AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss OTT 2: ಜೂನ್​ 17ರಂದು ‘ಬಿಗ್​ ಬಾಸ್​ ಒಟಿಟಿ’ ಶುರು; ಪ್ರೋಮೋ ಮೂಲಕವೇ ಸ್ಪರ್ಧಿಗಳಿಗೆ ಎಚ್ಚರಿಕೆ ಕೊಟ್ಟ ಸಲ್ಮಾನ್​ ಖಾನ್​

Salman Khan: ಈ ಬಾರಿ ಸಲ್ಮಾನ್​ ಖಾನ್​ ಅವರಿಗೆ ‘ಬಿಗ್​ ಬಾಸ್​ ಒಟಿಟಿ’ ನಿರೂಪಣೆಯ ಜವಾಬ್ದಾರಿ ನೀಡಲಾಗಿದೆ. ಇದರ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ಸ್ಪರ್ಧಿಗಳಿಗೆ ಸಲ್ಮಾನ್​ ಖಾನ್​ ಎಚ್ಚರಿಕೆ ನೀಡಿದ್ದಾರೆ.

Bigg Boss OTT 2: ಜೂನ್​ 17ರಂದು ‘ಬಿಗ್​ ಬಾಸ್​ ಒಟಿಟಿ’ ಶುರು; ಪ್ರೋಮೋ ಮೂಲಕವೇ ಸ್ಪರ್ಧಿಗಳಿಗೆ ಎಚ್ಚರಿಕೆ ಕೊಟ್ಟ ಸಲ್ಮಾನ್​ ಖಾನ್​
Salman Khan
ಮದನ್​ ಕುಮಾರ್​
|

Updated on: Jun 07, 2023 | 3:13 PM

Share

ಕಿರುತೆರೆ ವೀಕ್ಷಕರಿಗೆ ಬಿಗ್​ ಬಾಸ್​ (Bigg Boss) ಶೋ ಬಗ್ಗೆ ಸಖತ್​ ಆಸಕ್ತಿ. ಕಳೆದ ವರ್ಷದಿಂದ ಈ ಕಾರ್ಯಕ್ರಮ ಕೇವಲ ಟಿವಿಗೆ ಮಾತ್ರ ಸೀಮಿತವಾಗಿಲ್ಲ. ಒಟಿಟಿಯಲ್ಲೂ ಬಿಗ್​ ಬಾಸ್​ ಕಾರ್ಯಕ್ರಮವನ್ನು ಪರಿಚಯಿಸಲಾಯಿತು. ಈ ವರ್ಷ ಅದರ 2ನೇ ಸೀಸನ್​ ಪ್ರಸಾರಕ್ಕೆ ಸಕಲ ಸಿದ್ಧತೆ ನಡೆದಿದೆ. ಜೂನ್​ 17ರಿಂದ ‘ಬಿಗ್​ ಬಾಸ್​ ಒಟಿಟಿ 2’ (Bigg Boss OTT 2) ಆರಂಭ ಆಗಲಿದೆ. ಕಳೆದ ಬಾರಿ ಇದರ ನಿರೂಪಣೆಯನ್ನು ಕರಣ್​ ಜೋಹರ್​ ಮಾಡಿದ್ದರು. ಈ ಬಾರಿ ಸಲ್ಮಾನ್​ ಖಾನ್​ (Salman Khan) ಅವರಿಗೆ ನಿರೂಪಣೆಯ ಜವಾಬ್ದಾರಿ ನೀಡಲಾಗಿದೆ. ಇಂದು (ಜೂನ್​ 7) ಈ ಕಾರ್ಯಕ್ರಮದ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಈ ಪ್ರೋಮೋದಲ್ಲಿ ಸ್ಪರ್ಧಿಗಳಿಗೆ ಸಲ್ಮಾನ್​ ಖಾನ್​ ಎಚ್ಚರಿಕೆ ನೀಡಿದ್ದಾರೆ.

ಟಿವಿಯಲ್ಲಿ ಪ್ರಸಾರ ಆಗುವ ಬಿಗ್​ ಬಾಸ್​ ಕಾರ್ಯಕ್ರಮಕ್ಕಿಂತಲೂ ‘ಬಿಗ್​ ಬಾಸ್​ ಒಟಿಟಿ’ ಶೋ ತುಂಬ ಡಿಫರೆಂಟ್​ ಆಗಿರುತ್ತದೆ. ತುಂಬ ಬೋಲ್ಡ್​ ಆದಂತಹ ಟಾಸ್ಕ್​ಗಳನ್ನು ನೀಡಲಾಗುತ್ತದೆ. ‘ಈ ಬಾರಿ ಇನ್ನಷ್ಟು ಕಷ್ಟ ಇರಲಿದೆ. ಅದಕ್ಕೆ ನಿಮ್ಮ ಸಹಾಯ ಬೇಕಾಗಬಹುದು’ ಎಂದು ಪ್ರೋಮೋದಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಸಲ್ಮಾನ್​ ಖಾನ್​ ಹೇಳಿದ್ದಾರೆ. ಅಂದರೆ, ಸ್ಪರ್ಧಿಗಳಿಗೆ ಈ ಬಾರಿಯ ಬಿಗ್​ ಬಾಸ್​ ಒಟಿಟಿ ಸಖತ್​ ಟಫ್​ ಆಗಿರುತ್ತದೆ ಎಂದು ಅವರು ಮುನ್ನೆಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಅನೇಕ ಸೆಲೆಬ್ರಿಟಿಗಳ ಹೆಸರು ಕೇಳಿಬರುತ್ತಿದೆ. ಆ ಪೈಕಿ ಯಾರೆಲ್ಲ ‘ಬಿಗ್​ ಬಾಸ್​ ಒಟಿಟಿ 2’ ಶೋನಲ್ಲಿ ಸ್ಪರ್ಧಿಸುವ ಚಾನ್ಸ್​ ಪಡೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಈ ಕಾರ್ಯಕ್ರಮ ‘ಜಿಯೋ ಸಿನಿಮಾ’ ಮೂಲಕ ಪ್ರಸಾರ ಆಗಲಿದೆ. ದಿನದ 24 ಗಂಟೆಯೂ ಉಚಿತವಾಗಿ ನೋಡುವ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ‘ಬಿಗ್​ ಬಾಸ್​ ಒಟಿಟಿ 2’ ಕಾರ್ಯಕ್ರಮವು ಹೆಚ್ಚಿನ ಜನರನ್ನು ತಲುಪುವ ನಿರೀಕ್ಷೆ ಇದೆ.

ಇದನ್ನೂ ಓದಿ: Salman Khan: ಸಲ್ಮಾನ್​ ಖಾನ್​ಗೆ ಬಂತು ಮದುವೆ ಪ್ರಪೋಸಲ್​; ಶಾರುಖ್​ ಖಾನ್​ ಹೆಸರು ಹೇಳಿ ತಪ್ಪಿಸಿಕೊಂಡ ನಟ

ಸಲ್ಮಾನ್​ ಖಾನ್​ ಅವರು ‘ಬಿಗ್​ ಬಾಸ್​ ಒಟಿಟಿ’ ನಿರೂಪಣೆ ಜೊತೆಗೆ ‘ಟೈಗರ್​ 3’ ಚಿತ್ರದ ಮೇಲೂ ಗಮನ ಹರಿಸಿದ್ದಾರೆ. ಅಭಿಮಾನಿಗಳ ಪಾಲಿನ ಖುಷಿಯ ವಿಚಾರ ಏನೆಂದರೆ ಈ ಸಿನಿಮಾದ ಶೂಟಿಂಗ್​ ಮುಕ್ತಾಯ ಆಗಿದೆ. ಈ ವಿಷಯವನ್ನು ಸ್ವತಃ ಸಲ್ಮಾನ್​ ಖಾನ್​ ಅವರು ಇತ್ತೀಚೆಗೆ ಖಚಿತ ಪಡಿಸಿದ್ದರು. ಮನೀಶ್​ ಶರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಯಶ್​ ರಾಜ್​ ಫಿಲ್ಮ್ಸ್​ ಮೂಲಕ ನಿರ್ಮಾಣ ಆಗುತ್ತಿದೆ. ಸಲ್ಮಾನ್​ ಖಾನ್​ ಜೊತೆ ಕತ್ರಿನಾ ಕೈಫ್​, ಇಮ್ರಾನ್ ಹಷ್ಮಿ ಕೂಡ ಪಾತ್ರವರ್ಗದಲ್ಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More