ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ ಆಯ್ಕೆಗೆ ಯಶ್ ಕಾರಣ

Ramayana: ರಣ್​ಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸಿ, ಸಾಯಿ ಪಲ್ಲವಿ ಸೀತಾದೇವಿಯ ಪಾತ್ರದಲ್ಲಿ ನಟಿಸುತ್ತಿರುವ ರಾಮಾಯಣ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಈ ಸಿನಿಮಾದಲ್ಲಿ ನಟ ಯಶ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಾತ್ರವಲ್ಲದೆ ಈ ಸಿನಿಮಾಕ್ಕೆ ಬಂಡವಾಳ ಸಹ ತೊಡಗಿಸಿದ್ದಾರೆ. ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತಾದೇವಿಯ ಪಾತ್ರದಲ್ಲಿ ನಟಿಸಲು ಯಶ್ ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ಯಶ್ ಏನು ಹೇಳಿದ್ದರು? ಇಲ್ಲಿದೆ ಮಾಹಿತಿ...

ರಾಮಾಯಣ ಸಿನಿಮಾದಲ್ಲಿ ಸಾಯಿ ಪಲ್ಲವಿ ಆಯ್ಕೆಗೆ ಯಶ್ ಕಾರಣ
Yash Sai Pallavi

Updated on: Mar 09, 2025 | 7:34 AM

ರಣ್​ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ನಟಿಸುತ್ತಿರುವ ರಾಮಾಯಣ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್​ನ ಸಿನಿಮಾ ಇದಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದ್ದು, ರಣ್​ಬೀರ್ ಕಪೂರ್ ರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತಾಮಾತೆಯ ಪಾತ್ರದಲ್ಲಿ ಮತ್ತು ಯಶ್ ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿದ್ದು, ಹಲವು ಅತ್ಯುತ್ತಮ ಹಾಲಿವುಡ್ ಪ್ರತಿಭೆಗಳು ಈ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾದ ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಆಯ್ಕೆ ಆಗಲು ಯಶ್ ಕಾರಣ ಎನ್ನಲಾಗುತ್ತಿದೆ.

ಹಾಲಿವುಡ್ ರಿಪೋರ್ಟರ್ ಯೂಟ್ಯೂಬ್ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಯಶ್​ಗೆ ಸಂದರ್ಶಕಿ ಅನುಪಮಾ ಚೋಪ್ರಾ, ‘ರಾಮಾಯಣ’ ಸಿನಿಮಾದ ರಾಮನ ಪಾತ್ರಕ್ಕೆ ರಣ್​ಬೀರ್ ಕಪೂರ್ ಮೊದಲೇ ಆಯ್ಕೆ ಆಗಿದ್ದರೆ ಎಂದು ಕೇಳುತ್ತಾರೆ ಅದಕ್ಕೆ ಯಶ್ ಹೌದು ಎನ್ನುತ್ತಾರೆ. ಸಾಯಿ ಪಲ್ಲವಿಯ ಆಯ್ಕೆಯೂ ಮೊದಲೇ ಆಗಿತ್ತೆ ಎನ್ನುತ್ತಾರೆ. ಅದಕ್ಕೆ ಯಶ್, ‘ಇಲ್ಲ, ಭಾರತದ ಎಲ್ಲ ಭಾಗದ ನಟರೂ ಈ ಸಿನಿಮಾದಲ್ಲಿ ಇರಬೇಕು ಎಂಬುದು ನನ್ನ ಆಸೆ ಆಗಿತ್ತು. ಈ ವಿಷಯವನ್ನು ನಾನು ನಿತೇಶ್ ಮುಂದೆ ಇರಿಸಿದೆ. ಅದಾದ ಬಳಿಕ ನಾವು ಎಲ್ಲರೂ ಚರ್ಚಿಸಿ ಒಟ್ಟಾಗಿ ಸಾಯಿ ಪಲ್ಲವಿ ಅವರನ್ನು ಸೀತೆಯ ಪಾತ್ರಕ್ಕೆ ಆಯ್ಕೆ ಮಾಡಿಕೊಂಡೆವು’ ಎಂದಿದ್ದಾರೆ ಯಶ್. ಅಂಹಾಗೆ ಯಶ್ ಈ ಸಿನಿಮಾದ ಸಹ ನಿರ್ಮಾಪಕ ಸಹ.

ಇದನ್ನೂ ಓದಿ:ರಾಕಿಂಗ್ ಸ್ಟಾರ್ ಯಶ್ ಈ ವ್ಯಕ್ತಿಗೆ ಬಾಸ್ ಎಂದು ಕರೆಯುತ್ತಾರೆ ಯಶ್

ಸಾಯಿ ಪಲ್ಲವಿ, ‘ರಾಮಾಯಣ’ ಸಿನಿಮಾನಲ್ಲಿ ಸೀತಾಮಾತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಣ್​ಬೀರ್ ಕಪೂರ್ ಮತ್ತು ಸಾಯಿ ಪಲ್ಲವಿಯ ಕೆಲ ಪೋಸ್ಟರ್​ಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಸಿನಿಮಾವನ್ನು ವಿಶೇಷ ತಂತ್ರಜ್ಞಾನ ಬಳಸಿ ಚಿತ್ರೀಕರಣ ಮಾಡಲಾಗುತ್ತಿದ್ದು, ಇದಕ್ಕಾಗಿ ನಟರಿಗೆಲ್ಲ ಅಮೆರಿಕದ ಪ್ರಸಿದ್ಧ ಸ್ಟುಡಿಯೋನಲ್ಲಿ ವಿಶೇಷ ತರಬೇತಿಯನ್ನು ಸಹ ನೀಡಲಾಗಿದೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು ಸಿನಿಮಾ ಬಿಡುಗಡೆಗೆ ಇನ್ನೂ ಒಂದು ವರ್ಷವಾದರೂ ಸಮಯ ಹಿಡಿಯುತ್ತದೆ.

ಈ ಹಿಂದೆ ಪ್ರಭಾಸ್ ‘ಆದಿಪುರುಷ್’ ಹೆಸರಿನಲ್ಲಿ ರಾಮಾಯಣವನ್ನು ತೆರೆಗೆ ತಂದರು ಆದರೆ ಆ ಸಿನಿಮಾ ಅಟ್ಟರ್ ಫ್ಲಾಪ್ ಆಯ್ತು, ಮಾತ್ರವಲ್ಲದೆ ದೇಶದಾದ್ಯಂತ ತೀವ್ರ ಟೀಕೆಗೆ ಸಹ ಗುರಿಯಾಯ್ತು. ‘ಆದಿಪುರುಷ್’ ಸಿನಿಮಾದ ವಿರುದ್ಧ ಹಲವು ಪ್ರಕರಣಗಳು ದಾಖಲಾದವು. ಇಷ್ಟೆಲ್ಲ ಆದರೂ ಸಹ ನಿತೇಶ್ ತಿವಾರಿ ಅವರು ರಾಮಾಯಣದ ಕತೆಯನ್ನು ಸಿನಿಮಾ ಮಾಡಲು ಎತ್ತಿಕೊಂಡಿದ್ದಾರೆ. ಅಂದಹಾಗೆ ಈ ಸಿನಿಮಾಕ್ಕೆ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಸಂಗೀತ ನೀಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ