Lust Stories 2: ‘ಗಾಡಿ ಖರೀದಿಗೂ ಮುನ್ನ ಟೆಸ್ಟ್​ ಡ್ರೈವ್​ ಮಾಡಿದಂತೆ ಮದುವೆಗೂ ಮಂಚೆ..’: ಕೌತುಕ ಕೆರಳಿಸಿದ ‘ಲಸ್ಟ್​ ಸ್ಟೋರೀಸ್​ 2’ ಟೀಸರ್​

Lust Stories 2 teaser: ‘ಲಸ್ಟ್​ ಸ್ಟೋರೀಸ್​ 2’ ಸಿನಿಮಾದಲ್ಲಿ 4 ಕಥೆಗಳಿವೆ. ಒಟ್ಟಾರೆ ಸಿನಿಮಾದ ಕಾನ್ಸೆಪ್ಟ್​ ಏನು ಎಂಬುದನ್ನು ತಿಳಿಸುವ ರೀತಿಯಲ್ಲಿ ಈ ಟೀಸರ್​ ಮೂಡಿಬಂದಿದೆ.

Lust Stories 2: ‘ಗಾಡಿ ಖರೀದಿಗೂ ಮುನ್ನ ಟೆಸ್ಟ್​ ಡ್ರೈವ್​ ಮಾಡಿದಂತೆ ಮದುವೆಗೂ ಮಂಚೆ..’: ಕೌತುಕ ಕೆರಳಿಸಿದ ‘ಲಸ್ಟ್​ ಸ್ಟೋರೀಸ್​ 2’ ಟೀಸರ್​
ವಿಜಯ್​ ವರ್ಮಾ, ತಮನ್ನಾ ಭಾಟಿಯಾ
Follow us
ಮದನ್​ ಕುಮಾರ್​
|

Updated on: Jun 06, 2023 | 6:04 PM

2018ರಲ್ಲಿ ‘ಲಸ್ಟ್​ ಸ್ಟೋರೀಸ್​’ ಸಿನಿಮಾ ಬಿಡುಗಡೆ ಆಗಿತ್ತು. ಬೋಲ್ಡ್​ ಆದಂತಹ ಕಥಾಹಂದರ ಇದರಲ್ಲಿ ಇತ್ತು. 4 ಬೇರೆ ಬೇರೆ ಕಥೆಗಳನ್ನು ಇದು ಒಳಗೊಂಡಿತ್ತು. ಈಗ ‘ಲಸ್ಟ್​ ಸ್ಟೋರಿಸ್​ 2’ (Lust Stories 2 movie) ಬಿಡುಗಡೆಗೆ ಸಜ್ಜಾಗಿದೆ. ನೆಟ್​ಫ್ಲಿಕ್ಸ್​ (Netflix) ಮೂಲಕ ಈ ಚಿತ್ರ ಬಿಡುಗಡೆ ಆಗಲಿದೆ. ಈ ಬಾರಿ ಪಾತ್ರವರ್ಗದಲ್ಲಿ ದೊಡ್ಡ ದೊಡ್ಡ ಕಲಾವಿದರು ಸೇರ್ಪಡೆ ಆಗಿದ್ದಾರೆ. ಕಾಜೋಲ್​, ತಮನ್ನಾ ಭಾಟಿಯಾ, ವಿಜಯ್​ ವರ್ಮಾ, ನೀನಾ ಗುಪ್ತಾ, ಅಂಗದ್​ ಬೇಡಿ, ಮೃಣಾಲ್​ ಠಾಕೂರ್​ ಮುಂತಾದವರು ಇದರಲ್ಲಿ ನಟಿಸಿದ್ದಾರೆ. ಇಂದು (ಜೂನ್​ 6) ‘ಲಸ್ಟ್​ ಸ್ಟೋರಿಸ್​ 2’ ಟೀಸರ್​ (Lust Stories 2 teaser) ರಿಲೀಸ್​ ಮಾಡಲಾಗಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಇದು ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಈ ಟೀಸರ್​ನಲ್ಲಿನ ಡೈಲಾಗ್​ ಸಖತ್​ ವೈರಲ್​ ಆಗಿದೆ. ಆ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಲಾಗಿದೆ.

‘ಲಸ್ಟ್​ ಸ್ಟೋರಿಸ್​ 2’ ಸಿನಿಮಾದಲ್ಲೂ 4 ಕಥೆಗಳಿವೆ ಎಂಬುದು ಟೀಸರ್​ನಲ್ಲಿ ಗೊತ್ತಾಗಿದೆ. ಆರ್​. ಬಾಲ್ಕಿ, ಕೊಂಕಣ ಸೇನ್​ ಶರ್ಮಾ, ಸುಜಯ್​ ಘೋಷ್​, ಅಮಿತ್​ ರವಿಂದರ್​ನಾಥ್​ ಶರ್ಮಾ ಅವರು ಈ ಕಥೆಗಳಿಗೆ ನಿರ್ದೇಶನ ಮಾಡಿದ್ದಾರೆ. ಹೆಸರಾಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿರುವುದು ವಿಶೇಷ. ‘ಒಂದು ಸಣ್ಣ ಗಾಡಿ ಖರೀದಿಸುವುದಕ್ಕೂ ಮುನ್ನ ಟೆಸ್ಟ್​ ಡ್ರೈವ್​ ಮಾಡುತ್ತೀರಲ್ಲವೇ? ಅದೇ ರೀತಿ ಮದುವೆಗಿಂತ ಮುನ್ನ ಕೂಡ ಟೆಸ್ಟ್​ ಡ್ರೈವ್​’ ಎಂದು ನೀನಾ ಗುಪ್ತಾ ಹೇಳಿರುವ ಡೈಲಾಗ್​ ಹೈಲೈಟ್​ ಆಗಿದೆ.

ನೆಟ್​ಫ್ಲಿಕ್ಸ್​ ಮೂಲಕ ಜೂನ್​ 29ರಂದು ‘ಲಸ್ಟ್​ ಸ್ಟೋರೀಸ್​ 2’ ಬಿಡುಗಡೆ ಆಗಲಿದೆ. ಒಟಿಟಿ ಪ್ರೇಕ್ಷಕರು ಈ ಸಿನಿಮಾಗೆ ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು. ತಮನ್ನಾ ಮತ್ತು ವಿಜಯ್​ ವರ್ಮಾ ಅವರು ರಿಯಲ್​ ಲೈಫ್​ನಲ್ಲಿ ಡೇಟಿಂಗ್​ ಮಾಡುತ್ತಿದ್ದಾರೆ. ಅವರಿಬ್ಬರು ‘ಲಸ್ಟ್​ ಸ್ಟೋರೀಸ್​ 2’ ಸಿನಿಮಾದಲ್ಲಿ ಆಪ್ತವಾಗಿ ನಟಿಸಿದ್ದಾರೆ ಎಂಬುದಕ್ಕೆ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ. ಈ ಕಾರಣದಿಂದಲೂ ಈ ಸಿನಿಮಾ ಬಗ್ಗೆ ಕೌತುಕ ಮೂಡಿದೆ.

ಇದನ್ನೂ ಓದಿ: ತಮನ್ನಾ ಭಾಟಿಯಾ-ವಿಜಯ್​ ವರ್ಮಾ ಮನೆಯಲ್ಲಿ ನಡೆಯುತ್ತಿದೆ ಮದುವೆ ಮಾತುಕತೆ?

2018ರಲ್ಲಿ ಬಂದ ‘ಲಸ್ಟ್​ ಸ್ಟೋರೀಸ್​’ ಚಿತ್ರದಲ್ಲಿನ ಕಥೆಗಳಿಗೆ ಜೋಯಾ ಅಖ್ತರ್​, ಕರಣ್​ ಜೋಹರ್​, ದಿಬಾಕರ್​ ಬ್ಯಾನರ್ಜಿ, ಅನುರಾಗ್​ ಕಶ್ಯಪ್​ ಅವರು ನಿರ್ದೇಶನ ಮಾಡಿದ್ದರು. ಆದರೆ ಈಗ ಎರಡನೇ ಪಾರ್ಟ್​ಗೆ ಸಂಪೂರ್ಣ ಬೇರೆಯದೇ ನಿರ್ದೇಶಕರ ತಂಡ ಕೆಲಸ ಮಾಡಿದೆ. ಅಲ್ಲದೇ ಪಾತ್ರವರ್ಗ ಕೂಡ ಪೂರ್ತಿ ಬದಲಾಗಿದೆ. ನಿರೀಕ್ಷೆ ಹೆಚ್ಚಲು ಈ ಅಂಶ ಕೂಡ ಕಾರಣ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ