ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರು ಸುಕೇಶ್ ಚಂದ್ರಶೇಖರ್ ಜೊತೆ ಸ್ನೇಹ ಬೆಳೆಸಿದ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೂರಾರು ಕೋಟಿ ರೂಪಾಯಿ ವಂಚನೆ ಕೇಸ್ನಲ್ಲಿ ಸುಕೇಶ್ ಜೈಲು ಪಾಲಾಗಿದ್ದಾನೆ. ಅಲ್ಲಿಂದಲೇ ಆತ ಪತ್ರಗಳನ್ನು ಬರೆಯುವ ಮೂಲಕ ಜಾಕ್ವೆಲಿನ್ ಫರ್ನಾಂಡಿಸ್ಗೆ ಕಾಟ ಕೊಡುತ್ತಿದ್ದಾನೆ. ಆತನ ವರ್ತನೆಯಿಂದ ಜಾಕ್ವೆಲಿನ್ ಫರ್ನಾಂಡಿಸ್ ಬೇಸತ್ತಿದ್ದಾರೆ. ಸುಕೇಶ್ (Sukesh Chandrasekhar) ವಿರುದ್ಧ ಅವರೀಗ ಗರಂ ಆಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಸುಕೇಶ್ನಿಂದ ತಮಗೆ ಬೆದರಿಕೆ ಇದೆ. ಹಾಗಾಗಿ ರಕ್ಷಣೆ ನೀಡಬೇಕು ಎಂದು ಜಾಕ್ವೆಲಿನ್ ಫರ್ನಾಂಡಿಸ್ ಅವರು ದೆಹಲಿ ಪೊಲೀಸ್ ಕಮಿಷನರ್ಗೆ ಮನವಿ ಸಲ್ಲಿಸಿದ್ದಾರೆ.
ಕ್ರೈಂ ಬ್ರ್ಯಾಂಚ್ನ ಸ್ಪೆಷಲ್ ಪೊಲೀಸ್ ಕಮಿಷನರ್ಗೂ ಜಾಕ್ವೆಲಿನ್ ಅವರು ಪತ್ರ ಬರೆದಿದ್ದಾರೆ. ತಮ್ಮ ಸುರಕ್ಷತೆಗೆ ಅಪಾಯ ಎದುರಾಗಿದೆ. ಆದ್ದರಿಂದ ಪೊಲೀಸರು ಕೂಡಲೇ ಈ ವಿಚಾರದ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಶೇಷ ತಂಡ ರಚಿಸಿ, ವಿಚಾರಣೆ ನಡೆಸುವಂತೆ ಸೂಚಿಸಲಾಗಿದೆ ಎಂದು ವರದಿ ಆಗಿದೆ.
ಇದನ್ನೂ ಓದಿ: 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ತಮ್ಮ ಹೆಸರು ಕೈ ಬಿಡುವಂತೆ ಕೋರಿ ಕೋರ್ಟ್ಗೆ ಜಾಕ್ವೆಲಿನ್ ಅರ್ಜಿ
ಜಾಕ್ವೆಲಿನ್ ಫರ್ನಾಂಡಿಸ್ ಅವರು ಸುಕೇಶ್ ಚಂದ್ರಶೇಖರ್ನಿಂದ ಅನೇಕ ದುಬಾರಿ ಉಡುಗೊರೆಗಳನ್ನು ಸ್ವೀಕರಿಸಿದ್ದರು ಎಂಬ ಆರೋಪ ಇದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಕೂಡ ಹೇಳಲಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸುಕೇಶ್ ಚಂದ್ರಶೇಖರ್ ಬಹಳ ಆಪ್ತವಾಗಿರುವ ಫೋಟೋಗಳು ವೈರಲ್ ಆಗಿವೆ. ಅಕ್ರಮ ಹಣ ವರ್ಗಾವಣೆ ಕೇಸ್ನ ಚಾರ್ಜ್ಶೀಟ್ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಹೆಸರು ಸಹ ಸೇರಿದೆ. ಆದರೆ ತಮ್ಮ ಹೆಸರನ್ನು ಕೈ ಬಿಡುವಂತೆ ಅವರು ಈಗಾಗಲೇ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಜೈಲಿನಿಂದ ಮತ್ತೆ ಜಾಕ್ವೆಲಿನ್ಗೆ ಲವ್ ಲೆಟರ್ ಬರೆದ ಸುಕೇಶ್ ಚಂದ್ರಶೇಖರ್
ಮೊದಲೆಲ್ಲ ಜಾಕ್ವೆಲಿನ್ ಫರ್ನಾಂಡಿಸ್ಗೆ ಸುಕೇಶ್ ಚಂದ್ರಶೇಖರ್ ಪ್ರೇಮ ಪತ್ರ ಬರೆಯುತ್ತಿದ್ದ. ಅದಕ್ಕೆ ಜಾಕ್ವೆಲಿನ್ ಸಿಟ್ಟಾಗಿದ್ದರು. ಆ ಬಳಿಕ ಸುಕೇಶ್ ಚಂದ್ರಶೇಖರ್ಗೂ ಕೋಪ ಬಂತು. ಇಷ್ಟು ದಿನ ಮುಚ್ಚಿಟ್ಟಿದ್ದ ಎಲ್ಲ ಸತ್ಯವನ್ನು ಬಹಿರಂಗಪಡಿಸುವುದಾಗಿ ಆತ ಪತ್ರದ ಮೂಲಕ ಎಚ್ಚರಿಕೆ ನೀಡಿದ. ಒಟ್ಟಿನಲ್ಲಿ ಆತನಿಂದ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಕಿರಿಕಿರಿ ಆಗುತ್ತಿದೆ. ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿರುವ ಅವರು ಈ ಕಿರಿಕ್ಗಳನ್ನು ಕೂಡ ನಿಭಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ