‘ನಿಮ್ಮನ್ನು ಸುಮ್ಮನೆ ಬಿಡಲ್ಲ’: ವರದಿಗಾರನಿಗೆ ನೇರವಾಗಿ ಎಚ್ಚರಿಕೆ ನೀಡಿದ ಜಾನ್ ಅಬ್ರಾಹಂ
‘ವೇದಾ’ ಸಿನಿಮಾದಲ್ಲಿ ಜಾನ್ ಅಬ್ರಾಹಂ, ಶಾರ್ವರಿ ವಾಘ್ ಮುಂತಾದ ನಟರು ಅಭಿನಯಿಸಿದ್ದಾರೆ. ಆ.15ರಂದು ತೆರೆಕಾಣಲಿರುವ ಈ ಸಿನಿಮಾ ಕೂಡ ಜಾನ್ ಅಬ್ರಾಹಂ ಅವರ ಹಳೇ ಸಿನಿಮಾಗಳ ರೀತಿಯೇ ಇದೆ ಎಂದು ವರದಿಗಾರರೊಬ್ಬರು ಟೀಕಿಸಿದ್ದಾರೆ. ಸಿನಿಮಾ ನೋಡುವುದಕ್ಕೂ ಮುನ್ನವೇ ಈ ರೀತಿ ಟ್ರೋಲ್ ಮಾಡಿದ್ದನ್ನು ಜಾನ್ ಅಬ್ರಾಹಂ ಅವರು ಸಹಿಸಿಕೊಂಡಿಲ್ಲ. ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಹಲವು ತಿಂಗಳ ಬಳಿಕ ನಟ ಜಾನ್ ಅಬ್ರಹಾಂ ಅವರು ದೊಡ್ಡ ಪರದೆ ಮೇಲೆ ದರ್ಶನ ನೀಡಲು ಬರುತ್ತಿದ್ದಾರೆ. ಅವರು ನಟಿಸಿದ ‘ವೇದಾ’ ಸಿನಿಮಾ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಯಿತು. ನಿಖಿಲ್ ಅಡ್ವಾಣಿ ಅವರು ‘ವೇದಾ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಟ್ರೇಲರ್ ರಿಲೀಸ್ ವೇಳೆ ಜಾನ್ ಅಬ್ರಹಾಂ ಅವರಿಗೆ ಕೆಲವು ನಿಷ್ಠುರವಾದ ಪ್ರಶ್ನೆಗಳು ಎದುರಾದವು. ಅವುಗಳಿಗೆ ಉತ್ತರಿಸುವಾಗ ಜಾನ್ ಅಬ್ರಾಹಂ ಅವರು ಕೋಪಗೊಂಡರು. ಕಿರಿಕಿರಿ ಆಗುವಂತಹ ಪ್ರಶ್ನೆ ಕೇಳಿದ ವರದಿಗಾರನಿಗೆ ಜಾನ್ ಅಬ್ರಹಾಂ ಅವರು ಎಚ್ಚರಿಕೆ ನೀಡಿದರು. ಅಲ್ಲಿ ನಡೆದಿದ್ದು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ..
ಜಾತಿ ಪಿಡುಗಿನ ಬಗ್ಗೆ ‘ವೇದಾ’ ಸಿನಿಮಾದಲ್ಲಿ ತೋರಿಸಲಾಗುವುದು. ಟ್ರೇಲರ್ನಲ್ಲಿ ಕಥೆ ಬಗ್ಗೆ ಸುಳಿವು ನೀಡಲಾಗಿದೆ. ಆದರೆ ಈ ಸಿನಿಮಾದಲ್ಲಿ ಜಾನ್ ಅಬ್ರಹಾಂ ಅವರು ಎಂದಿನಂತೆ ಆ್ಯಕ್ಷನ್ ಮೆರೆಯಲಿದ್ದಾರೆ. ಭರ್ಜರಿಯಾದ ಫೈಟಿಂಗ್ ಸೀನ್ ಮೂಲಕ ಅವರು ಜನರನ್ನು ರಂಜಿಸಲು ಬರುತ್ತಿದ್ದಾರೆ. ಇದು ಕೂಡ ಅವರ ಹಳೇ ಸಿನಿಮಾಗಳ ರೀತಿಯೇ ಇದೆ ಎಂಬುದು ವರದಿಗಾರರೊಬ್ಬರ ಅಭಿಪ್ರಾಯವಾಗಿತ್ತು.
ಇದನ್ನೂ ಓದಿ: Vedaa Trailer: ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದ ಜಾನ್ ಅಬ್ರಾಹಂ, ಶಾರ್ವರಿ ವಾಘ್
‘ಮಾಡಿದ್ದನ್ನೇ ಮಾಡುತ್ತೀರಲ್ಲ.. ಹೊಸದಾಗಿ ಬೇರೆ ಏನಾದರೂ ಮಾಡಿ’ ಎಂದು ಬಹಳ ಉಡಾಫೆಯಿಂದ ವರದಿಗಾರ ಪ್ರಶ್ನೆ ಕೇಳಿದ್ದಾರೆ. ಅದರಿಂದ ಜಾನ್ ಅಬ್ರಾಹಂ ಅವರಿಗೆ ಸಿಟ್ಟು ಬಂತು. ‘ನೀವು ಸಿನಿಮಾ ನೋಡಿದ್ದೀರಾ? ನಾನು ಮೂರ್ಖರನ್ನು ಮತ್ತು ಕೆಟ್ಟ ಪ್ರಶ್ನೆಗಳನ್ನು ಖಂಡಿಸಬಹುದಾ’ ಎಂದು ಜಾನ್ ಅಬ್ರಾಹಂ ಅವರು ಗರಂ ಆದರು. ಅಲ್ಲದೇ ಈ ಸಿನಿಮಾ ಡಿಫರೆಂಟ್ ಆಗಿದೆ ಎಂದು ಹೇಳಿದರು.
#JohnAbraham calls a journalist “Idiot” for asking a bad question at the #Vedaa trailer event. pic.twitter.com/CyqfXu5D11
— $@M (@SAMTHEBESTEST_) August 1, 2024
‘ಈ ಸಿನಿಮಾ ಭಿನ್ನವಾಗಿದೆ ಅಂತ ನಾನು ನೇರವಾಗಿ ಹೇಳುತ್ತೇನೆ. ನನ್ನ ಪ್ರಕಾರ ನಾನು ಈ ಚಿತ್ರದಲ್ಲಿ ಗಾಢವಾಗಿ ಅಭಿನಯಿಸಿದ್ದೇನೆ. ನೀವಂತೂ ಈ ಸಿನಿಮಾ ನೋಡಿಲ್ಲ. ಕೇವಲ ಟ್ರೇಲರ್ ನೋಡಿದ್ದೀರಿ ಅಷ್ಟೇ. ಮೊದಲು ನೀವು ಸಿನಿಮಾ ನೋಡಿ. ಆಮೇಲೆ ಜಡ್ಜ್ ಮಾಡಿ. ನಂತರ ನೀವು ಹೇಳಿದ್ದನ್ನು ನಾನು ಒಪ್ಪಿಕೊಳ್ಳುತ್ತೇನೆ. ಒಂದು ವೇಳೆ ನಿಮ್ಮ ಅಭಿಪ್ರಾಯ ತಪ್ಪಾಗಿದ್ದರೆ ನಾನು ನಿಮ್ಮನ್ನು ಸುಮ್ಮನೆ ಬಿಡಲ್ಲ’ ಎಂದು ಜಾನ್ ಅಬ್ರಾಹಂ ಅವರು ವರದಿಗಾರನಿಗೆ ಎಚ್ಚರಿಕೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.