ಸೆಲೆಬ್ರಿಟಿಗಳು ತಮ್ಮ ಫಿಟ್ನೆಸ್ಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ ಎನ್ನುವ ವಿಚಾರವನ್ನು ಮತ್ತೆ ಬಿಡಿಸಿ ಹೇಳಬೇಕಿಲ್ಲ. ನಿತ್ಯ ಹಲವು ಗಂಟೆ ಅವರು ಜಿಮ್ನಲ್ಲಿ ಕಳೆಯುತ್ತಾರೆ. ನಟಿಯರೂ ಫಿಟ್ನೆಸ್ ಕಾಯ್ದುಕೊಳ್ಳೋಕೆ ಯೋಗ ಹಾಗೂ ಜಿಮ್ ಮಾಡುತ್ತಾರೆ. ನಟಿ ಜಾನ್ವಿ ಕಪೂರ್ ಕೂಡ ಇದಕ್ಕೆ ಹೊರತಾಗಿಲ್ಲ. ಅವರು ಜಿಮ್ನಲ್ಲಿ ಹಲವು ಗಂಟೆ ಕಳೆಯುತ್ತಾರೆ. ಈ ವಿಡಿಯೋ ಹಾಗೂ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಳ್ಳುತ್ತಾರೆ. ಅವರು ಜಿಮ್ ಮಾಡುವಾಗ ಯಾವಾಗಲೂ ಶಾರ್ಟ್ಸ್ ಹಾಗೂ ಸ್ಪೋರ್ಟ್ಸ್ ಬ್ರಾ ಧರಿಸಿರುತ್ತಾರೆ. ಈ ಬಗ್ಗೆ ಅನೇಕರು ಕಣ್ಣರಳಿಸಿದ್ದಿದೆ. ಕೆಲವರು ಇದಕ್ಕೆ ಕೆಟ್ಟದಾಗಿ ಕಮೆಂಟ್ ಮಾಡಿದ ಉದಾಹರಣೆ ಕೂಡ ಇದೆ. ಈ ವಿಚಾರಕ್ಕೆ ಜಾನ್ವಿ ಖಡಕ್ ಆಗಿ ಉತ್ತರ ನೀಡಿದ್ದಾರೆ.
ಜಾನ್ವಿ ಜಿಮ್ನಿಂದ ಹೊರ ಬರುತ್ತಿರುವ ವಿಡಿಯೋ ಹಾಗೂ ಫೋಟೋಗಳನ್ನು ಪಾಪರಾಜಿಗಳು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ನಾನಾ ರೀತಿಯ ಕಮೆಂಟ್ಗಳು ಬರುತ್ತವೆ. ಈ ಬಗ್ಗೆ ಜಾನ್ವಿ ಮಾತನಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ.
‘ಅಭಿಮಾನಿಗಳು ಜಿಮ್ ಲುಕ್ನಲ್ಲಿ ನನ್ನನ್ನು ಹೆಚ್ಚಾಗಿ ನೋಡಿದ್ದಾರೆ ಎಂದು ಹೇಳುತ್ತಾರೆ. ನಾನು ಅದನ್ನೊಂದೇ ಮಾಡುವುದಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಲು ಬಯಸುತ್ತೇನೆ. ನನಗೆ ಆ ಉಡುಗೆ ಹೆಚ್ಚು ಇಷ್ಟ. ನನ್ನ ಜಿಮ್ ಶಾರ್ಟ್ಸ್ ಕೆಲವರಿಗೆ ಇಷ್ಟವಾಗುವುದಿಲ್ಲ. ನಾನು ಹೇಗೆ ಕಾಣುತ್ತಿದ್ದೇನೆ ಎನ್ನುವ ಬಗ್ಗೆ ಕೆಲವರು ಕಮೆಂಟ್ ಮಾಡುತ್ತಾರೆ. ಈ ಬಗ್ಗೆ ನನಗೆ ಯಾವುದೇ ತೊಂದರೆ ಇಲ್ಲ’ ಎಂದಿದ್ದಾರೆ. ಈ ಮೂಲಕ ಇವೆಲ್ಲವನ್ನೂ ತಾವು ನಿರ್ಲಕ್ಷ್ಯ ಮಾಡುತ್ತೇವೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಅನಿಲ್ ಕಪೂರ್ ಕೂಡ ಈ ಸಂದರ್ಶನದ ಸಮಯದಲ್ಲಿ ಇದ್ದರು. ಅವರು, ತಮ್ಮ ಫೋಟೋಗಳನ್ನು ಯಾರು ತೆಗೆಯುವುದೇ ಇಲ್ಲ ಎಂದು ಬೇಸರ ಹೊರ ಹಾಕಿದರು. ‘ಪಾಪರಾಜಿಗಳು ನನ್ನ ಫೋಟೋ ತೆಗೆಯುವುದಿಲ್ಲ. ಅವರಿಗೆ ಜಾನ್ವಿ ಫೋಟೋ ಮಾತ್ರ ಬೇಕು. ಇಲ್ಲದಿದ್ದರೆ ಫೋಟೋಗೆ ಪೋಸ್ ಕೊಡೋಕೆ ನಾನು ಜಿಮ್ ಎದುರು ಹೋಗುತ್ತಿದ್ದೆ’ ಎಂದು ನಕ್ಕಿದ್ದಾರೆ.
ಇದನ್ನೂ ಓದಿ: Janhvi Kapoor: ಚಿಲ್ಲಿಂಗ್ ಮೋಡ್ನಲ್ಲಿ ಜಾನ್ವಿ ಕಪೂರ್; ಹಾಟ್ ಫೋಟೋ ವೈರಲ್
ಶ್ರೀದೇವಿ ಮಗಳ ಬಜಾರಿತನ ಹೇಗಿದೆ ನೋಡಿ; ವೈರಲ್ ಆಯ್ತು ಜಾನ್ವಿ ಕಪೂರ್ ಜಗಳದ ವಿಡಿಯೋ