
ಬಾಲಿವುಡ್ ನಟ ಜಾನ್ ಅಬ್ರಾಹಂ (John Abraham) ಅವರು ಸುರ ಸುಂದರಾಂಗ. ಕಟ್ಟುಮಸ್ತಾದ ದೇಹದ ಮೂಲಕ ಅವರು ಎಲ್ಲರ ಗಮನ ಸೆಳೆಯುತ್ತಾರೆ. ‘ಧೂಮ್’ ರೀತಿಯ ಸಿನಿಮಾಗಳಿಂದ ಅವರು ಪಡೆದ ಜನಪ್ರಿಯತೆ ಅಪಾರ. ಜಾನ್ ಅಬ್ರಾಹಂ ರೀತಿ ಬಾಡಿ ಬಿಲ್ಡ್ ಮಾಡಬೇಕು ಎಂಬುದು ಎಷ್ಟೋ ಜನರ ಕನಸು. ಆದರೆ ಈಗ ಒಂದು ಶಾಕಿಂಗ್ ವಿಷಯ ಗೊತ್ತಾಗಿದೆ. ಜಾನ್ ಅಬ್ರಹಾಂ ಅವರು ಮೊದಲಿನ ರೀತಿ ಇಲ್ಲ. ಅವರು ಸಿಕ್ಕಾಪಟ್ಟೆ ಬದಲಾಗಿದ್ದಾರೆ. ಹೆಚ್ಚು ಕಡಿಮೆ ಗುರುತೇ ಸಿಗದ ರೀತಿಯಲ್ಲಿ ಅವರು ಬದಲಾಗಿದ್ದಾರೆ. ಅವರ ಹೊಸ ಫೋಟೋ (John Abraham New Photo) ವೈರಲ್ ಆಗಿದ್ದು, ಅಭಿಮಾನಿಗಳಿಗೆ ಶಾಕ್ ಆಗಿದೆ.
ಜಾನ್ ಅಬ್ರಾಹಂ ಅವರು ಇತ್ತೀಚೆಗೆ ತಮ್ಮ ತಂಡದ ಸದಸ್ಯರ ಜೊತೆ ತೆಗೆದುಕೊಂಡ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಮೊದಲು ಕಟ್ಟುಮಸ್ತಾಗಿದ್ದ ಅವರು ಈಗ ಸಿಕ್ಕಾಪಟ್ಟೆ ಸ್ಲಿಮ್ ಆಗಿದ್ದಾರೆ. ಕ್ಲೀನ್ ಶೇವ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಮುಖ ಸಂಪೂರ್ಣ ಬಾಡಿಹೋದಂತೆ ಕಾಣಿಸಿದೆ. ಇದರಿಂದ ಅಭಿಮಾನಿಗಳಿಗೆ ಚಿಂತೆ ಆಗಿದೆ.
ಅನಾರೋಗ್ಯದ ಕಾರಣದಿಂದ ಜಾನ್ ಅಬ್ರಾಹಂ ಅವರಿಗೆ ಈ ರೀತಿ ಆಗಿರಬಹುದಾ ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ವೈರಲ್ ಆಗಿರುವ ಫೋಟೋಗೆ ಹಲವರು ಕಮೆಂಟ್ ಮಾಡಿದ್ದು, ‘ಅಯ್ಯೋ.. ಜಾನ್ ಅಬ್ರಾಹಂ ಅವರಿಗೆ ಏನಾಗಿದೆ? ಯಾಕೆ ಈ ರೀತಿ ಕಾಣುತ್ತಿದ್ದಾರೆ. ಗುರುತೇ ಸಿಗುತಿಲ್ಲ. ಇದು ಜಾನ್ ಅಬ್ರಾಹಂ ಅಂತ ನಂಬೋಕೆ ಆಗುತ್ತಿಲ್ಲ’ ಎಂದು ಅಭಿಪ್ರಾಯ ತಿಳಿಸಿದ್ದಾರೆ.
ಕೆಲವರು ಜಾನ್ ಅಬ್ರಾಹಂ ಪರವಾಗಿ ಕಮೆಂಟ್ ಮಾಡಿದ್ದಾರೆ. ‘ಅವರಿಗೆ ಈಗ 53 ವರ್ಷ ವಯಸ್ಸು. ಈ ವಯಸ್ಸಿನಲ್ಲಿ ಹೀಗೆ ಕಾಣಿಸುವುದು ಸಹಜ. ವಯಸ್ಸಿಗೆ ತಕ್ಕಂತೆ ಅವರ ಮುಖದಲ್ಲಿ ಸುಕ್ಕು ಕಾಣಿಸಿದೆ. ಅವರನ್ನು ಜಡ್ಜ್ ಮಾಡಬೇಡಿ. ಲವ್ ಯೂ ಜಾನ್’ ಎಂಬಿತ್ಯಾದಿ ಕಮೆಂಟ್ಗಳು ಬಂದಿವೆ. ಇದು ರಿಯಲ್ ಫೋಟೋ ಹೌದೋ ಅಲ್ಲವೋ ಎಂಬ ಅನುಮಾನ ಕೂಡ ಕೆಲವರಿಗೆ ಮೂಡಿದೆ.
ಇದನ್ನೂ ಓದಿ: ‘ನನ್ನ ಕೆಣಕಲು ಪತ್ರಕರ್ತರನ್ನು ಕಳಿಸಲಾಗಿತ್ತು’: ಶಾಕಿಂಗ್ ವಿಚಾರ ತಿಳಿಸಿದ ಜಾನ್ ಅಬ್ರಾಹಂ
53ನೇ ವಯಸ್ಸಿನಲ್ಲಿ ಅನೇಕ ಹೀರೋಗಳು ತುಂಬಾ ಫಿಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಜಾನ್ ಅಬ್ರಾಹಂ ಅವರು ಈ ರೀತಿ ಬದಲಾಗಿರುವುದು ಯಾಕೆ ಎಂಬ ಪ್ರಶ್ನೆ ಅಭಿಮಾನಿಗಳ ತಲೆಯಲ್ಲಿ ಕೊರೆಯುತ್ತಿದೆ. ಸಿನಿಮಾದ ಸಲುವಾಗಿ ಅವರು ಈ ರೀತಿ ಟ್ರಾನ್ಸ್ಫರ್ಮೇಷನ್ ಮಾಡಿಕೊಂಡಿರಬಹುದು ಎಂದು ಕೂಡ ಕೆಲವರು ಊಹಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.