ನಟ ಜಾನ್ ಅಬ್ರಾಹಂ (Johan Abraham) ಅವರು ಹೀರೋ ಆಗಿ, ವಿಲನ್ ಆಗಿ ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಇತ್ತೀಚಿನ ವರ್ಷಗಳಲ್ಲಿ ಹೀರೋಗಿಂತ ವಿಲನ್ ಆಗಿ ಗಮನ ಸೆಳೆದಿದ್ದು ಹೆಚ್ಚು. ಕಳೆದ ವರ್ಷ ರಿಲೀಸ್ ಆದ ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದಲ್ಲಿ ಖಡಕ್ ವಿಲನ್ ಪಾತ್ರ ಮಾಡಿದ್ದರು. ಈ ಸಿನಿಮಾ ಗೆಲ್ಲಲು ಅವರ ಕೊಡಗೆಯೂ ಇದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 1000 ಕೋಟಿ ರೂಪಾಯಿ ಬಾಚಿಕೊಂಡಿದೆ. ಈಗ ಅವರು ಹೀರೋ ಆಗಿ ಮಿಂಚಲು ರೆಡಿ ಆಗಿದ್ದಾರೆ. ಅವರ ನಟನೆಯ ‘ವೇದಾ’ ಸಿನಿಮಾ ಜುಲೈ 12ರಂದು ರಿಲೀಸ್ ಆಗಲಿದೆ. ಈ ಬಗ್ಗೆ ತಂಡ ಮಾಹಿತಿ ಹಂಚಿಕೊಂಡಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ.
ಈ ಮೊದಲು ರಿಲೀಸ್ ಆಗಿದ್ದ ಜಾನ್ ಅಬ್ರಾಹಂ ನಟನೆಯ ‘ಬಾಟ್ಲಾ ಹೌಸ್’ ಗೆಲುವು ಕಂಡಿತ್ತು. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ನಿಖಿಲ್ ಅಡ್ವಾಣಿ. ಈಗ ಜಾನ್ ಅಬ್ರಾಹಂ ಹಾಗೂ ನಿಖಿಲ್ ಅಡ್ವಾಣಿ ‘ವೇದಾ’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಆ್ಯಕ್ಷನ್ ಪ್ರಿಯರಿಗೆ ಸಿನಿಮಾ ಇಷ್ಟ ಆಗಲಿದೆ. ಜಾನ್ ಅಬ್ರಹಾಂ ಅವರು ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
‘ಬಾಟ್ಲಾ ಹೌಸ್’ ಸಿನಿಮಾ ನೈಜ ಘಟನೆ ಆಧರಿಸಿ ಸಿದ್ಧವಾದ ಸಿನಿಮಾ. ಈಗ ‘ವೇದಾ’ ಚಿತ್ರಕ್ಕೂ ನೈಜ ಘಟನೆ ಸ್ಫೂರ್ತಿ ಆಗಿದೆ. ‘ವೇದಾ ಇದು ಕೇವಲ ಸಿನಿಮಾ ಅಲ್ಲ. ನೈಜ ಘಟನೆ ಆಧರಿಸಿದ ನಮ್ಮ ಸಮಾಜದ ಪ್ರತಿಬಿಂಬ. ಜಾನ್ ಅಬ್ರಾಹಂ ಹಾಗೂ ಶಾರ್ವರಿ, ಅಭಿಷೇಕ್ ಬ್ಯಾನರ್ಜಿ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿದೆ. ಈಗ ಸಿನಿಮಾದ ರಿಲೀಸ್ ಡೇಟ್ ಘೋಷಣೆ ಮಾಡುವ ಸಮಯ. ಜುಲೈ 12ರಂದು ನಾವು ಬರುತ್ತಿದ್ದೇವೆ’ ಎಂದು ನಿಖಿಲ್ ಅಡ್ವಾಣಿ ಹೇಳಿದ್ದಾರೆ.
Dive into the world of #Vedaa.
Releasing in cinemas on July 12th! #Sharvari @nowitsabhi @tamannaahspeaks @nikkhiladvani @monishaadvani @madhubhojwani @shariqpatel @minnakshidas @aseem_arora @ZeeStudios_ @EmmayEntertain @johnabrahament @anilandbhanu @ZeeMusicCompany @zeecinema pic.twitter.com/5F4xiOmjrH
— John Abraham (@TheJohnAbraham) February 7, 2024
ಶಾರ್ವರಿ ವಾಘ್ ಅವರು ಜಾನ್ ಅಬ್ರಹಾಂ ಜೊತೆ ಮೊದಲ ಬಾರಿಗೆ ನಟಿಸಿದ್ದಾರೆ. ಈ ಮೊದಲು ಅವರು ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಅವರು ‘ಮಹರಾಜ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ರಿಲೀಸ್ಗೆ ರೆಡಿ ಇದೆ. ಇದರ ಜೊತೆಗೆ ‘ವೇದಾ’ ಸಿನಿಮಾ ಮಾಡುತ್ತಿದ್ದಾರೆ.
ಇದನ್ನೂ ಓದಿ: ‘ಜಾನ್ ಅಬ್ರಹಾಂ ನನ್ನ ಮೊದಲ ಮತ್ತು ಏಕೈಕ ಆಯ್ಕೆ’; ಪಠಾಣ್ ನಿರ್ದೇಶಕ ಸಿದ್ಧಾರ್ಥ ಆನಂದ್
ಜಾನ್ ಅಬ್ರಹಾಂ ಸಿನಿಮಾಗಳಲ್ಲಿ ಭರ್ಜರಿ ಆ್ಯಕ್ಷನ್ ಇರುತ್ತದೆ. ಅದೇ ರೀತಿ ‘ವೇದಾ’ ಚಿತ್ರದಲ್ಲೂ ಜಾನ್ ಆ್ಯಕ್ಷನ್ ಮೆರೆದಿದ್ದಾರೆ. ಬಾಲಿವುಡ್ನಲ್ಲಿ ಇತ್ತೀಚೆಗೆ ಹಲವು ಸಿನಿಮಾಗಳು ಗೆಲುವು ಕಾಣುತ್ತಿವೆ. ಹೀಗಾಗಿ, ‘ವೇದಾ’ ಸಿನಿಮಾ ಮೂಲಕ ಅವರು ಗೆಲುವು ಕಾಣುವ ನಿರೀಕ್ಷೆಯಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ