Mangal Dhillon: ಹಿರಿಯ ನಟ, ನಿರ್ಮಾಪಕ ಮಂಗಲ್ ದಿಲೋನ್ ನಿಧನ; ಕಂಬನಿ ಮಿಡಿದ ಚಿತ್ರರಂಗ
Mangal Dhillon Death: ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಂಗಲ್ ದಿಲೋನ್ ಅವರು ಕೊನೆಯುಸಿರು ಎಳೆದಿದ್ದಾರೆ. ಲೂದಿಯಾನಾದ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಪಂಜಾಬಿ ಮತ್ತು ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ನಟ (Senior Actor) ಹಾಗೂ ನಿರ್ಮಾಪಕ ಮಂಗಲ್ ದಿಲೋನ್ ಅವರು ಭಾನುವಾರ (ಜೂನ್ 11) ನಿಧನರಾಗಿದ್ದಾರೆ. ಬಹುಕಾಲದಿಂದ ಅವರಿಗೆ ಅನಾರೋಗ್ಯ ಉಂಟಾಗಿತ್ತು. ಕ್ಯಾನ್ಸರ್ನಿಂದ (Cancer) ಬಳಲುತ್ತಿದ್ದ ಅವರು ಕೊನೆಯುಸಿರು ಎಳೆದಿದ್ದಾರೆ. ಲೂದಿಯಾನಾದ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಬೇಸರದ ಸಂಗತಿ ಏನೆಂದರೆ ಅವರ ಜನ್ಮದಿನಕ್ಕೆ ಕೆಲವೇ ದಿನಗಳ ಬಾಕಿ ಇರುವಾಗ ಅವರ ನಿಧನವಾರ್ತೆ ಕೇಳಿಬಂದಿದೆ. ಬದುಕಿದ್ದರೆ ಜೂನ್ 18ರಂದು ಮಂಗಲ್ ದಿಲೋನ್ (Mangal Dhillon) ಅವರು ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. ಅವರ ನಿಧನಕ್ಕೆ ಚಿತ್ರರಂಗದ ಹಲವರು ಸಂತಾಪ ಸೂಚಿಸಿದ್ದಾರೆ.
80ರ ದಶಕದಲ್ಲಿ ಮಂಗಲ್ ದಿಲೋನ್ ಅವರು ಪ್ರಖ್ಯಾತಿ ಹೊಂದಿದ್ದರು. ಅವರ ನಟನೆಗೆ ಅಪಾರ ಅಭಿಮಾನಿಗಳು ಮನ ಸೋತಿದ್ದರು. ಪಂಜಾಬಿ ಮತ್ತು ಹಿಂದಿ ಚಿತ್ರರಂಗದಲ್ಲಿ ಮಂಗಲ್ ದಿಲೋನ್ ಅವರು ತಮ್ಮ ಛಾಪು ಮೂಡಿಸಿದ್ದರು. ಮೊದಲು ಪಂಜಾಬಿ ಭಾಷೆಯ ಸಿನಿಮಾಗಳಲ್ಲಿ ಫೇಮಸ್ ಆಗಿದ್ದ ಅವರು ನಂತರ ಬಾಲಿವುಡ್ಗೂ ಕಾಲಿಟ್ಟು ಖ್ಯಾತಿ ಗಳಿಸಿದರು. ‘ಕೂನ್ ಬರಿ ಮಾಂಗ್’, ‘ಟ್ರೇನ್ ಟು ಪಾಕಿಸ್ತಾನ್’, ‘ಕಹಾ ಹೈ ಕಾನೂನ್’ ಮುಂತಾದ ಸಿನಿಮಾಗಳಲ್ಲಿನ ಅವರ ನಟನೆಯನ್ನು ಪ್ರೇಕ್ಷಕರು ಈಗಲೂ ನೆನಪಿಸಿಕೊಳ್ಳುತ್ತಾರೆ.
Saddened to learn about the demise of noted actor, writer, director and producer of Punjabi cine industry Mr Mangal Dhillon. It’s a big loss to the world of Indian Cinema. His captivating voice and theatrical displays will be missed by many. I extend my heartfelt condolences to… pic.twitter.com/Jh7Oxst9CP
— Sukhbir Singh Badal (@officeofssbadal) June 11, 2023
ಮಂಗಲ್ ದಿಲೋನ್ ಅವರ ವೃತ್ತಿಜೀವನ ಕೇವಲ ನಟನೆಗೆ ಮಾತ್ರ ಸೀಮಿತ ಆಗಿರಲಿಲ್ಲ. ತಮ್ಮದೇ ಆದ ನಿರ್ಮಾಣ ಸಂಸ್ಥೆ ಆರಂಭಿಸುವ ಮೂಲಕ ಅವರು ಸಿನಿಮಾಗಳಿಗೆ ಬಂಡವಾಳ ಹೂಡಲು ಆರಂಭಿಸಿದ್ದರು. ಕಮರ್ಷಿಯಲ್ ಸಕ್ಸಸ್ ಕಾಣುವಂತಹ ಹಾಗೂ ವಿಮರ್ಶೆ ದೃಷ್ಟಿಯಿಂದಲೂ ಅತ್ಯುತ್ತಮ ಎನಿಸಿಕೊಳ್ಳುವಂತಹ ಸಿನಿಮಾಗಳನ್ನು ಅವರು ನಿರ್ಮಿಸಿದ್ದರು. ಚಿತ್ರರಂಗದಲ್ಲಿನ ಕೊಡುಗೆಯನ್ನು ಗುರುತಿಸಿ ಮಂಗಲ್ ದಿಲೋನ್ ಅವರಿಗೆ ಪಂಜಾಬ್ ಸರ್ಕಾರವು ‘ಬಾಬಾ ಫರೀದ್ ಪ್ರಶಸ್ತಿ’ನೀಡಿ ಗೌರವಿಸಿತ್ತು.
ರಂಗಭೂಮಿಯ ಹಿನ್ನೆಲೆಯಿಂದ ಬಂದವರು ಮಂಗಲ್ ದಿಲೋನ್. ಅನೇಕ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಅವರು ನಟನೆಯ ಪಾಠಗಳನ್ನು ಕರಗತ ಮಾಡಿಕೊಂಡಿದ್ದರು. ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರಿಗೆ ಪ್ರೇಕ್ಷಕರ ಚಪ್ಪಾಳೆ ಸಿಕ್ಕಿತು. ಕಿರುತೆರೆಯಲ್ಲೂ ನಟಿಸಿ ಅವರು ಖ್ಯಾತಿ ಗಳಿಸಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.