ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರಿಗೆ ಸಂಕಷ್ಟ ಹೆಚ್ಚುತ್ತಲೇ ಇದೆ. ಉದ್ಯಮಿಗಳಿಗೆ ಬಹುಕೋಟಿ ರೂಪಾಯಿ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ (Sukesh Chandrasekhar) ಜತೆಗೆ ಜಾಕ್ವೆಲಿನ್ ಹೆಸರು ತಳುಕು ಹಾಕಿಕೊಂಡಿದೆ. ಅವರಿಬ್ಬರ ನಡುವೆ ಲವ್ವಿಡವ್ವಿ ನಡೆದಿತ್ತು ಎಂಬುದಕ್ಕೆ ಹಲವು ಫೋಟೋಗಳು ಸಾಕ್ಷಿ ಒದಗಿಸುತ್ತಿವೆ. ಜಾರಿ ನಿರ್ದೇಶನಾಲಯ (Enforcement Directorate) ಈ ಪ್ರಕರಣದ ತನಿಖೆ ಮಾಡುತ್ತಿದ್ದು, ಬರೋಬ್ಬರಿ 7 ಸಾವಿರ ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ವಿಚಾರಣೆ ವೇಳೆ ಜಾಕ್ವೆಲಿನ್ ಹಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಅಚ್ಚರಿ ಎಂದರೆ ಜಾಕ್ವೆಲಿನ್ಗೆ ಪ್ರಕರಣದ ಕಿಂಗ್ಪಿನ್ ಸುಕೇಶ್ ಚಂದ್ರಶೇಖರ್ ವಂಚನೆ ಮಾಡಿದ್ದಾರಂತೆ! ಶ್ರೀಲಂಕಾ ಮೂಲದ ಈ ನಟಿಗೆ ಸುಕೇಶ್ ಅವರಿಂದ ಮೋಸ ಆಗಿದೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗುತ್ತಿದೆ. ‘ನನಗೆ ಸುಕೇಶ್ ಯಾರು ಎಂಬುದು ಗೊತ್ತಿಲ್ಲ. ಏಕೆಂದರೆ ಈಗ ಬಂಧನಕ್ಕೆ ಒಳಗಾದ ವ್ಯಕ್ತಿ ನನ್ನ ಬಳಿ ಬಂದು ಶೇಖರ್ ರತ್ನ ವೇಲಾ ಎಂದು ಪರಿಚಯಿಸಿಕೊಂಡಿದ್ದ. ಸನ್ ಟಿವಿ ನೆಟ್ವರ್ಕ್ನ ಮಾಲೀಕ ನಾನು ಎಂದು ಆತ ಪರಿಚಯಿಸಿಕೊಂಡಿದ್ದ. ತಮಿಳುನಾಡಿನ ಮಾಜಿ ಸಿಎಂ ಜೆ. ಜಯಲಿತಾ ಅವರ ಸಂಬಂಧಿ ಎಂದೂ ಹೇಳಿದ್ದ. ಆತ ನನ್ನ ದೊಡ್ಡ ಫ್ಯಾನ್ ಎಂದು ಬಿಂಬಿಸಿಕೊಂಡಿದ್ದ. ಸನ್ ಟಿವಿ ದಕ್ಷಿಣದಲ್ಲಿ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಅದರಲ್ಲಿ ನೀವು ನಟಿಸಬೇಕು ಎಂದು ಆತ ಹೇಳಿಕೊಂಡಿದ್ದ’ ಎಂದಿದ್ದಾರೆ ಅವರು.
‘ನನಗೆ ಫೆಬ್ರವರಿ ತಿಂಗಳಲ್ಲಿ ಶೇಖರ್ (ಸುಕೇಶ್) ಪರಿಚಯ ಆಗಿತ್ತು. ಸಿನಿಮಾದಲ್ಲಿ ನಟಿಸೋ ಆಫರ್ಅನ್ನು ಆತ ಕೊಟ್ಟಿದ್ದ. ಆತನನ್ನು ನಾನು ನಂಬಿದ್ದೆ. ಇದರ ಜತೆಗೆ ನನ್ನ ಸೋದರ ಸಂಬಂಧಿಗೆ ಆತ ಸಾಲದ ರೂಪದಲ್ಲಿ ಹಣ ನೀಡಿದ್ದ’ ಎಂದು ಜಾಕ್ವೆಲಿನ್ ಹೇಳಿಕೊಂಡಿದ್ದಾರೆ ಎಂದು ವರದಿ ಆಗಿದೆ. ಇದರ ಜತೆಗೆ ಬೆಕ್ಕು ಹಾಗೂ ಕುದುರೆಯನ್ನು ಗಿಫ್ಟ್ ಆಗಿ ನೀಡಿದ್ದನ್ನು ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಜಾಕ್ವೆಲಿನ್ ಕಿಸ್ಸಿಂಗ್ ಪ್ರಕರಣ: ನಟಿಯನ್ನು ದೂರ ಇಡೋಕೆ ಮುಂದಾದ ಸಲ್ಮಾನ್ ಖಾನ್
Jacqueline Fernandez: ವಂಚನೆ ಪ್ರಕರಣದ ಕಿಂಗ್ ಪಿನ್ ಜತೆ ಕಿಸ್ಸಿಂಗ್; ನಟಿ ಜಾಕ್ವೆಲಿನ್ಗೆ ನೋಟಿಸ್