ಐಶಾರಾಮಿ ಕಾರು ಖರೀದಿಸಿದ ಜಾನ್ಹವಿ ಕಪೂರ್, ಕಾರಿನ ಬೆಲೆ ಎಷ್ಟು ಕೋಟಿ?

|

Updated on: Aug 18, 2024 | 5:32 PM

Janhvi Kapoor: ಬಾಲಿವುಡ್ ನಟಿ ಜಾನ್ಹವಿ ಕಪೂರ್ ಹೊಸ ಕಾರೊಂದನ್ನು ಖರೀದಿ ಮಾಡಿದ್ದಾರೆ. ರಣ್​ಬೀರ್ ಕಪೂರ್ ಹೊರತಾಗಿ ಇನ್ಯಾರ ಬಳಿಯೂ ಇಲ್ಲದ ಅತ್ಯಂತ ಐಶಾರಾಮಿ ಮತ್ತು ದುಬಾರಿ ಕಾರು ಇದಾಗಿದೆ. ಕಾರಿನ ಬೆಲೆ ಎಷ್ಟು?

ಐಶಾರಾಮಿ ಕಾರು ಖರೀದಿಸಿದ ಜಾನ್ಹವಿ ಕಪೂರ್, ಕಾರಿನ ಬೆಲೆ ಎಷ್ಟು ಕೋಟಿ?
Follow us on

ಜಾನ್ಹವಿ ಕಪೂರ್ ನಟನೆಯ ಸಿನಿಮಾ ಒಂದು ಹಿಟ್ ಆಗಿ ವರ್ಷಗಳೇ ಆದವು. ಹಾಗಿದ್ದರೂ ಸಹ ನಟಿಗೆ ಬೇಡಿಕೆ ಕಡಿಮೆ ಆಗಿಲ್ಲ. ಸಿನಿಮಾಗಳ ಮೂಲಕ ಮಾತ್ರವೇ ಅಲ್ಲದೆ ಜಾಹೀರಾತು, ಇನ್​ಸ್ಟಾಗ್ರಾಂ ಇನ್​ಫ್ಲೆಯೆನ್ಸ್, ಉದ್ದಿಮೆಗಳ ಮೇಲೆ ಹೂಡಿಕೆ ಮಾಡುವುದರಿಂದಲೂ ಸಹ ಹಣ ಗಳಿಸುತ್ತಿದ್ದಾರೆ. ಐಶಾರಾಮಿ ಜೀವನ ಪ್ರಿಯೆ ಆಗಿರುವ ಜಾನ್ಹವಿ, ಇದೀಗ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ಜಾನ್ಹವಿ ಕಪೂರ್ ಖರೀದಿ ಮಾಡಿರುವ ಈ ಐಶಾರಾಮಿ ಕಾರು ಸ್ಟಾರ್ ನಟ ರಣ್​ಬೀರ್ ಕಪೂರ್ ಹೊರತಾಗಿ ಬಾಲಿವುಡ್​ನ ಇನ್ಯಾರ ಬಳಿಯೂ ಸಹ ಇಲ್ಲ.

ಜಾನ್ಹವಿ ಕಪೂರ್, ಲೆಕ್ಸಸ್ ಎಲ್​ಎಂ 350 ಕಾರನ್ನು ಖರೀದಿ ಮಾಡಿದ್ದಾರೆ. ಈ ಕಾರಿನ ಎಕ್ಸ್ ಶೋರೂಂ ಬೆಲೆ 2.50 ಕೋಟಿ. ಕಾರಿನ ನೊಂದಣಿ, ಎಕ್ಸ್ಟ್ರಾ ಫಿಟ್ಟಿಂಗ್ ಸೇರಿ ಸುಮಾರು 3 ಕೋಟಿ ರೂಪಾಯಿ ಆಗುತ್ತದೆ. ಈ ಕಾರು ನಾಲ್ಕು ಚಕ್ರದ ಮೇಲಿನ ಲಕ್ಷುರಿ ಎಂದೇ ಕರೆಯಲಾಗುತ್ತದೆ. ನಾಲ್ಕು ಸೀಟಿನ ಈ ಕಾರಿನ ಎರಡನೇ ರೋ ಅತ್ಯಂತ ಐಶಾರಾಮಿ ಸೌಲಭ್ಯಗಳನ್ನು ಒಳಗೊಂಡಿದೆ. ಕ್ಯಾಪ್ಟನ್ ಸೀಟುಗಳನ್ನು ಒಳಗೊಂಡಿದ್ದು, ಈ ಸೀಟುಗಳು ಏಳು ರೀತಿಯ ಮಸಾಜ್ ಶೈಲಿ ಒಳಗೊಂಡಿರುತ್ತವೆ. ಹೀಟೆಡ್, ವೆಂಟಿಲೇಟೆಡ್ ವ್ಯವಸ್ಥೆಗಳನ್ನು ಸಹ ಒಳಗೊಂಡಿರುತ್ತದೆ. ಹಿಂದಿನ ಸೀಟಿನವರಿಗೆ ಪ್ರತ್ಯೇಕ ಟಿವಿ ವ್ಯವಸ್ಥೆ, ಕಾಲು ಉದ್ದ ಚಾಚಿ ಮಲಗುವ ವ್ಯವಸ್ಥೆ. ಪ್ರತ್ಯೇಕ ಲೈಟಿನ ವ್ಯವಸ್ಥೆ. ಕಾರಿನ ಹಲವು ಆಯ್ಕೆಗಳು ಹಿಂದಿನ ಸೀಟಿನವರಿಗೆ ನೀಡಲಾಗಿರುತ್ತದೆ.

ಇದನ್ನೂ ಓದಿ:ಹೊಸ ಕಾರು ಖರೀದಿಸಿದ ಬಾಲಿವುಡ್ ಸ್ಟಾರ್ ರಣ್​ಬೀರ್ ಕಪೂರ್: ಬೆಲೆ ಎಷ್ಟು?

ನಟ ರಣ್​ಬೀರ್ ಕಪೂರ್ ಸಹ ಈ ಕಾರನ್ನು ಖರೀದಿ ಮಾಡಿದ್ದಾರೆ. ಅವರು ಸಹ ಸುಮಾರು 2.80 ಕೋಟಿ ರೂಪಾಯಿಗಳನ್ನು ಈ ಕಾರಿಗಾಗಿ ನೀಡಿದ್ದಾರೆ. ರಣ್​ಬೀರ್ ಕಪೂರ್ ಲೆಕ್ಸಸ್ ಕಾರು ಖರೀದಿ ಮಾಡಿದ ಕೆಲವು ದಿನಗಳ ಬಳಿಕ ಇದೀಗ ಜಾನ್ಹವಿ ಕಪೂರ್ ಅದೇ ಕಾರು ಖರೀದಿ ಮಾಡಿದ್ದಾರೆ. ಖ್ಯಾತ ಜಪಾನಿ ಕಾರು ವಿನ್ಯಾಸಕ ಈ ಕಾರನ್ನು ವಿನ್ಯಾಸ ಮಾಡಿದ್ದಾರೆ. ‘ಲಕ್ಷುರಿ ಆನ್ ಮೋಷನ್’ ಎಂದು ಈ ಕಾರಿಗೆ ಹೆಸರಿಡಲಾಗಿದೆ.

ಜಾನ್ಹವಿ ಕಪೂರ್ ಪ್ರಸ್ತುತ ‘ದೇವರ’ ಸಿನಿಮಾದಲ್ಲಿ ನಟಿಸಿದ್ದಾರೆ. ಅದಕ್ಕೂ ಮುಂಚೆ ಅವರು ನಟಿಸಿರುವ ಹಲವು ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ತೋಪಾಗಿವೆ. ಇತ್ತೀಚೆಗೆ ತೆರೆಕಂಡ ‘ಉಲಜ್’ ಸಿನಿಮಾ ಅಟ್ಟರ್ ಫ್ಲಾಪ್ ಆಗಿದೆ. ಅದಕ್ಕೆ ಮುನ್ನ ಬಿಡುಗಡೆ ಆಗಿದ್ದ ‘ಮಿಸ್ಟರ್ ಆಂಡ್ ಮಿಸಸ್ ಮಹಿ’, ‘ಬವಾಲ್’, ‘ಮಿಲಿ’ ಸಿನಿಮಾಗಳು ಅಟ್ಟರ್ ಫ್ಲಾಪ್ ಆಗಿವೆ. ಹಾಗಿದ್ದರೂ ಸಹ ಜಾನ್ಹವಿಗೆ ಬೇಡಿಕೆ ಕಡಿಮೆಯಾಗಿಲ್ಲ. ಅವರ ಸಂಭಾವೆಯೂ ಸಹ ಏರಿಕ ಆಗುತ್ತಲೇ ಹೋಗುತ್ತಿದೆ. ಜಾನ್ಹವಿ ಇದೀಗ ತಮ್ಮ ಒಂದು ಸಿನಿಮಾಕ್ಕೆ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ