Javed Akhtar: ‘ಕಂಗನಾ ರಣಾವತ್​ ಮುಖ್ಯವೇ ಅಲ್ಲ’: ನೇರವಾಗಿ ಟೀಕೆ ಮಾಡಿದ ಜಾವೇದ್​ ಅಖ್ತರ್​

Javed Akhtar | Kangana Ranaut: ಯಾವಾಗಲೂ ಕಿರಿಕ್​ ಮಾಡುವ ಕಂಗನಾ ರಣಾವತ್​ ಅವರು ಅಪರೂಪಕ್ಕೆ ಜಾವೇದ್​ ಅಖ್ತರ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಆದರೆ ಅದಕ್ಕೆ ಜಾವೇದ್​ ಅಖ್ತರ್​ ಅವರು ಬೆಲೆ ನೀಡಿಲ್ಲ.

Javed Akhtar: ‘ಕಂಗನಾ ರಣಾವತ್​ ಮುಖ್ಯವೇ ಅಲ್ಲ’: ನೇರವಾಗಿ ಟೀಕೆ ಮಾಡಿದ ಜಾವೇದ್​ ಅಖ್ತರ್​
ಜಾವೇದ್ ಅಖ್ತರ್, ಕಂಗನಾ ರಣಾವತ್

Updated on: Feb 23, 2023 | 8:00 AM

ನಟಿ ಕಂಗನಾ ರಣಾವತ್​ (Kangana Ranaut) ಅವರು ವಿವಾದಗಳಿಂದಲೇ ಹೆಚ್ಚು ಸುದ್ದಿ ಆಗುತ್ತಾರೆ. ಬಾಲಿವುಡ್​ನ ಅನೇಕರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ಅದರಲ್ಲೂ ಜಾವೇದ್​ ಅಖ್ತರ್​ ಬಗ್ಗೆ ಈ ಹಿಂದೆ ಅವರು ಹಲವು ರೀತಿಯಲ್ಲಿ ಟೀಕೆ ಮಾಡಿದ್ದರು. ಆದರೆ ಈಗ ಏಕಾಏಕಿ ಜಾವೇದ್​ ಅಖ್ತರ್​ (Javed Akhtar) ಅವರನ್ನು ಕಂಗನಾ ರಣಾವತ್​ ಹೊಗಳಿದ್ದಾರೆ. ಆದರೆ ಅವರ ಮಾತುಗಳಿಂದ ಜಾವೇದ್​ ಅಖ್ತರ್​ ಸಂತಸಗೊಂಡಿಲ್ಲ. ಬದಲಿಗೆ, ‘ಕಂಗನಾ ರಣಾವತ್​ ಮುಖ್ಯವೇ ಅಲ್ಲ’ ಎಂದು ಹೇಳಿದ್ದಾರೆ. ಈ ರೀತಿ ಅವರು ಹೇಳಿದ್ದಕ್ಕೆ ಕಂಗನಾ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಕೌತುಕ ಮೂಡಿದೆ.

ಹಿರಿಯ ಗೀತರಚನಾಕಾರ ಜಾವೇದ್​ ಅಖ್ತರ್​ ಅವರು ಇತ್ತೀಚೆಗೆ ಪಾಕಿಸ್ತಾನದಲ್ಲಿ ನೀಡಿದ ಹೇಳಿಕೆ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. 26/11ರ ಮುಂಬೈ ದಾಳಿ ನಡೆಸಿದ ಭಯೋತ್ಪಾದಕರು ಪಾಕಿಸ್ತಾನದವರೇ ಹೊರತು ಬೇರೆ ದೇಶದವರಲ್ಲ ಎಂದು ಜಾವೇದ್​ ಅಖ್ತರ್​ ಅವರು ಪಾಕ್​ ನೆಲದಲ್ಲಿಯೇ ನಿಂತು ಗುಡುಗಿದ್ದಾರೆ. ಅವರ ಧೈರ್ಯವಂತಿಕೆಗೆ ಕಂಗನಾ ಕೂಡ ಭೇಷ್​ ಎಂದಿದ್ದಾರೆ. ಈ ಕುರಿತು ಅವರು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ
Kangana Ranaut: ಉಗ್ರರಿಂದ ಹತ್ಯೆಯಾದ ಕಾಶ್ಮೀರಿ ಹುಡುಗಿ ಪಾತ್ರದಲ್ಲಿ ಕಂಗನಾ? ಸೆನ್ಸೇಷನ್​ ಸೃಷ್ಟಿಸಿದೆ ಹೊಸ ಸಿನಿಮಾ ಸುದ್ದಿ
Emergency: ‘ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ’: ರಾಮ್​ ಗೋಪಾಲ್​ ವರ್ಮಾ
Emergency: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್! ಗಮನ ಸೆಳೆದ ‘ಎಮರ್ಜೆನ್ಸಿ’ ಫಸ್ಟ್​ ಲುಕ್​
Kangana Ranaut: ‘ಶಿವಸೇನೆ ಹನುಮಾನ್​ ಚಾಲೀಸ ಬ್ಯಾನ್​ ಮಾಡಿದ್ರೆ ಅವರನ್ನು ಶಿವ ಕೂಡ ಕಾಪಾಡಲ್ಲ’: ಕಂಗನಾ ರಣಾವತ್​

ಇದನ್ನೂ ಓದಿ: Kangana Ranaut: ‘ಸಿದ್ದಾರ್ಥ್​ ಮಲ್ಹೋತ್ರಾ-ಕಿಯಾರಾ ಅಡ್ವಾಣಿ ಅವರದ್ದು ನಿಜವಾದ ಪ್ರೀತಿ’: ಕಂಗನಾ ರಣಾವತ್​

‘ಜಾವೇದ್​ ಅವರ ಕವಿತೆ ಕೇಳಿದಾಗಲೆಲ್ಲ ಸರಸ್ವತಿಯೇ ಅವರಿಗೆ ಆಶೀರ್ವಾದ ಮಾಡಿದ್ದಾಳೆ ಎನಿಸುತ್ತದೆ. ಅವರಲ್ಲಿ ಸತ್ಯ ಇರುವ ಕಾರಣಕ್ಕೇ ಆ ದೈವಿ ಗುಣ ಇದೆ. ಜೈ ಹಿಂದ್​. ಪಾಕಿಸ್ತಾನದವರ ಮನೆಗೆ ನುಗ್ಗಿ ಹೊಡೆದಿದ್ದಾರೆ’ ಎಂದು ಕಂಗನಾ ರಣಾವತ್​ ಅವರು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: Kangana Ranaut: ‘ನನ್ನ ಧಾಕಡ್​ ಚಿತ್ರದ್ದು ಐತಿಹಾಸಿಕ ಸೋಲು ನಿಜ’: ಕಂಗನಾ ರಣಾವತ್​ ಬಹಿರಂಗ ಹೇಳಿಕೆ

ಕಂಗನಾ ರಣಾವತ್​ ಅವರ ಹೇಳಿಕೆಗೆ ಪ್ರತಿಕ್ರಿಯೆ ಪಡೆಯಲು ಮಾಧ್ಯಮದವರು ಜಾವೇದ್​ ಅಖ್ತರ್​ ಅವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಜಾವೇದ್​ ಅವರು, ‘ಕಂಗನಾ ಅವರನ್ನು ನಾನು ಮುಖ್ಯ ಎಂದು ಪರಿಗಣಿಸಿಲ್ಲ. ಅವರು ಹೇಗೆ ಮುಖ್ಯವಾದ ಹೇಳಿಕೆ ನೀಡಲು ಸಾಧ್ಯ? ಅವರನ್ನು ಬಿಡಿ, ಮುಂದೆ ಹೋಗೋಣ’ ಎಂದು ಜಾವೇದ್​ ಅಖ್ತರ್​ ಹೇಳಿದ್ದಾರೆ.

ಇದನ್ನೂ ಓದಿ: Emergency: ಇಂದಿರಾ ಗಾಂಧಿ ಕುರಿತು ಸಿನಿಮಾ ಮಾಡಲು ಆಸ್ತಿ ಅಡವಿಟ್ಟ ಕಂಗನಾ ರಣಾವತ್​

ಕಂಗನಾ ಅವರು ಯಾವಾಗ ಯಾರನ್ನು ಹೊಗಳುತ್ತಾರೆ ಮತ್ತು ಯಾರನ್ನು ತೆಗಳುತ್ತಾರೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಹಾಗಾಗಿ ಬಹುತೇಕರು ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಪ್ರಸ್ತುತ ಕಂಗನಾ ಅವರು ‘ಚಂದ್ರಮುಖಿ 2’ ಸಿನಿಮಾದ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಎಮರ್ಜೆನ್ಸಿ’ ಸಿನಿಮಾಗೆ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ.

ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯ ಸಂದರ್ಭವನ್ನು ಆಧಾರವಾಗಿ ಇಟ್ಟುಕೊಂಡು ‘ಎಮರ್ಜೆನ್ಸಿ’ ಸಿನಿಮಾ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ಅನೇಕ ಹೆಸರಾಂತ ಕಲಾವಿದರು ನಟಿಸುತ್ತಿದ್ದಾರೆ. ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us