Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್ ವರ್ಮಾ ಜೊತೆಗಿನ ಪ್ರೇಮ ಸಂಬಂಧ ಒಪ್ಪಿಕೊಂಡ ನಟಿ ತಮನ್ನಾ: ಲವ್ ಶುರುವಾಗಿದ್ದು ಯಾವಾಗ?

Tamanna Bhatia: ನಟಿ ತಮನ್ನಾ ಭಾಟಿಯಾ ಹೆಸರು ಆಗಾಗ್ಗೆ ಕೆಲವು ನಟರೊಟ್ಟಿಗೆ ಕೇಳಿ ಬರುತ್ತಿತ್ತು. ಇದೀಗ ಸ್ವತಃ ತಮನ್ನಾ ತಮ್ಮ ಪ್ರೇಮದ ಬಗ್ಗೆ, ಪ್ರೀತಿಸುತ್ತಿರುವ ನಟನ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

ವಿಜಯ್ ವರ್ಮಾ ಜೊತೆಗಿನ ಪ್ರೇಮ ಸಂಬಂಧ ಒಪ್ಪಿಕೊಂಡ ನಟಿ ತಮನ್ನಾ: ಲವ್ ಶುರುವಾಗಿದ್ದು ಯಾವಾಗ?
ತಮನ್ನಾ ಭಾಟಿಯಾ
Follow us
ಮಂಜುನಾಥ ಸಿ.
|

Updated on: Jun 13, 2023 | 8:41 AM

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamanna Bhatia) ಈಗ ಬಹುಭಾಷಾ ನಟಿ. ತೆಲುಗು, ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ತಮನ್ನಾ ಇತ್ತೀಚೆಗೆ ಬಾಲಿವುಡ್​ನಲ್ಲಿಯೂ (Bollywood) ಸಾಲು-ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಆಗೊಮ್ಮೆ ಈಗೊಮ್ಮೆ ತಮನ್ನಾ ಹೆಸರು ಕೆಲವು ದಕ್ಷಿಣದ ನಟರೊಟ್ಟಿಗೆ ಕೇಳಿ ಬರುತ್ತಿತ್ತು. ಆದರೆ ಇತ್ತೀಚೆಗೆ ಬಾಲಿವುಡ್ ನಟನೊಬ್ಬನೊಟ್ಟಿಗೆ ತಮನ್ನಾ ಹೆಸರು ಗಾಢವಾಗಿ ಕೇಳಿ ಬಂದಿದ್ದು ಇದೀಗ ಸ್ವತಃ ತಮನ್ನಾ ತಮ್ಮ ಪ್ರೇಮ ಸಂಬಂಧದ ವಿಷಯ ಬಹಿರಂಗಗೊಳಿಸಿದ್ದಾರೆ.

ಬಾಲಿವುಡ್​ನ ಪ್ರತಿಭಾವಂತ ಪೋಷಕ ನಟ ವಿಜಯ್ ವರ್ಮಾ (Vijay Varma) ಜೊತೆ ತಮನ್ನಾ ಹೆಸರು ಕೇಳಿ ಬಂದಿತ್ತು. ಇಬ್ಬರೂ ಕೆಲವು ಕಡೆ ಒಟ್ಟಿಗೆ ಕಾಣಿಸಿಕೊಂಡು ಆ ಸುದ್ದಿಗಳಿಗೆ ಇನ್ನಷ್ಟು ಪುಷ್ಠಿ ನೀಡಿದ್ದರು. ಇದೀಗ ಸ್ವತಃ ನಟಿ ತಮನ್ನಾ ತಮ್ಮ ಹಾಗೂ ವಿಜಯ್ ವರ್ಮಾ ನಡುವಿನ ಪ್ರೇಮವನ್ನು ಒಪ್ಪಿಕೊಂಡಿದ್ದಾರೆ. ಫಿಲಂಕಂಪ್ಯಾನಿಯನ್ ಜೊತೆ ಮಾತನಾಡಿರುವ ನಟಿ ತಮನ್ನಾ ತಾವು ವಿಜಯ್ ವರ್ಮಾ ಅವರನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದು, ”ಯಾರೋ ಒಬ್ಬರು ನಿಮ್ಮ ಸಹನಟರಾಗಿದ್ದ ಮಾತ್ರಕ್ಕೆ ಅವರೊಡನೆ ಆಕರ್ಷಿತರಾಗಲು ಸಾಧ್ಯವಿಲ್ಲ. ಏಕೆಂದರೆ ನಾನು ಈಗಾಗಲೇ ಹಲವಾರು ನಟರೊಡನೆ ನಟಿಸಿದ್ದೇನೆ. ಯಾರ ಕಡೆಗೂ ನಾನು ಆಕರ್ಷಿತಳಾಗಿಲ್ಲ. ಯಾರ ಬಗ್ಗೆಯಾದರೂ ನೀವು ನಿಜಕ್ಕೂ ಮನಸೋತಿರೆಂದರೆ, ಭಾವನೆಗಳು ಹುಟ್ಟಿದವೆಂದರೆ ಅದು ಬಹಳ ಖಾಸಗಿ ವಿಷಯವಾಗಿರುತ್ತದೆ. ಆ ವ್ಯಕ್ತಿ ಹೇಗಿದ್ದಾನೆ, ಏನು ಮಾಡುತ್ತಿದ್ದಾನೆ, ಯಶಸ್ವಿ ವ್ಯಕ್ತಿಯೋ ಎಂಬುದೆಲ್ಲವೂ ಗಣನೆಗೆ ಬರುವುದೇ ಇಲ್ಲ” ಎಂದಿದ್ದಾರೆ.

ಮುಂದುವರೆದು ಮಾತನಾಡಿ, ”ವಿಜಯ್ ವರ್ಮಾ ನನ್ನ ಖುಷಿಯ ಖಜಾನೆ” ಎಂದು ಬಣ್ಣಿಸಿದ್ದು, ನಮ್ಮ ಸಂಬಂಧ ಬಹಳ ನೈಸರ್ಗಿಕ ರೀತಿಯಲ್ಲಿ ಯಾವುದೇ ಒತ್ತಡಗಳಿಲ್ಲದೆ ಶುರುವಾಯ್ತು ಎಂದು ಹೇಳಿಕೊಂಡಿದ್ದಾರೆ. ಮತ್ತು ಇಬ್ಬರೂ ಒಟ್ಟಿಗೆ ನಟಿಸಿರುವ ಲಸ್ಟ್ ಸ್ಟೊರೀಸ್ 2 ಸಿನಿಮಾದ ಸೆಟ್​ನಲ್ಲಿಯೇ ನಮ್ಮ ಪ್ರೀತಿ ಶುರುವಾಯಿತು ಎಂದು ಸಹ ತಮನ್ನಾ ಹೇಳಿಕೊಂಡಿದ್ದಾರೆ. ಆದರೆ ಕೆಲವು ದಿನಗಳ ಮುಂದಿನ ಸಂದರ್ಶನವೊಂದರಲ್ಲಿ ತಮ್ಮ ಹಾಗೂ ವಿಜಯ್ ಬಗೆಗಿನ ಸುದ್ದಿಗಳ ಬಗ್ಗೆ ಮಾತನಾಡಿ, ಅವೆಲ್ಲ ಗಾಳಿಸುದ್ದಿ ಆ ಬಗ್ಗೆ ನಾನು ಸ್ಪಷ್ಟನೆ ನೀಡಬೇಕಿಲ್ಲ ಎಂದಿದ್ದರು. ಆದರೆ ಈಗ ತಮ್ಮ ಹಾಗೂ ವಿಜಯ್ ನಡುವಿನ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:Tamanna Bhatia: ಅಧ್ಯಾತ್ಮದ ಕಡೆಗೆ ವಾಲಿದ ತಮನ್ನಾ ಭಾಟಿಯಾ; ನಟಿಯ ಜೀವನದಲ್ಲಿ ಆಗಿದೆ ಬದಲಾವಣೆ

ವಿಜಯ್ ವರ್ಮಾ ಬಾಲಿವುಡ್​ನ ಪ್ರತಿಭಾವಂತ ಪೋಷಕ ನಟ. ತೀರ ಸಣ್ಣ-ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಬಂದು ಈಗ ಪ್ರಧಾನ ಪೋಷಕ ಪಾತ್ರ ಅಥವಾ ವಿಲನ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ವಿಜಯ್ ವರ್ಮಾ. 2012 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ವಿಜಯ್ ವರ್ಮಾಗೆ ಮೊದಲಿಗೆ ತುಸು ಹೆಸರು ಮಾಡಿಕೊಟ್ಟಿದ್ದು ಪಿಂಕ್ ಸಿನಿಮಾದ ಸಣ್ಣ ನೆಗೆಟಿವ್ ಪಾತ್ರ. ಅದಾದ ಬಳಿಕ 2019ರ ಗಲ್ಲಿ ಬಾಯ್ ಸಿನಿಮಾದ ಪೋಷಕ ಪಾತ್ರದಿಂದ ಒಳ್ಳೆಯ ಹೆಸರಾಯ್ತು. ಈ ನಡುವೆ ತೆಲುಗಿನ ಎಂಸಿಎ ಹೆಸರಿನ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿಯೂ ವಿಜಯ್ ನಟಿಸಿದರು. ಮಿರ್ಜಾಪುರ್ ಸಿನಿಮಾದ ಅವಳಿ-ಜವಳಿ ಪಾತ್ರ ವಿಜಯ್ ವರ್ಮಾಗೆ ಉತ್ತಮ ಪ್ರತಿಕ್ರಿಯೆ ಗಳಿಸಿಕೊಟ್ಟಿತು. ಇತ್ತೀಚೆಗೆ ಬಿಡುಗಡೆ ಆದ ವೆಬ್ ಸರಣಿ ದಹಾಡ್​ನಲ್ಲಿ ವಿಲನ್ ಪಾತ್ರದಲ್ಲ ವಿಜಯ್ ವರ್ಮಾ ಮಿಂಚಿದ್ದಾರೆ. ನಟಿ ಆಲಿಯಾ ಭಟ್ ಜೊತೆ ಡಾರ್ಲಿಂಗ್ಸ್ ಹೆಸರಿನ ಸಿನಿಮಾದಲ್ಲಿಯೂ ವಿಜಯ್ ನಟಿಸಿದ್ದಾರೆ. ಇದೀಗ ಲಸ್ಟ್ ಸ್ಟೋರೀಸ್ 2 ಹೆಸರಿನ ಅಂಥೋಲಜಿ ಸಿನಿಮಾದಲ್ಲಿ ತಮನ್ನಾ ಹಾಗೂ ವಿಜಯ್ ವರ್ಮಾ ಒಟ್ಟಿಗೆ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮತ್ತೆ ಮಾರ್ದನಿಸಿದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಮಹಾಕುಂಭಮೇಳ ಹೇಗೆ ಅಯೋಜಿಸಲಾಯಿತು ಅಂತ ವಿಚಾರಿಸಿದ್ದೀನಿ: ಶಿವಕುಮಾರ್
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಬಜೆಟ್‌ನಲ್ಲಿ ಮಾವು, ರೇಷ್ಮೆ ಬೆಳೆಗೆ ಆದ್ಯತೆ ನೀಡಿ; ಸಂಸದ ಮಂಜುನಾಥ್ ಸಲಹೆ
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !