ತಮನ್ನಾ-ವಿಜಯ್ ವರ್ಮಾ ಸಂಬಂಧದ ಬಗ್ಗೆ ಅಶ್ಲೀಲ ಕಮೆಂಟ್​; ವಿಮರ್ಶಕನ ವಿರುದ್ಧ ಬೀಳುತ್ತಾ ಕೇಸ್?

ತಮನ್ನಾ ಹಾಗೂ ವಿಜಯ್ ವರ್ಮಾ ‘ಲಸ್ಟ್ ಸ್ಟೋರಿಸ್​ 2’ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಈಗ ಉಮೈರ್ ಸಂಧು ಅವರು ಇವರ ಸಂಬಂಧದ ಬಗ್ಗೆ ಟೀಕೆ ಮಾಡಿದ್ದಾರೆ.

ತಮನ್ನಾ-ವಿಜಯ್ ವರ್ಮಾ ಸಂಬಂಧದ ಬಗ್ಗೆ ಅಶ್ಲೀಲ ಕಮೆಂಟ್​; ವಿಮರ್ಶಕನ ವಿರುದ್ಧ ಬೀಳುತ್ತಾ ಕೇಸ್?
ವಿಜಯ್​ ವರ್ಮಾ, ತಮನ್ನಾ ಭಾಟಿಯಾ
Follow us
ರಾಜೇಶ್ ದುಗ್ಗುಮನೆ
|

Updated on: Jun 09, 2023 | 10:01 AM

ನಟಿ ತಮನ್ನಾ ಭಾಟಿಯಾ (Tamanna Bhatia) ಹಾಗೂ ವಿಜಯ್ ವರ್ಮಾ ಅವರು ‘ಲಸ್ಟ್​ ಸ್ಟೋರಿಸ್ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ರಿಯಲ್ ಲೈಫ್ ಜೋಡಿಗಳಾಗಿರುವ ತಮನ್ನಾ ಹಾಗೂ ವಿಜಯ್ ಈ ಚಿತ್ರದಲ್ಲಿ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಪರ ವಿರೋಧ ಚರ್ಚೆ ಆಗುತ್ತಿದೆ. ಹೀಗಿರುವಾಗಲೇ ಸ್ವಯಂಘೋಷಿತ ವಿಮರ್ಶಕ ಉಮೈರ್​ ಸಂಧು (Umair Sandhu) ಅವರು ತಮನ್ನಾ ಭಾಟಿಯಾ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಈ ಬಗ್ಗೆ ಅನೇಕರಿಂದ ಟೀಕೆ ವ್ಯಕ್ತವಾಗುತ್ತಿದೆ.

ತಮನ್ನಾ ಅವರು ಬಾಲಿವುಡ್ ಹಾಗೂ ದಕ್ಷಿಣ ಭಾರತದಲ್ಲಿ ಸಾಕಷ್ಟು ಬೇಡಿಕೆ ಹೊಂದಿದ್ದಾರೆ. ‘ಬಾಹುಬಲಿ’ ಅಂತಹ ಸಿನಿಮಾಗಳಲ್ಲಿ ನಟಿಸಿ ಅವರು ಯಶಸ್ಸು ಕಂಡಿದ್ದಾರೆ. ಗ್ಲಾಮರ್ ಪಾತ್ರಗಳನ್ನು ಮಾಡೋಕೆ ಅವರು ಎಂದಿಗೂ ಹಿಂಜರಿಯುವುದಿಲ್ಲ. ಈಗ ಅವರು ‘ಲಸ್ಟ್ ಸ್ಟೋರಿಸ್​ 2’ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಈಗ ಉಮೈರ್ ಸಂಧು ಅವರು ತಮನ್ನಾ ಹಾಗೂ ವಿಜಯ್ ವರ್ಮಾ ಸಂಬಂಧದ ಬಗ್ಗೆ ಟೀಕೆ ಮಾಡಿದ್ದಾರೆ.

ಈ ಬಗ್ಗೆ ಉಮೈರ್ ಸಂಧು ಟ್ವೀಟ್ ಮಾಡಿದ್ದಾರೆ. ‘ತಮನ್ನಾ ಭಾಟಿಯಾ ಎಲ್ಲಾ ಮಿತಿಗಳನ್ನು ದಾಟುತ್ತಿದ್ದಾರೆ. ಅವಳು ಬ್ಯಾಕ್ ಟು ಬ್ಯಾಕ್ ಅಶ್ಲೀಲ ವೆಬ್ ಸೀರೀಸ್​ಗಳಲ್ಲಿ ನಟಿಸುತ್ತಿದ್ದಾರೆ. ಅಡಲ್ಟ್​ ಸೀರಿಸ್ ಅವರ ಮೊದಲ ಆಯ್ಕೆ. ಗೆಳೆಯ ವಿಜಯ್ ವರ್ಮಾ ಅವರೊಂದಿಗೆ ಹಗಲು ರಾತ್ರಿ ಸಂಪೂರ್ಣವಾಗಿ ಆನಂದಿಸುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಉಮೈರ್​ ಸಂಧು ಹಾಕಿರೋ ಫೋಟೋದಲ್ಲಿ ತಮನ್ನಾ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಎಡಿಟ್ ಮಾಡಿದ ರೀತಿಯಲ್ಲಿ ಕಾಣುತ್ತದೆ. ಅನೇಕರು ಇದೆ ರೀತಿಯ ಅಭಿಪ್ರಾಯ ಹೊರ ಹಾಕಿದ್ದಾರೆ. ಸದ್ಯ ಉಮೈರ್ ಸಂಧು ವಿರುದ್ಧ ಅನೇಕರು ಟೀಕೆ ಹೊರಹಾಕಿದ್ದಾರೆ. ಅವರ ವಿರುದ್ಧ ಕೇಸ್ ಹಾಕಬೇಕು ಎಂದು ಅನೇಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Lust Stories 2: ‘ಗಾಡಿ ಖರೀದಿಗೂ ಮುನ್ನ ಟೆಸ್ಟ್​ ಡ್ರೈವ್​ ಮಾಡಿದಂತೆ ಮದುವೆಗೂ ಮಂಚೆ..’: ಕೌತುಕ ಕೆರಳಿಸಿದ ‘ಲಸ್ಟ್​ ಸ್ಟೋರೀಸ್​ 2’ ಟೀಸರ್​

ತಮನ್ನಾ ಭಾಟಿಯಾ ಮತ್ತು ವಿಜಯ್​ ವರ್ಮಾ ಅವರು ತಮ್ಮಿಬ್ಬರ ರಿಲೇಷನ್​ಶಿಪ್​ ವಿಚಾರದಲ್ಲಿ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಪದೇಪದೇ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹಿಂಟ್​ ನೀಡಿದ್ದಾರೆ. ಅವರಿಬ್ಬರ ಲವ್​ ಸ್ಟೋರಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ. ಅನೇಕ ಹೀರೋಯಿನ್​ಗಳು ಬೇಡಿಕೆಯ ಉತ್ತುಂಗದಲ್ಲಿ ಇರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಿಯಾರಾ ಅಡ್ವಾಣಿ, ಆಲಿಯಾ ಭಟ್​ ಮುಂತಾದವರೇ ಇದಕ್ಕೆ ಉದಾಹರಣೆ. ಅವರ ಸಾಲಿನಲ್ಲೇ ತಮನ್ನಾ ಭಾಟಿಯಾ ಕೂಡ ಸಾಗಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ