Jiah Khan: ನಟಿ ಜಿಯಾ ಖಾನ್​ ನಿಧನವಾದ ದಿನದಿಂದ ಇಲ್ಲಿಯವರೆಗೆ ಏನೆಲ್ಲಾ ಆಯ್ತು? ಇಲ್ಲಿದೆ ಪೂರ್ತಿ ವಿವರ

|

Updated on: Apr 28, 2023 | 12:53 PM

Jiah Khan Death Case Timeline: ಸುದೀರ್ಘ 10 ವರ್ಷಗಳ ಕಾಲ ಜಿಯಾ ಖಾನ್​ ಸಾವಿನ ಪ್ರಕರಣದ ವಿಚಾರಣೆ ನಡೆದಿದೆ. ಈಗ ತೀರ್ಪು ಪ್ರಕಟವಾಗುವ ಸಮಯ ಬಂದಿದೆ.

Jiah Khan: ನಟಿ ಜಿಯಾ ಖಾನ್​ ನಿಧನವಾದ ದಿನದಿಂದ ಇಲ್ಲಿಯವರೆಗೆ ಏನೆಲ್ಲಾ ಆಯ್ತು? ಇಲ್ಲಿದೆ ಪೂರ್ತಿ ವಿವರ
ಜಿಯಾ ಖಾನ್
Follow us on

ಅದು 2013ರ ಸಮಯ. ನಟಿ ಜಿಯಾ ಖಾನ್​ (Jiah Khan) ಅವರು ಆಗತಾನೇ ಚಿತ್ರರಂಗದಲ್ಲಿ ಮಿಂಚುವ ಕನಸುಗಳನ್ನು ನನಸಾಗಿಸಿಕೊಳ್ಳುತ್ತಿದ್ದರು. ಆದರೆ ಏಕಾಏಕಿ ಅವರು ಸಾವಿಗೆ ಶರಣಾಗಿದ್ದು ವಿಪರ್ಯಾಸ. 2013ರ ಜೂನ್​ 3ರಂದು ಅವರ ನಿಧನದ ಸುದ್ದಿ ಕೇಳಿ ಇಡೀ ಬಾಲಿವುಡ್​ ಆಘಾತಕ್ಕೆ ಒಳಗಾಗಿತ್ತು. ಆ ಘಟನೆ ನಡೆದು ಈಗ 10 ವರ್ಷ ಕಳೆದಿದೆ. ಜಿಯಾ ಖಾನ್​ ಸಾವಿನ (Jiah Khan Death) ಪ್ರಕರಣಕ್ಕೆ ಇಂದು (ಏಪ್ರಿಲ್​ 28) ತೀರ್ಪು ಬಂದಿದೆ. ಸಿಬಿಐ ವಿಶೇಷ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. ಈ ಪ್ರಕರಣದಲ್ಲಿ ಸೂರಜ್​ ಪಾಂಚೋಲಿ (Sooraj Pancholi) ಪ್ರಮುಖ ಆರೋಪಿ ಆಗಿದ್ದರು. ಆದರೆ ಅವರು ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಭಾರಿ ಕೌತುಕ ಮೂಡಿಸಿದ್ದ ಜಿಯಾ ಖಾನ್​ ಕೇಸ್​ ಅಂತ್ಯವಾಗಿದೆ. ಅವರು ನಿಧನ ಹೊಂದಿದ ನಂತರದಲ್ಲಿ ಏನೆಲ್ಲ ಆಯ್ತು ಎಂಬುದರ ವಿವರ ಇಲ್ಲಿದೆ..

2013:

ಮುಂಬೈನ ಜುಹೂ ಅಪಾರ್ಟ್​ಮೆಂಟ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಜಿಯಾ ಖಾನ್​ ಶವ ಪತ್ತೆ ಆಯಿತು. ಅದಾಗಿ ಕೆಲವೇ ವಾರಗಳ ಬಳಿಕ ಅವರ ಪ್ರಿಯಕರ ಸೂರಜ್​ ಪಾಂಚೋಲಿ ಮೇಲೆ ಕೇಸ್​ ದಾಖಲಾಯಿತು. ಜಿಯಾ ಖಾನ್​ ಬರೆದ ಡೆತ್​ ನೋಟ್​ ಆಧರಿಸಿ ಪ್ರಕರಣ ದಾಖಲಿಸಲಾಯಿತು. ಬಳಿಕ ಜುಲೈನಲ್ಲಿ ಸೂರಜ್​ ಪಾಂಚೋಲಿ ಜಾಮೀನು ಪಡೆದರು.

2014:

ಜಿಯಾ ಖಾನ್​ ಅವರ ತಾಯಿ ರಬಿಯಾ ಸಲ್ಲಿಸಿದ ಮನವಿ ಮೇರೆಗೆ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಯಿತು. ರಬಿಯಾ ವಿರುದ್ಧ ಸೂರಜ್​ ಪಾಂಚೋಲಿ ಅವರು 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿದರು.

2015:

ಜೂನ್​ ತಿಂಗಳಲ್ಲಿ ಸೂರಜ್​ ಪಾಂಚೋಲಿ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದರು. ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಅವರ ವಿರುದ್ಧ ಸಪ್ಲಿಮೆಂಟರಿ ಚಾರ್ಜ್​ಶೀಟ್​ ದಾಖಲಿಸಲಾಯಿತು.

ಇದನ್ನೂ ಓದಿ: ನಟಿಯ ಸಾವಿನ ಕೇಸ್: ಪ್ರಕರಣದ ಮರುವಿಚಾರಣೆಗೆ ಕೋರ್ಟ್ ನಕಾರ  

2016:

ಜಿಯಾ ಖಾನ್​ ಅವರ ಕೊಲೆ ನಡೆದಿರುವ ಸಾಧ್ಯತೆ ಕಡಿಮೆ. ಇದು ಆತ್ಮಹತ್ಯೆ ಎಂದು ಸಿಬಿಐ ಹೇಳಿತು. ಬಳಿಕ ರಬಿಯಾ ಅವರು ವಿದೇಶದ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ಸಹಾಯ ಪಡೆಯಲು ಮುಂದಾದರು. ಆ ತಜ್ಞರ ಅಭಿಪ್ರಾಯವನ್ನು ಸೂರಜ್​ ಪಾಂಚೋಲಿ ತಳ್ಳಿಹಾಕಿದರು.

2017:

ಸಿಬಿಐನ ವಿಶೇಷ ತನಿಖಾ ದಳಕ್ಕೆ ಪ್ರಕರಣವನ್ನು ವರ್ಗಾಯಿಸಬೇಕು ಎಂದು ರಬಿಯಾ ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಮಗಳ ಸಾವಿಗೆ ನ್ಯಾಯ ಒದಗಿಸಿಕೊಡಿ ಎಂದು ನರೇಂದ್ರ ಮೋದಿಗೆ ರಬಿಯಾ ಪತ್ರ ಬರೆದರು. ಕೇಸ್​ ವಿಚಾರಣೆ ಬೇಗ ಮುಗಿಯಲಿ ಎಂದು ಮುಂಬೈ ಹೈಕೋರ್ಟ್​ಗೆ ಸೂರಜ್​ ಪಾಂಚೋಲಿ ಮನವಿ ಮಾಡಿಕೊಂಡರು.

ಬಾಲಿವುಡ್​ನಲ್ಲಿ ಇರುವ ಹುಳುಕು ಒಂದೆರಡಲ್ಲ; ಆರೋಪ ಮಾಡಿದವರ ದೊಡ್ಡ ಪಟ್ಟಿ ಇಲ್ಲಿದೆ..

2018:

ಸೂರಜ್ ಪಾಂಚೋಲಿ ವಿರುದ್ಧ ಹೆಚ್ಚಿನ ವಿಚಾರಣೆ ಮಾಡಲು ಸಿಬಿಐ ನಿರಾಕರಿಸಿತು. ಬಳಿಕ ಮಾಧ್ಯಮಗಳಿಗೆ ಸೂರಜ್​ ಪಾಂಚೋಲಿ ಪ್ರತಿಕ್ರಿಯೆ ನೀಡಿದರು.

2021:

ಸಿಬಿಐ ತನಿಖೆ ಮಾಡಿದ ಬಳಿಕ ತನ್ನ ಕಾರ್ಯವ್ಯಾಪ್ತಿಯಲ್ಲಿ ಈ ಪ್ರಕರಣ ಬರುವುದಿಲ್ಲ ಎಂದು ಸೆಷನ್​ ಕೋರ್ಟ್​ ತಿಳಿಸಿತು. ಹಾಗಾಗಿ ವಿಶೇಷ ಸಿಬಿಐ ಕೋರ್ಟ್​ಗೆ ಜಿಯಾ ಖಾನ್​ ಕೇಸ್​ ವರ್ಗಾವಣೆ ಆಯಿತು.

ಇದನ್ನೂ ಓದಿ: Jiah Khan Case: ಜಿಯಾ ಖಾನ್​ ಸಾವಿನ ಪ್ರಕರಣ; 10 ವರ್ಷದ ಬಳಿಕ ಬರ್ತಿದೆ ತೀರ್ಪು; ಏನಾಗಲಿದೆ ಪ್ರಿಯಕರನ ಭವಿಷ್ಯ?

2022:

ಹೊಸದಾಗಿ ತನಿಖೆ ಮಾಡಬೇಕು ಎಂಬ ರಬಿಯಾ ಅವರ ಮನವಿಯನ್ನು ಮುಂಬೈ ಹೈಕೋರ್ಟ್​ ತಿರಸ್ಕರಿಸಿತು.

2023:

ಏಪ್ರಿಲ್​ 20ರಂದು ಅಂತಿಮ ವಾದ-ಪ್ರತಿವಾದ ನಡೆಯಿತು. ವಿಶೇಷ ನ್ಯಾಯಮೂರ್ತಿ ಎ.ಎಸ್​. ಸಯ್ಯದ್​ ಅವರು ತೀರ್ಪು ಕಾಯ್ದಿರಿಸಿದರು. ಈ ಪ್ರಕರಣದಲ್ಲಿ ಸೂರಜ್​ ಪಾಂಚೋಲಿ ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:27 pm, Fri, 28 April 23