಮೊದಲ ದಿನದ ಗಳಿಕೆಯಲ್ಲ ದಾಖಲೆ ಸೃಷ್ಟಿಸಿರುವ ಕೆಜಿಎಫ್ 2 ಸಿನಿಮಾದ ದಾಖಲೆಯನ್ನು ಅಳಿಸುವುದು ಆದಿಪುರುಷ್​ಗೆ ಕಷ್ಟಸಾಧ್ಯ.

ಆದಿಪುರುಷ್ ಸಿನಿಮಾವು ರಾಮಾಯಣ ಕತೆ ಆಧರಿಸಿದ ಸಿನಿಮಾ ಆಗಿದ್ದು ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್, ಸೀತಾಮಾತೆಯ ಪಾತ್ರದಲ್ಲಿ ಕೃತಿ ಸನನ್, ಹನುಮಂತನ ಪಾತ್ರದಲ್ಲಿ ದೇವದತ್ತ ನಾಗರೆ, ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್ ಹಾಗೂ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಓಂ ರಾವತ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಟಿ-ಸೀರೀಸ್​ನ ಮಾಲೀಕ ಭೂಷಣ್ ಕುಮಾರ್. ಈ ಸಿನಿಮಾಕ್ಕೆ ಪ್ರಭಾಸ್ ಒಡೆತನದ ಯುವಿ ಕ್ರಿಯೇಷನ್ಸ್ ಸಹ ನಿರ್ಮಾಣ ಸಂಸ್ಥೆಯಾಗಿದೆ. ಆದಿಪುರುಷ್ ಸಿನಿಮಾವು ಜೂನ್ 16ರಂದು ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಭಾರತದಲ್ಲಿ ಸುಮಾರು 6200 ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಕರ್ನಾಟಕದಲ್ಲಿ ಕೆಆರ್​ಜಿ ಸಂಸ್ಥೆಯು ಸಿನಿಮಾದ ವಿತರಣೆ ಹಕ್ಕು ಪಡೆದುಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ